ಮೊಬೈಲ್ ಶೋ ರೂಂ ಗೆ ಬೆಂಕಿ

ಬೆಂಗಳೂರು, ಸೆ. ೨- ಯಲಹಂಕದ ಪೈ ಇಂಟರ್ ನ್ಯಾಷನಲ್ ಮೊಬೈಲ್ ಶೋ ರೂಂ ಗೆ ಆಕಸ್ಮಿಕ ಬೆಂಕಿಬಿದ್ದು ಲಕ್ಷಾಂತರ ರೂ. ಗಳ ನಷ್ಟ ಸಂಭವಿಸಿದ ದುರ್ಘಟನೆ ನಿನ್ನೆ ರಾತ್ರಿ ನಡೆದಿದೆ.
ಪೈ ಇಂಟರ್ ನ್ಯಾಷನಲ್‌ನ ಕೆಳಮಹಡಿಯಲ್ಲಿರುವ ಮೊಬೈಲ್ ಶೋ ರೂಂ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಕಸ್ಮಿಕ ಬೆಂಕಿ ತಗುಲಿದ್ದು, ಸ್ವಲ್ಪದರಲ್ಲಿಯೇ ಬೆಂಕಿಯು ಇಡೀ ಮಹಡಿ ಆವರಿಸಿ ದಟ್ಟಹೊಗೆ ಹೊರಬರಲಾರಂಭಿಸಿದೆ.
ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದ ಎರಡು ವಾಹನಗಳು ಬೆಂಕಿ ನಂದಿಸಿದ್ದು, ಪ್ರದರ್ಶನಕ್ಕೆ ಇಟ್ಟಿದ್ದ ಮೊಬೈಲ್‌ಗಳು, ಪೀಠೋಪಕರಣಗಳು ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟುಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಲ್ಯಾಪ್‌ಟಾಪ್ ಕಳವು
ಜೀವನ್ ಭೀಮಾನಗರದ ಜೆಮಿನಿ ಶೋ ರೂಂ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದಿರುವ ದುಷ್ಕರ್ಮಿಗಳು ಲ್ಯಾಪ್‌ಟಾಪ್ ದೋಚಿ ಪರಾರಿಯಾಗಿದ್ದಾರೆ.
ನಿನ್ನೆ ಸಂಜೆ 6.40ರ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಿಸಿರುವ ಜೀವನ್ ಭೀಮಾನಗರ ಪೊಲೀಸರು, ದುಷ್ಕರ್ಮಿಗಳಿಗಾಗಿ ಜಾಲ ಬೀಸಿದ್ದಾರೆ.

Leave a Comment