ಮೊಬೈಲ್‌ಗಾಗಿ ವಿದ್ಯಾರ್ಥಿನಿ ನೇಣಿಗೆ ಶರಣು

ಬೆಂಗಳೂರು, ಅ. ೧೦- ಸ್ನೇಹಿತರು ಕೊಟ್ಟಿದ್ದ ಮೊಬೈಲ್‌ನ್ನು ಪೋಷಕರು ಕಿತ್ತುಕೊಂಡಿದ್ದರಿಂದ ನೊಂದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ದುರ್ಘಟನೆ ರಾಜಾಜಿನಗರದ 4ನೇ ಬ್ಲಾಕ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ರಾಜ್‌ಕುಮಾರ್ ರಸ್ತೆಯ ಠ್ಯಾಗೂರ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬೆಸ್ಲಿ (16) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಬೆಸ್ಲಿಗೆ ಸ್ನೇಹಿತರು ಬೇಸಿಕ್ ಸೆಟ್ ಮೊಬೈಲ್‌ನ್ನು ನೀಡಿದ್ದರು.
10ನೇ ತರಗತಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳದೆ ಸ್ನೇಹಿತರು ಕೊಟ್ಟ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿರುವುದನ್ನು ನೋಡಿದ ಪೋಷಕರು ಮೊಬೈಲ್‌ನ್ನು ಕಿತ್ತುಕೊಂಡಿದ್ದರು.
ಇದರಿಂದ ನೊಂದ ಬೆಸ್ಲಿ, ಅರ್ಚಕರಾಗಿದ್ದ ತಂದೆ ಪಳನಿರಾಜ್ ಹಾಗೂ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿಯಾಗಿದ್ದ ತಾಯಿ ಕೆಲಸಕ್ಕೆ ಹೋಗಿದ್ದಾಗ ನಿನ್ನೆ ಸಂಜೆ ನೇಣಿಗೆ ಶರಣಾಗಿದ್ದಾಳೆ. ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Comment