ಮುಕ್ತ ವಿವಿಗೆ ಯುಜಿಸಿ ಮಾನ್ಯತೆ

ಪುನರ್ಜನ್ಮ ದೊರೆತಿದೆ. ಕುಲಪತಿ ಶಿವಲಿಂಗಯ್ಯ
ಮೈಸೂರು, ಆ. 24. ನಮಗೆ ಯುಜಿಸಿ ಮಾನ್ಯತೆ ಸಿಕ್ಕಿರುವುದು ಪುನರ್ಜನ್ಮ ಸಿಕ್ಕಂತಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಿವಲಿಂಗಯ್ಯ ಹೇಳಿದ್ದಾರೆ.
ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಇಂದು ಮುಕ್ತ ವಿವಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯತೆ ದೊರೆಯಲು ಹಲವರ ಶ್ರಮ ಇದೆ. ಸಾಂಘಿಕ ಪ್ರಯತ್ನದಿಂದ ಮಾನ್ಯತೆ ದೊರೆತಿದ್ದು, ಅದನ್ನು ಮುಂದಿನ ದಿನಗಳಲ್ಲಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಯುಜಿಸಿಗೆ ನಾವು 32 ಅಂಗರ್ ಗೃಹ ತಾಂತ್ರಿಕೇತರ ಕಾರ್ಯಕ್ರಮ ನೀಡಿದ್ದೆವು. ಅದರಲ್ಲಿ 17 ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಯುಜಿಸಿ ಅನುಮತಿ ನೀಡಿದೆ. ಅಧ್ಯಾಪಕರ ಕೊರತೆಯ ಕಾರಣ, 15 ಕಾರ್ಯಕ್ರಮಗಳಿಗೆ ಅನುಮತಿ ಸಿಕ್ಕಿಲ್ಲ ಎಂದು ವಿವರಿಸಿದರು.

Leave a Comment