ಮೇ.4 ಸಾಮೂಹಿಕ ವಿವಾಹಕ್ಕೆ ಹೆಚ್‌ಡಿಕೆರಿಗೆ ಆಹ್ವಾನ

ಸಿರವಾರ.ಏ.21- ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಮೇ 4 ರಂದು ಕ್ಯಾದಿಗೇರಿ ಜಿ.ಪಂ. ಸದಸ್ಯ ವೆಂಕಟೇಶ ಪೂಜಾರಿ ಅವರ ಸಹೋದರರ ವಿವಾಹ ಮಹೋತ್ಸವದ ಜೊತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ವಿವಾಹ ಕಾರ್ಯಕ್ರಮ ಆಹ್ವಾನ ನೀಡಲಾಯಿತು. ಅಲ್ಲದೇ ಸಾಮೂಹಿಕ ವಿವಾಹ ಕಾರ್ಯಕ್ರಮ ಹೆಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆಂದು ವೆಂಕಟೇಶ ಪೂಜಾರಿ ತಿಳಿಸಿದರು.  ಈ ಸಂದರ್ಭದಲ್ಲಿ ಗುತ್ತೇದಾರ ಸೀತಣ್ಣ ನಾಯಕ, ಬಸವರಾಜ ಪೂಜಾರಿ ಉಪಸ್ಥಿತರಿದ್ದರು.

Leave a Comment