ಮೈಸೂರಿನಲ್ಲಿ ಹಾರುವ ತಟ್ಟೆ ?

ಮೈಸೂರು, ಸೆ. 1. ಮೈಸೂರು ಅರಮನೆಯ ಮೇಲೆ ಹಾರುವ ತಟ್ಟೆ ಪ್ರತ್ಯಕ್ಷವಾಗಿದೆ ಎನ್ನಲಾದ ಫೋಟೋ ಒಂದು ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ. ಚಿಕ್ಕಮಗಳೂರು ಮೂಲದ ಯುವಕ ಪೂಜಿತ್ ಕ್ಲಿಕ್ಕಿಸಿರುವ ಫೋಟೋಗಳಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಅರಮನೆಗೆ ಭೇಟಿ ನಿಡಿದ್ದ ವೇಳೆ ಪೂಜಿತ್ ಹಲವು ಫೋಟೋಗಳನ್ನು ತೆಗೆದಿದ್ದಾರೆ. ಅವರು ತೆಗೆದ ಫೋಟೋಗಳಲ್ಲಿ ಹಾರುವ ತಟ್ಟೆಯಾಕಾರದ ವಸ್ತು ಗೋಚರಿಸಿರುವುದು ಅಚ್ಚರಿ ಮೂಡಿಸಿದೆ. ಕುತೂಹಲದಿಂದ ತಾವು ತೆಗೆದ ಎಲ್ಲ ಫೋಟೋಗಳನ್ನು ಹತ್ತಿರದಿಂದ ನೋಡಿದಾಗ ಹಾರುವ ತಟ್ಟೆಯಾಕಾರದ ವಸ್ತು ಒಂದೇ ಸ್ಥಳದಲ್ಲಿ ಗೋಚರಿಸದೆ, ವಿವಿಧ ಸ್ಥಳಗಳಲ್ಲಿ ಪತ್ತೆಯಾಗಿರುವುದು ಕಂಡುಬಂದಿದ್ದು, ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Leave a Comment