ಮೈಸೂರಿನ ಪೌರ ಕಾರ್ಮಿಕರಿಗೆ ‘ಕಾಣದಂತೆ ಮಾಯವಾದನು’ ಚಿತ್ರ ಉಚಿತ ಪ್ರದರ್ಶನ

ಮೈಸೂರು/ಬೆಂಗಳೂರು, ಫೆ 25 – ಬ್ಯಾಕ್ ಬೆಂಚರ್ಸ್ ಮೋಷನ್ ಪಿಚ್ಚರ್ ಸಂಸ್ಥೆಯ “ಕಾಣದಂತೆ ಮಾಯವಾದನು” ಚಿತ್ರತಂಡ ಮೈಸೂರಿನ ಪೌರ ಕಾರ್ಮಿಕರಿಗಾಗಿ ಉಚಿತ ಪ್ರದರ್ಶನ ಏರ್ಪಡಿಸಿದೆ

ಸೋಮವಾರ ಫೆ 24ರಿಂದ ಪ್ರದರ್ಶನ ಆರಂಭವಾಗಿದ್ದು, ಬುಧವಾರ ಫೆ 26ರ ವರೆಗೂ ಸಂಜೆ 4.30 ರಿಂದ 7. 30 ರವರೆಗೆ ಉಡ್ ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ವೀಕ್ಷಿಸಬಹುದಾಗಿದೆ ಎಂದು ಚಿತ್ರದ ನಾಯಕ ನಟ ವಿಕಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿಗೆ ಸ್ವಚ್ಛ ಸಗರಿ ಎಂಬ ಬಿರುದು ಬಂದಿರುವುದು ಇಡೀ ನಾಡಿಗೆ ಹೆಮ್ಮೆಯ ವಿಷಯವಾಗಿದೆ. ಮೈಸೂರು ನಗರ ಪೌರಕಾರ್ಮಿಕರಿಗೆ ಅವರು ಮಾಡಿರುವ ಶ್ಲಾಘನೀಯ ಸೇವೆಗೆ ನಮ್ಮ ಕೃತಜ್ನತೆ ಸಲ್ಲಿಸಲು ನಮ್ಮ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಿದ್ದೇವೆ. ಸುಮಾರು 3 ಸಾವಿರ ಪೌರಕಾರ್ಮಿಕರು ಹಾಗು ಅವರ ಕುಟುಂಬದವರಿಗರ ಉಚಿತವಾಗಿ ಕಾಣದಂತೆ ಮಾಯವಾದನು ಸಿನಿಮಾ ವೀಕ್ಷಿಸಬಹುದು. ಜಿಲ್ಲಾಧಿಕಾರಿಗಳು, ಮೇಯರ್, ಉಪಮೇಯರ್, ಆರೋಗ್ಯ ವಿಭಾಗದ ಅಧಿಕಾರಿಗಳು, ಪೌರಕಾರ್ಮಿಕ ಪ್ರತಿನಿಧಿಗಳು ಈ ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Leave a Comment