ಮೈಕೆಲ್ ವಕೀಲರ ಭೇಟಿಗೆ ಅವಕಾಶ ನೀಡಿದ ದೆಹಲಿ ಕೋರ್ಟ್

ನವ ದೆಹಲಿ, ಫೆ. 12 – ಅಗಸ್ಟ  ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ  ಬಂಧಿತನಾಗಿರುವ  ಬ್ರಿಟಿಷ್ ಉದ್ಯಮಿ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್,  ತನ್ನ ವಕೀಲ ಸ್ನೇಹಿತರನ್ನು ಭೇಟಿ ಮಾಡಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.

ಮೈಕೆಲ್ ಅಗಸ್ಟಾವೆಸ್ಟ್  ಲ್ಯಾಂಡ್ ಕಂಪನಿಯ ಜೊತೆ  ಸುಮಾರು 12 ಒಪ್ಪಂದ ಮಾಡಿಕೊಂಡು ಲಕ್ಷಾಂತರ  ಪೌಂಡ್  ಯುರೋಗಳನ್ನು   ಕಮೀಷನ್ ಮೂಲಕ  ಪಡೆದಿದ್ದಾರೆ. ಎಂದು ಸಿಬಿಐ ಅರೋಪಿಸಿದೆ.

ಸಿಬಿಐ ನಂತರ 2002 ರ ಮನಿ ಲಾಂಡರಿಂಗ್ ಕಾಯಿದೆ  ನಿಬಂಧನೆಗಳ ಅಡಿಯಲ್ಲಿ ಮೈಕೆಲ್  ವಿರುದ್ಧ ಜಾರಿ ನಿರ್ದೇಶನಾಲಯವು  ಕ್ರಮ ಕೈಗೊಂಡಿದೆ. ಡಿಸೆಂಬರ್ 05 ರಂದು ದುಬೈಯಿಂದ ಭಾರತಕ್ಕೆ ಆಗಮಿಸಿದ ನಂತರ  ಮೈಕೆಲ್ ಇನ್ನು  ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ನಡುವೆ ಮೈಕೆಲ್ ಅವರಿಗೆ  ಜಾಮೀನು ನೀಡುವಂತೆ ಮನವಿ ಮಾಡಿದ್ದು .  ಸೆಕ್ಷನ್ 167 (2) ನ ಸೆಕ್ಷನ್ 167 (2) ರ ಅಡಿಯಲ್ಲಿನ ನ್ಯಾಯಾಂಗ ಬಂಧನದಲ್ಲಿ ಇನ್ನು ಹೆಚ್ಚು ಕಾಲ ಇಡಲು ಸಾಧ್ಯವಿಲ್ಲ  ಸಿಬಿಐ ಅಥವಾ ಇಡಿ ಆರೋಪಪಟ್ಟಿ ಸಲ್ಲಿಸಲಿಲ್ಲ. ನಿಗದಿತ 60 ದಿನಗಳೊಳಗೆ ಜಾಮೀನು ಅವರಿಗೆ ನೀಡಬೇಕು.ಅಗತ್ಯವಿರುವ ಜಾಮೀನು ಷರತ್ತು  ಪೂರೈಸಲು ಮೈಕೆಲ್ ಸಿದ್ಧ  ಎಂದು ವಕೀಲರು ಮನವಿ ಮಾಡಿದ್ದಾರೆ.

ಆದರೆ ಅವರಿಗೆ ಜಾಮೀನು ನೀಡುವುದಕ್ಕೆ ಜಾರಿ  ನಿರ್ದೇಶನಾಲಯದ ಅಧಿಕಾರಿಗಳು  ವಿರೋಧ ವ್ಯಕ್ತಪಡಿಸಿದ್ದಾರೆ.  ಆದರೆ ತಿಹಾರ್  ಜೈಲಿನಲ್ಲಿ ಅವರು ಸೋಮವಾರದಿಂದ ಶುಕ್ರವಾರದವರೆಗೆ ಅರ್ಧ ಘಂಟೆ ಕಾಲ ಸ್ನೇಹಿತರನ್ನು ಭೇಟಿ  ಮಾಡಲು ಅವಕಾಶ ನೀಡಿ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಆದೇಶ ಮಾಡಿದ್ದಾರೆ.

Leave a Comment