ಮೊದಲು ರಸ್ತೆ ಸರಿ ಮಾಡಿಸಿ ಮುಖ್ಯಮಂತ್ರಿಗಳೆ: ನಟಿ ಸೋನು ಗೌಡ

ಕೇಂದ್ರ ಸರ್ಕಾರದ ಹೊಸ ಟ್ರಾಫಿಕ್ ನಿಯಮ ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ಹೆಚ್ಚು ದಂಡ ವಸೂಲಿ ಮಾಡುತ್ತಿರುವ ಸರ್ಕಾರದ ವಿರುದ್ಧ ಜನಸಾಮಾನ್ಯರು ಅಸಮಾದಾನ ಹೊರಹಾಕುತ್ತಿದ್ದಾರೆ. ಟ್ರಾಫಿಕ್ ನಿಯಮ ಬ್ರೇಕ್ ಮಾಡಿದ್ರೆ ಸಾವಿರ ರೂಪಾಯಿಗಳು ದಂಡ ತೆರಬೇಕಾಗುತ್ತೆ.

ಹೊಸ ಟ್ರಾಫಿಕ್ ನಿಯಮದ ಬಗ್ಗೆ ನಟಿ ಸೋನು ಗೌಡ ರೊಚ್ಚಿಗೆದಿದ್ದಾರೆ. ಮೊದಲು ರಸ್ತೆಗಳನ್ನು ಸರಿ ಮಾಡಿಸಿ ನಂತರ ಹೆಚ್ಚು ಹೆಚ್ಚು ಹಣ ವಸೂಲಿ ಮಾಡುವಿರಂತೆ ಎಂದು ಕರ್ನಾಟಕ ಸಿಎಂ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸೋನು ಗೌಡ ” ಹೆಚ್ಚು ಹೆಚ್ಚು ದಂಡ ವಸೂಲಿ ಮಾಡುವ ಮೊದಲು ಹಾಳಾಗಿರುವ ರಸ್ತೆಯಗಳನ್ನು ಸರಿಪಡಿಸುವ ಬಗ್ಗೆ ಖಚಿತ ಮಾಡಿ ಮುಖ್ಯಮಂತ್ರಿಗಳೆ. ಜನ ಸಾಮಾನ್ಯರು ಕಷ್ಟಪಟ್ಟು ದುಡಿದ ಹಣವಿದು. ದಯವಿಟ್ಟು ಅವರ ಜೀವನವನ್ನು ಹೀಗೆ ಹಾಳು ಮಾಡಬೇಡಿ” ಎಂದು ಮನವಿ ಮಾಡಿಕೊಳ್ಳುವ ಜೊತೆಗೆ ಗುಂಡಿ ಬಿದ್ದಿರುವ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರರು ಬಿದ್ದಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

ಈ ಹಿಂದೆ ಕೂಡ ನಟಿ ಸೋನು ಗೌಡ ಮತ್ಸ್ಯ ಕನ್ಯೆ ವೇಷ ತೊಟ್ಟು ಬಿಬಿಎಂಪಿ ವಿರುದ್ಧ ಪ್ರತಿಭಟನೆ ಮಾಡಿ ಜನರ ಗಮನ ಸೆಳೆದಿದ್ದರು. ಬಾದಲ್ ನಂಜುಂಡ ಸ್ವಾಮಿ ಹಲವು ವರ್ಷಗಳಿಂದ ರಸ್ತೆ ಗುಂಡಿಗಳ ಸುತ್ತ ಕಲಾತ್ಮಕ ಚಿತ್ರಗಳನ್ನು ಬಿಡಿಸಿ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಪಾಲಿಕೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪ್ರತಿಭಟನೆಗೆ ಸೋನು ಗೌಡ ಕೂಡ ಸಾಥ್ ನೀಡಿದ್ದರು. ಈಗ ಹೊಸ ಟ್ರಾಫಿಕ್ ನಿಯಮದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ್ದಾರೆ.

Leave a Comment