ಮೈಸೂರು ದಸರಾಕ್ಕೆ ಸಿದ್ಧತೆ ಆ. 22 ಗಜ ಪಯಣ

ಮೈಸೂರು, ಆ. ೧೬- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬರದ ಸಿದ್ಧತೆಗಳು ಆರಂಭವಾಗಿದ್ದು, ಗಜ ಪಯಣಕ್ಕೆ ಮುಹೂರ್ತ ನಿಗದಿಯಾಗಿದೆ. ಈ ತಿಂಗಳ 22 ರಂದು 14 ಆನೆಗಳ ಗಜಪಡೆ ಕಾಡಿನಿಂದ ನಾಡಿನತ್ತ ಪಯಣ ಬೆಳೆಸಲಿವೆ.
ತಾಲ್ಲೂಕಿನ ವೀರನ ಹೊಸಹಳ್ಳಿಯಿಂದ ಆ. 22 ರಂದು ಬೆಳಿಗ್ಗೆ 10ಕ್ಕೆ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜ ಪಯಣಕ್ಕೆ ಚಾಲನೆ ಸಿಗಲಿದೆ.
ದಸರಾ ಗಜಪಡೆಯ ಮೊದಲ ತಂಡದ ಆರು ಆನೆಗಳು ಗಜ ಪಯಣದ ಮೂಲಕ ಮೈಸೂರು ಅರಮನೆ ತಲುಪಲಿವೆ.
ಅಂಬಾರಿ ಹೊರುವ ಅರ್ಜುನ ನೇತೃತ್ವದ ಆರು ಆನೆಗಳಿಗೆ ಗಣ್ಯಾತೀತ ಗಣ್ಯರು ಸಮ್ಮುಖದಲ್ಲಿ ಗಜಪಯಣಕ್ಕೆ ಚಾಲನೆ ಸಿಗಲಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಎರಡು ಹಂತಗಳಲ್ಲಿ ಗಜಪಯಣ ಆರಂಭವಾಗುವಂತೆ ಮೊದಲ ಹಂತದಲ್ಲಿ ಆರು ಆನೆಗಳು, ಎರಡನೇ ಹಂತದಲ್ಲಿ 8 ಆನೆಗಳು ಅರಮನೆ ಪ್ರವೇಶಿಸಲಿವೆ. ಹೆಚ್ಚುವರಿಯಾಗಿ ಎರಡು ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿವೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೆ ತಂಡದ ಆನೆಗಳು ಆಗಮಿಸಲಿವೆ. ಅರ್ಜುನ (59) ಬಳ್ಳೆ ಆನೆ ಶಿಬಿರ, ಬಲರಾಮ (61 ) ಮತ್ತಿಗೋಡು ಆನೆ ಶಿಬಿರ, ಅಭಿಮನ್ಯು (53) ಮತ್ತಿಗೋಡು ಆನೆ ಶಿಬಿರ, ವರಲಕ್ಷೀ (63) ಮತ್ತಿಗೋಡು ಆನೆ ಶಿಬಿರ, ಕಾವೇರಿ ( 41)- ದುಬಾರೆ ಆನೆ ಶಿಬಿರ, ವಿಜಯ (62)- ದುಬಾರೆ ಆನೆ ಶಿಬಿರ, ವಿಕ್ರಮ (46), ದುಬಾರೆ ಆನೆ ಶಿಬಿರ, ಗೋಪಿ (37) ದುಬಾರೆ ಆನೆ ಶಿಬಿರ, ಧನಂಜಯ( 36) ದುಬಾರೆ ಆನೆ ಶಿಬಿರ, ಈಶ್ವರ( 49) ದುಬಾರೆ ಆನೆ ಶಿಬಿರ, ದುರ್ಗಾಪರಮೇಶ್ವರಿ( 52) ಕೆ.ಗುಡಿ ಆನೆ ಶಿಬಿರ, ಜಯಪ್ರಕಾಶ್ (57) ರಾಂಪುರ ಆನೆ ಶಿಬಿರ, ಹೆಚ್ಚುವರಿಯಾಗಿರುವ ಎರಡು ಆನೆಗಳು ಲಕ್ಷೀ (17 ) ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ, ರೋಹಿತ್ (19) ಬಂಡಿಪುರ ಹುಲಿ ಸಂರಕ್ಷಕ ಅರಣ್ಯ ದಿಂದ ಪಾಲ್ಗೊಳ್ಳಲಿವೆ.

Leave a Comment