ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ

ಮೈಸೂರು. ಜ.17- ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಇಂದು ಆರಂಭವಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರ ಧರ್ಮಪತ್ನಿ ಅರ್ಪಿತಾ ಸಿಂಹ ಮತ್ತು ಬಿಜೆಪಿ ಮುಖಂಡರಾದ ಹೆಚ್.ವಿ.ರಾಜೀವ ಹಸಿರು ನಿಶಾನೆ ತೋರಿದರು.
ಇಂದು ಬೆಳಿಗ್ಗೆ 10.30 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣ ಆರಂಭಿಸುವ ಟ್ರೂಜೆಟ್ ವಿಮಾನಕ್ಕೆ ಹಸಿರು ನಿಶಾನೆ ತೋರಿಸಲಾಗಿದ್ದು, ಈ ಸಂದರ್ಭ ಬಿಜೆಪಿ ಮುಖಂಡರಾದ ರಾಜೇಂದ್ರ, ಸೇಫ್ ವ್ಹೀಲ್ ಸ್ಥಾಪಕಾಧ್ಯಕ್ಷ ಪ್ರಶಾಂತ್ ಬಿ.ಎಸ್ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜು ನಾಥ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯಿಂದ ಮೈಸೂರಿಗೆ 35 ಮಂದಿ ಹಾಗೂ ಮೈಸೂರಿ ನಿಂದ ಬೆಳಗಾವಿಗೆ 35 ಮಂದಿ ಪ್ರಯಾಣಿಕರು ಈವರೆಗೆ ಟಿಕೇಟ್ ಬುಕ್ ಮಾಡಿದ್ದು, ಈ ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿದೆ ಎಂದು ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.

Leave a Comment