ಮೊದಲ ಟೆಸ್ಟ್‌ನಲ್ಲಿ ಭಾರತದ ಬಿಗಿ ಹಿಡಿತ

ನಾರ್ಥ್‌ಸೌಂಡ್, (ಅಂಟಿಗಾ) ಆ ೨೫-ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರೆಹಾನೆಯವರ ಅಜೇಯ ಅರ್ಧಶತಕದ ನೆರವಿನಿಂದ ೧೮೫ ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದೆ. ಒಟ್ಟಾರೆ ೨೬೦ರನ್ ಮುನ್ನಡೆ ಗಳಿಸುವ ಮೂಲಕ ಸುಸ್ಥಿತಿಯಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬೆನ್ನಿಗೆ ನಿಂತ ಅಂಜಿಕ್ಯಾ ರೆಹಾನೆ, ಎರಡನೇ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಅಷ್ಟೇ ಅಲ್ಲ ನಾಯಕ ವಿರಾಟ್ ಕೊಹ್ಲಿ ಕೂಡ ತಾಳ್ಮೆಯ ಆಟ ಪ್ರದರ್ಶಿಸಿ ವಿಂಡೀಸ್ ಬೌಲರ್‌ಗಳಿಗೆ ಬೆವರಿಳಿಸಿದ್ದಾರೆ.
ರೆಹಾನೆ ೧೭ ರನ್‌ಗಳಿಸಿದ್ದ ಸಂದರ್ಭದಲ್ಲಿ ಜಾನ್ ಕ್ಯಾಂಪೆಬೆಲ್ ಕ್ಯಾಚ್‌ನ್ನು ಕೈಚೆಲ್ಲಿದರು. ಇದರ ಸಂಪೂu ಲಾಭ ಪಡೆದ ರೆಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ೧೯ ನೇ ಅರ್ಧ ಶತಕ ಬಾರಿಸಿದರು.
೧೧೧ ಎಸೆತಗಳನ್ನು ಎದುರಿಸಿರುವ ವಿರಾಟ್ ಕೊಹ್ಲಿ ೫೧ ರನ್‌ಗಳಲ್ಲಿ ಕೇವಲ ಎರಡು ಬೌಂಡರಿ ಮಾತ್ರ ಬಾರಿಸಿರುವುದು ವಿಶೇಷ. ಯಾವಾಗಲೂ ಆಕ್ರಮಣಕಾರಿ ಆಟವಾಡುವ ಕೊಹ್ಲಿ ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಇಷ್ಟೊಂದು ತಾಳ್ಮೆಯ ಆಟವಾಡಿ ಇತರ ಆಟಗಾರರಿಗೆ ಮಾದರಿಯಾಗಿದ್ದಾರೆ. ಮತ್ತೊಂದೆಡೆ ೧೪೦ ಎಸೆತಗಳನ್ನು ಎದುರಿಸಿದರುವ ರೆಹಾನ್ ಗಳಿಸಿರುವ ೫೩ ರನ್‌ಗಳಲ್ಲಿ ಕೇಮಲ ಮೂರು ಬೌಂಡರಿ ಮಾತ್ರ ಬಾರಿಸಿದ್ದಾರೆ. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ ೪೧.೪ ಓವರ್‌ಗಳಲ್ಲಿ ೧೦೩ ರನ್ ಕಲೆಹಾಕಿ ತಂಡವನ್ನು ಸುಸ್ಥಿತಿಯತ್ತ ಕೊಂಡೊಯ್ಯಲು ಪ್ರಮುಖ ಪಾತ್ರ ವಹಿಸಿದ್ದಾರೆ.
ಮಾಯಾಂಕ್ ಅಗರ್‌ವಾಲ್ ೧೬ ರನ್‌ಗಳಿಸಿ ರೋಸ್ಟ ನ್ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಆನಂತರ ಕೆ.ಎಲ್ .ರಾಹುಲ್ ೩೮ ಚೇತೇಶ್ವರ ಪೂಜಾರ ೨೫ ರನ್‌ಗಳಿಸಿ ಎರಡನೇ ವಿಕೆಟ್‌ಗೆ ೪೩ ರನ್ ಸೇರಿಸಿದರು. ಈ ಹಂತದಲ್ಲಿ ಭಾರತ ೨ನೇ ಇನ್ನಿಂಗ್ಸ್‌ನಲ್ಲಿ ೮೧ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ನಾಲ್ಕನೇ ವಿಕೆಟ್‌ಗೆಇ ಕೊಹ್ಲಿ ಮತ್ತು ರೆಹಾನೆ ಕ್ರೀಸ್ ಬಳಿ ಗಟ್ಟಿಯಾಗಿ ನಿಂತು ವಿಂಡೀಸ್ ದಾಳಿಗೆ ದಿಟ್ಟ ಉತ್ತರ ನೀಡಿದರು. ರೋಸ್ಟನ್ ಚೇಸ್ ೨ ಹಾಗೂ ಕೆರ್‌ಮರ್ ರೋಚ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ೨೨೨ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಎರಡು ದಿನದ ಆಟ ಬಾಕಿ ಉಳಿದಿದ್ದು, ಈ ಪಂದ್ಯ ಅಪಾರ ಕುತೂಹಲ ಕೆರಳಿಸಿದೆ,

Leave a Comment