ಮೊಯೀನ್ ಆಲಿ, ರಶೀದ್ ನಡೆಗೆ ಶ್ಲಾಘನೆ

ಹೊಸದಿಲ್ಲಿ : ರವಿವಾರ ನಡೆದ ರೋಚಕ ಐಸಿಸಿ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಎದುರು ಇಂಗ್ಲೆಂಡ್ ಐತಿಹಾಸಿಕ ವಿಜಯ ದಾಖಲಿಸಿದ ನಂತರದ ಸಂಭ್ರಮಾಚರಣೆಯನ್ನು ವೀಕ್ಷಿಸಿದ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಒಂದು ವಿಚಾರ ಗಮನಿಸಿ ಬಿಟ್ಟಿದ್ದರು.

ಇಂಗ್ಲೆಂಡ್ ತಂಡದ ಕಪ್ತಾನ ಇಯೋನ್ ಮೋರ್ಗನ್ ಅವರು ಟ್ರೋಫಿ ಮೇಲಕ್ಕೆತ್ತಿ ಹಿಡಿದಂತೆಯೇ ಶಾಂಪೇನ್ ಬಾಟಲಿಗಳನ್ನು ತೆರೆದು ಆಟಗಾರರ ಮೈಮೇಲೆ ಸಿಂಪಡಿಸಲು ಆರಂಭಿಸಿದ ತಕ್ಷಣ ಇಂಗ್ಲೆಂಡ್ ತಂಡದ ತಾರಾ ಆಟಗಾರರಾದ ಮೊಯೀನ್ ಆಲಿ ಹಾಗೂ ಆದಿಲ್ ರಶೀದ್ ಅಲ್ಲಿಂದ ಹೊರ ನಡೆಯುತ್ತಿರುವುದು ಹಲವರ ಕಣ್ಣಿಗೆ ಬಿದ್ದಿತ್ತು. ಈ ನಿರ್ದಿಷ್ಟ ಕ್ಷಣದ ವೀಡಿಯೊ ಕೂಡ ವೈರಲ್ ಆಗಿದೆ.

ಆ ಕ್ಷಣ ರಶೀದ್ ಅವರು ಆಲಿಯನ್ನು ದೂಡುತ್ತಾ ಸಾಗುತ್ತಿರುವುದೂ ಕಾಣಿಸಿದೆ. ಇಬ್ಬರೂ ಅವರ ಧಾರ್ಮಿಕ ನಂಬಿಕೆಗಳಿಗೆ ಇಂತಹ ಆಚರಣೆ ವಿರುದ್ಧವಾಗಿರುವುದರಿಂದ ತಮ್ಮ ನಂಬಿಕೆಗಳನ್ನು ಗೌರವಿಸಿ, ಸಂಭ್ರಮಾಚರಣೆಯಿಂದ ಹೊರ ನಡೆದಿರುವುದನ್ನು ನೋಡಿ ಹಲವು ಟ್ವಿಟ್ಟರಿಗರು ಅವರನ್ನು ಶ್ಲಾಘಿಸಿದ್ದಾರೆ.

Leave a Comment