ಮೊಟ್ಟೆಯಲ್ಲಿ ಬಿಳಿಹುಳು: ಸಾರ್ವಜನಿಕರ ಆಕ್ರೋಶ

ರಾಯಚೂರು.ಮೆ.೧೬- ನಗರದ ಅಶೋಕ್ ಡಿಪೋ ಅಂಗನವಾಡಿ ಕೇಂದ್ರದ ಮೊಟ್ಟೆಯಲ್ಲಿ ಹುಳು ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಕಳೆದ ೧೫ ದಿನಗಳ ಹಿಂದೆ ಮೊಟ್ಟೆಗಳು ಅಂಗನವಾಡಿ ಕೇಂದ್ರಕ್ಕೆ ಬಂದಿವೆ ಆದರೆ ಅಂಗನವಾಡಿ ಕಾರ್ಯಕರ್ತೆಯು ರಜೆ ಎಂದು ಹೇಳಿ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಮೊಟ್ಟೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಎರಡು ದಿನಗಳ ಹಿಂದೆ ಮೊಟ್ಟೆಯನ್ನು ಗರ್ಭಿಣಿಯರಿಗೆ ಮಕ್ಕಳಿಗೆ ನೀಡಿದ್ದಾರೆ. ಇಂದು ಅವುಗಳನ್ನು ಮನೆಯಲ್ಲಿ ತೆಗೆದು ನೋಡಿದಾಗ ಮೊಟ್ಟೆಯಲ್ಲಿಬಿಳಿ ಹುಳು ಕಾಣಿಸಿಕೊಂಡಿವೆ. ಇದನ್ನು ಕಂಡ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಪ್ರತಿ ದಿನವೂ ಮೊಟ್ಟೆಯನ್ನು ವಿತರಿಸುತ್ತೇನೆ ಮೊಟ್ಟೆ ಬಂದು ೧೫ ದಿನ ಕಳೆದರು ರಜೆಗಳಿದ್ದ ಕಾರಣ ಮೊಟ್ಟೆಯನ್ನು ಕೊಡಲಾಗಲಿಲ್ಲ. ಮೊಟ್ಟೆಯಲ್ಲಿ ಹುಳವಿದ್ದದ್ದು ನಾನು ನೋಡಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಅನಸೂಯ ಹೇಳುತ್ತಿದ್ದಾರೆ.

Leave a Comment