ಮೊಬೈಲ್ ಸುಲಿಗೆಕೋರರ ಸೆರೆ

ಬೆಂಗಳೂರು, ಅ. ೨೧- ಕುಡಿತ, ಮೋಜಿಗಾಗಿ ಮೊಬೈಲ್ ಕಳವು ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಬಂಧಿಸಿರುವ ಬಸವನಗುಡಿ ಪೊಲೀಸರು, 2.25 ಲಕ್ಷ ರೂ. ಮೌಲ್ಯದ 15 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜೆಸಿ ರಸ್ತೆಯ ರಾಮಣ್ಣ ಗಾರ್ಡನ್‌ನ ನವೀನ್ ಜೋಸೆಫ್ ಹಾಗೂ ಸಿದ್ದಯ್ಯ ರಸ್ತೆಯ ವಿನೋಬಾ ನಗರದ ಶಿವಪ್ರಸಾದ್ ಅಲಿಯಾಸ್ ಶಿವ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ವಿವಿಧ ಕಂಪನಿಗಳ 2.25 ಲಕ್ಷ ರೂ. ಮೌಲ್ಯದ 15 ಮೊಬೈಲ್‌ಗಳನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಅವರು ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಹನುಮಂತನಗರದ – 2, ಬಸವನಗುಡಿಯ – 1 ಮೊಬೈಲ್ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿ ನವೀನ್ ಜೋಸೆಫ್, ಅಶೋಕ ನಗರದಲ್ಲಿ ಮೊಬೈಲ್ ಸುಲಿಗೆ ಮಾಡಿ, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು, ಮತ್ತೊಬ್ಬ ಆರೋಪಿ ಶಿವಪ್ರಸಾದ್ ಜೊತೆ ಸೇರಿ ಸುಲಿಗೆ ಮಾಡುತ್ತಿದ್ದ.
ಒಂಟಿಯಾಗಿ ಓಡಾಡುವವರು, ಬೈಕ್ ಸವಾರರನ್ನು ಅಡ್ಡಗಟ್ಟಿ, ಮೊಬೈಲ್ ಕಸಿಯುತ್ತಿದ್ದ ಆರೋಪಿಗಳು, ಪ್ರತಿರೋಧ ತೋರಿದವರ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಸವನಗುಡಿ ಪೊಲೀಸ್ ಇನ್ಸ್‌ಪೆಕ್ಟರ್ ಕೆಂಪೇಗೌಡ, ಮತ್ತವರ ಸಿಬ್ಬಂದಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Leave a Comment