ಮೈದುಂಬಿದ ಕೃಷ್ಣೆಗೆ 12 ರಂದು ಸಿಎಂ ಪೂಜೆ

ಬಾಲಕೋಟ, ಆ 10- ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದೆ ದಿ. 12 ರಂದು ಆಲಮಟ್ಟಿಗೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ.
ಹುಬ್ಬಳ್ಳಿ ಮೂಲಕ ಹೆಲಿಕಾಪ್ಟರ್‍ದಿಂದ ಅಂದು ಸಂಜೆ 4 ಗಂಟೆಗೆ ಆಲಮಟ್ಟಿಗೆ ಆಗಮಿಸಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಅವರು ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ಮಳೆ ಈಗ ಕಡೆಮೆಯಾದ ಪರಿಣಾಮ ಒಳಹರಿವು 50 ಸಾವಿರ ಕ್ಯೂಸೆಕ್ಸ್ ಇದ್ದು, ಅಷ್ಟೇ ಪ್ರಮಾಣದಲ್ಲಿ ಹೊರಹರಿವು ನೀಡಲಾಗುತ್ತದೆ. ಈಗಾಗಲೆ ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್ ನೀರು ಸಂಗ್ರಹವಾಗಿದ್ದು, ನ್ಯಾಯಾಲಯದ ಆದೇಶದಂತೆ ಇಷ್ಟೇ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡಿ, ಉಳಿದ ನೀರು ಹೊರಗೆ ಬಿಡಲಾಗುತ್ತದೆ.
ಮೈದುಂಬಿ ಹರಿಯುತ್ತಿರುವ ಕೃಷ್ಣೆಯನ್ನು ನೋಡಲು ಪ್ರವಾಸಿಗ ಜನಸಾಗರ ಹರಿದು ಬರುತ್ತಿದ್ದು, ರಾತ್ರಿ ಸಮಯದಲ್ಲಿ ಡ್ಯಾಮ್‍ಗೆ ಅಳವಡಿಸಿರುವ ಲೈಟಿಂಗ್ ನೋಡಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.
ಉತ್ತರ ಕರ್ನಾಟಕದ ಜೀವ ನದಿ ಆಗಿರುವ ಕೃಷ್ಣೆಗೆ ಬಾಗಿನ ಅರ್ಪಿಸುವ ಮೂಲಕ ಗಡಿವಾರು ತಾರತಮ್ಯ ಹೋಗಲಾಡಿಸುವ ತಂತ್ರ ಸಹ ಇದ್ದು, ಬಾಗಿನ ಅರ್ಪಣೆಗೆ ಬರುವ ಸಿಎಂ ಕುಮಾರಸ್ವಾಮಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಅಭಿವೃದ್ಧಿ ಮತ್ತು ನೀರಾವರಿ ಯೋಜನೆ ಸೇರಿದಂತೆ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿ ಬಗ್ಗೆ

Leave a Comment