ಮೈಸೂರ್ ಟಾರ್ಪಲಿನ್ಸ್ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ

ಮೈಸೂರು, ಮೇ. 19- ಮೈಸೂರ್ ಟಾರ್ಪಲಿನ್ಸ್ ವತಿಯಿಂದ ಪ್ರತಿವರ್ಷ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಚಿತ್ರ ನಟಿ ಸುಧಾರಾಣಿ ತಿಳಿಸಿದರು.
ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಅವರು ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ದಕ್ಷಿಣ ಭಾರತದಲ್ಲೇ ಮನೆಮಾತಾಗಿರುವ ಮೈಸೂರು ಟಾರ್ಪಲಿನ್ಸ್ ಬ್ಯಾಂಡ್ ಅಂಬ್ಯಾಸಿಡರ್ ಆಗಿದ್ದೇನೆ. 48ವರ್ಷಗಳಿಂದ ಮೈಸೂರ್ ಟಾರ್ಪಲಿನ್ಸ್ ವತಿಯಿಂದ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರಲಾಗಿದೆ. ಈ ಬಾರಿ ಎಸ್.ಎಲ್.ಸಿಯಲ್ಲಿ ಶೇ90 ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗಿದೆ. ನಾನು ಚಿಕ್ಕವಳಾಗಿದ್ದನಿಂದಲೂ ಈ ಬ್ರ್ಯಾಂಡಿನ ಬ್ಯಾಗುಗಳನ್ನೇ ಖರೀದಿಸುತ್ತಿದ್ದೆ, ಇವುಗಳು ಗುಣಮಟ್ಟದಿಂದ ಕೂಡಿದ್ದಾಗಿವೆ. ಗ್ರಾಹಕರ ಹಣಕ್ಕೆ, ಅಭಿರುಚಿಗೆ ತಕ್ಕಂತೆ ಕಡಿಮೆ ಬೆಲೆಯಲ್ಲಿ ಬ್ಯಾಗುಗಳು ಮಾರಟವಾಗುತ್ತಿವೆ ಎಂದು ಹೇಳಿದರು.
ಸಂಸ್ಥೆಯ ಮಾಲಿಕ ವೀರಭದ್ರಪ್ಪ ಮಾತನಾಡಿ ನಮ್ಮ ಸಂಸ್ಥೆಯ ಹೆಸರನ್ನು ಉಪಯೋಗಿಸಿ ನಕಲಿ ಬ್ಯಾಗುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದರು.

Leave a Comment