ಮೊಬೈಲ್ ವೀಕ್ಷಣೆ: ಮಕ್ಕಳ ಕಣ್ಣಿಗೆ ತೊಂದರೆ

ಬೆಂಗಳೂರು,ಮೇ.೧೬-ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಮತ್ತು ಮೊಬೈಲ್ ಸ್ಕ್ರೀನ್ ಹೆಚ್ಚಾಗಿ ವೀಕ್ಷಿಸುವುದರಿಂದ ಮಕ್ಕಳಲ್ಲಿ ಕಣ್ಣಿನ ಅಲರ್ಜಿಗಳು ಹೆಚ್ಚಾಗುತ್ತಿದ್ದು, ಕಾರ್ನಿಯಾದಲ್ಲಿ ತೊಂದರೆ ಹಾಗೂ ಮಸುಕಾದ ದೃಷ್ಟಿಗೆ ಕಾರಣವಾಗುತ್ತಿದೆ ಎಂದು ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸ್ಥಿತಿಗೆ ಕೆರೋಕೊನಸ್ ಎಂದು ಕರೆಯಲಾಗುತ್ತಿದ್ದು, ಪ್ರೊಗ್ರೆಸಿವ್ ಕಣ್ಣಿನ ರೋಗವಾಗಿದೆ. ಇದರಿಂದ ಕಾರ್ನಿಯಾ ತೆಳುವಾಗಲಿದ್ದು, ಕೋನ್ ಮಾದರಿಯ ಆಕಾರಕ್ಕೆ ತಿರುಗಲು ಆರಂಭವಾಗುತ್ತದೆ. ಈ ಕೋನ್ ಆಕಾರ ಬೆಳಕಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.ಇದು ರೆಟಿನಾದೊಳಗೆ ಪ್ರವೇಶ ಮಾಡಿ ಮಕ್ಕಳು ಸರಿಯಾಗಿ ನೋಡುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ & ರಿಫ್ರಾಕ್ಟಿವ್ ಸರ್ಜರಿಯ ಸೀನಿಯರ್ ಕನ್ಸಲ್ಟೆಂಟ್ ಡಾ.ರಘು ನಾಗರಾಜು ಹೇಳಿದ್ಧಾರೆ.
“ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕಣ್ಣಿನ ಅಲರ್ಜಿಗಳು ಹೆಚ್ಚಾಗುತ್ತಿವೆ. ಕೃತಕ ಬೆಳಕು, ಕಂಪ್ಯೂಟರ್ ಮತ್ತು ಮೊಬೈಲ್ ಸ್ಕ್ರೀನ್‌ಗಳನ್ನು ಹೆಚ್ಚಾಗಿ ಬಳಸುವುದರಿಂದ ಒಣ ಕಣ್ಣಿಗೆ ಕಾರಣವಾಗಲಿದೆ. ಡ್ರೈನೆಸ್ ಮತ್ತು ಉರಿ ಉಂಟಾಗುವುದರಿಂದ ಕಣ್ಣಿನ ಅಲರ್ಜಿಗೆ ಕಾರಣವಾಗುತ್ತವೆ ಎಂದು ತಿಳಿಸಿದ್ದಾರೆ.
ಕೆಟರ್‍ಯಾಕ್ಟ್ ಅಕ್ಯುಲೋಪ್ಲಾಸ್ಟಿಯ ಸೀನಿಯರ್ ಕನ್ಸಲ್ಟೆಂಟ್, ಮೆಡಿಕಲ್ ಡೈರೆಕ್ಟರ್ ಡಾ.ರವಿ ಮಾತನಾಡಿ, “ಭಾರತದಲ್ಲಿ ಪ್ರತಿ ೧,೫೦೦ ಮಕ್ಕಳಲ್ಲಿ ಒಂದು ಮಗು ಕೆರಟೋಕೊನಸ್‌ನಿಂದ ಬಳಲುತ್ತಿದೆ. ೧೦ ರಿಂದ ೧೫ ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ೮ ವರ್ಷಕ್ಕಿಂತ ಕಡಿಮೆ ವಯಸಿನ ಮಕ್ಕಳಲ್ಲಿ ಕಣ್ಣಿನ ಅಲರ್ಜಿ ಗಂಭೀರ ಸ್ವರೂಪಕ್ಕೆ ತಿರುಗಿದ್ದರೆ ಅದು ಕೆರಟೊಕೊನಸ್‌ಗೆ ತಿರುಗುತ್ತದೆ ಎಂದು ಹೇಳಿದ್ದಾರೆ.

Leave a Comment