ಮೈಸೂರು ದಸರಾ; ನಡೆದಾಡುವ ದೇವರು ಸ್ತಬ್ಧ ಚಿತ್ರಕ್ಕೆ ಬಹುಮಾನ

ಮೈಸೂರು ದಸರಾ; ನಡೆದಾಡುವ ದೇವರು ಸ್ತಬ್ಧ ಚಿತ್ರಕ್ಕೆ ಬಹುಮಾನ

ತುಮಕೂರು,ಅ.9 : ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಸ್ತಬ್ಧ ಚಿತ್ರಕ್ಕೆ ಮೈಸೂರು ದಸರಾದಲ್ಲಿ ತೃತೀಯ ಬಹುಮಾನ ಸಿಕ್ಕಿದೆ. ‘ನಡೆದಾಡುವ ದೇವರು’ ಎಂಬ ಪರಿಕಲ್ಪನೆಯಲ್ಲಿ ಸ್ತಬ್ಧ ಚಿತ್ರ ತಯಾರು ಮಾಡಲಾಗಿತ್ತು.
2019ರ ಮೈಸೂರು ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ‘ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ” ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ.
ತುಮಕೂರು ಜಿಲ್ಲಾ ಪಂಚಾಯತ್ ‘ನಡೆದಾಡುವ ದೇವರು’ ಪರಿಕಲ್ಪನೆಯಲ್ಲಿ ನಿರ್ಮಿಸಿದ್ದ ಸ್ತಬ್ಧ ಚಿತ್ರಕ್ಕೆ ಮೂರನೇ ಬಹುಮಾನ ಬಂದಿದೆ. ಮೈಸೂರು ಆರ್ಟ್ ಗ್ಯಾಲರಿ ಅಧ್ಯಕ್ಷ ಎಲ್. ಶಿವಲಿಂಗಪ್ಪ ನೇತೃತ್ವದ ಸಮಿತಿ ಪ್ರಶಸ್ತಿಗೆ ಸ್ತಬ್ದ ಚಿತ್ರಗಳನ್ನು ಆಯ್ಕೆ ಮಾಡಿದೆ.
ಡಾ. ಶಿವಕುಮಾರ ಸ್ವಾಮೀಜಿಗಳು ಕುಳಿತ ಭಂಗಿಯಲ್ಲಿ ಸ್ತಬ್ಧ ಚಿತ್ರವನ್ನು ರಚನೆ ಮಾಡಲಾಗಿತ್ತು. ಮಠದ ಶಿಕ್ಷಣ, ವೈದ್ಯಕೀಯ ಸೇವೆಗಳ ಬಗ್ಗೆ ಕಲಾಕೃತಿಗಳನ್ನು ನಿರ್ಮಿಸಲಾಗಿತ್ತು. ಮೂವರು ಸದಸ್ಯರ ಆಯ್ಕೆ ಸಮಿತಿ ಸ್ತಬ್ಧಚಿತ್ರಗಳನ್ನು ವೀಕ್ಷಿಸಿ, ಪ್ರಶಸ್ತಿ ಘೋಷಣೆ ಮಾಡಿದೆ.
* ಪ್ರಥಮ – ಚಾಮರಾಜನಗರ-ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ
* ದ್ವಿತೀಯ – ಉತ್ತರ ಕನ್ನಡ – ಕದಂಬ/ಬನವಾಸಿ* ತೃತೀಯ – ತುಮಕೂರು – ನಡೆದಾಡುವ ದೇವರು
* ಸಮಾಧಾನಕರ – ಚಿಕ್ಕಮಗಳೂರು – ಶಿಶಿಲ ಬೆಟ್ಟ, ವಾರ್ತಾ ಇಲಾಖೆ – ಸರ್ಕಾರದ ಸೌಲಭ್ಯಗಳ ಮಾಹಿತಿ, ಶಿವಮೊಗ್ಗ – ಫಿಟ್ ಇಂಡಿಯಾ.

 

Leave a Comment