ಮೊಸಳೆ ಪ್ರತ್ಯಕ್ಷ : ಜನರಲ್ಲಿ ಆತಂಕ

. ಮುದಗಲ್.ಆ.02- ಪಟ್ಟಣ ಸಮೀಪದ ಬೋಗಾಪೂರು ಜಮೀನಲ್ಲಿ ಮೊಸಳೆ ಪ್ರತ್ಯಕ್ಷಯಾಗಿದ್ದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.
ಸಾಮಾನ್ಯವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ,ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ.
ಲಿಂಗಸೂಗೂರು ತಾಲೂಕಿನ ಮುದಗಲ್ ಹೋಬಳಿಯ ಬೋಗಾಪುರ ಕೆರೆ ತುಂಬಿ ಹರಿಯುತ್ತಿದ್ದು,ಕೆರೆಯಲ್ಲಿ ಮೊಸಳೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಮೊಸಳೆಯೊಂದು ಕೆರೆ ನೀರಿನಿಂದ ಹೊರಬಂದು ಸ್ಥಳೀಯ ಜನರ ಆತಂಕವನ್ನು ಹೆಚ್ಚಿಸಿದೆ.
ಬೋಗಾಪುರ ಕೆರೆಯ ಸುತ್ತ ಮುತ್ತಲಿನ ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.ಅನ್ನದಾತರು ಜೀವ ಭಯದಲ್ಲಿ ಜಮೀನುಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಸ್ಥಳೀಯ ಜನರ ಆತಂಕವನ್ನು ದೂರ ಮಾಡುತ್ತಾರ ಕಾದು ನೋಡಬೇಕಾಗಿದೆ.
ಬೋಗಾಪೂರು ಗ್ರಾಮದ ಜಮೀನಲ್ಲಿ ಮೊಸಳೆ ಪ್ರತ್ಯಕ್ಷಯಾಗಿದ್ದು ಗಮನಕ್ಕೆ ಬಂದಿದ್ದು ಈ ಕೂಡಲೇ ಸಿಬ್ಬಂದಿ ಕಳಿಸುಲಾಗುತ್ತದೆಂದು ಲಿಂಗಸೂಗೂರ ಅರಣ್ಯ ಇಲಾಖೆ ಅಧಿಕಾರಿ ಎಸ್ ಕೆ ಕಾಂಬ್ಳೆ ತಿಳಿಸಿದರು.

Leave a Comment