ಮೊಬೈಲ್ ಗೀಳಿನಿಂದ ದೂರವಿರಿ – ಮಲಕಾರಿ

ಧಾರವಾಡ ಜ.21 – ದೇಶಕ್ಕೆ ಭದ್ರ ಬುನಾದಿ ಹಾಕುವ ಹೊಣೆಗಾರಿಕೆ ಹಾಗೂ ಜವಾಬ್ದಾರಿ ಹೊತ್ತಿರುವ ನಮ್ಮ ಇಂದಿನ ಯುವ ಜನತೆ ಮೊಬೈಲನ ಗೀಳು ಹಾಗೂ ವ್ಯಾಮೋಹಕ್ಕೆ ಬಲಿಯಾಗಿ ನಮ್ಮ ಹಿರಿಯರು ಪೂರ್ವಜರು ನಮಗೆ ಬಳುವಳಿಯಾಗಿ ಕೊಟ್ಟು ಹೋದಂತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಕೈಹಾಕದಿರುವುದು ದುರ್ದೈವದ ಸಂಗತಿ ಎಂದು ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕರ್ನಾಟಕ ಕುರುಬರ ಸಂಘದ ರಾಜ್ಯ ನಿರ್ದೇಶಕರಾದ ಬಸವರಾಜ ಮಲಕಾರಿಯವರು ಕಳವಳ ವ್ಯಕ್ತಪಡಿಸಿದರು. ಧಾರವಾಡ ತಾಲ್ಲೂಕಿನ ಮುಗದ ಗ್ರಾಮದಲ್ಲಿ ಸದ್ಗುರು ನಿಜಗುಣಿ ಶಿವಯೋಗಿಗಳು ಧಾರ್ಮಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತ ಪೌರಾಣಿಕ ನಾಟಕಗಳಲ್ಲಿ ಬರುವಂತಹ ಪಾತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯ ಎಂದರು.
ಭಾರತ ದೇಶದ ವಿವಿಧತೆಗಳಲ್ಲಿ ಏಕತೆ ಎನ್ನುವಂತೆ ಇಂತಹ ಕಲೆ,ಸಾಹಿತ್ಯ, ಸಾಂಸ್ಕೃತಿ, ಉಡುಗೆ, ತೊಡುಗೆ, ವೇಷ, ಭೂಷಣ, ಆಚಾರ, ವಿಚಾರಗಳಲ್ಲಿ ಜಗತ್ತಿನಲ್ಲೇ ವಿಭಿನ್ನವಾಗಿದೆ ಹೀಗಾಗಿ ಭಾರತ ದೇಶಕ್ಕೆ ಜಗತ್ತಿನ ಯಾವ ರಾಷ್ಟ್ರಗಳು ಸರಸಾಟಿಯಾಗಲಾರವು ಇಂತಹ ಒಳ್ಳೆಯ ಕಾರ್ಯಕ್ರಮ ಮಾಡಿದ ಸಮಸ್ತ ಮುಗದ ಗ್ರಾಮದ ಗುರು ಹಿರಿಯರಿಗೆ ಹಾಗೂ ಈ ಕಾರ್ಯಕ್ರಮದ ಆಯೋಜಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದರು.
ಮುಖಂಡರಾದ ಹಾಗೂ ಹಿರಿಯರಾದ ಕಲ್ಲಪ್ಪ ಹಟ್ಟಿ, ಪೀರಜಾದೆ, ಕಲ್ಮೇಶ ಬೇಲೂರ, ಜಿಲ್ಲಾ ಯುವ ಕುರುಬರ ಸಂಘದ ಅಧ್ಯಕ್ಷ ರಮೇಶ ನಲವಡಿ, ಶಿವಲಿಂಗಪ್ಪ ಚಿಕ್ಕಣ್ಣವರ, ಹನಮಂತ, ನಾಗಪ್ಪ, ಗ್ರಾ ಪ ಅಧ್ಯಕ್ಷ ಬಸವರಾಜ, ಪ್ರವೀಣ ಗೋಕಾವಿ, ಜುಂಜಪ್ಪ ಕಂಬಳಿ ಹಾಗೂ ಮುಗದ ಗ್ರಾಮದ ಹಿರಿಯರು ಮತ್ತು ಕಲಾ ಪ್ರೇಮಿಗಳು ಉಪಸ್ಥಿತರಿದ್ದರು.

Leave a Comment