ಮೇಷ

ವರ್ಷಾರಂಭ 18.03.2018 ರಿಂದ 11.10.2018ವರೆಗೆ 7ನೇ ಗುರು ಶುಭಫಲ ಅನುಗ್ರಹಿಸುವನು. ನಂತರ 29.03.2019ವರೆಗೆ 8ನೇ ಗುರು ಅಶುಭಫಲ ಕೊಡುವನು. ನಂತರ 05.04.2019ವರೆಗೆ 9ನೇ ಗುರು ಶುಭಫಲ ಕೊಡುವನು. ಶನಿಯು ವರ್ಷಾದಿಯಿಂದ ವರ್ಷಾಂತ್ಯ 05.04.2019ವರೆಗೆ 9ನೇ ಶನಿ ಎಣೆಯಿಲ್ಲದ ಭಾಗ್ಯ ಕರುಣಿಸುವನು. ಇತರ ಗ್ರಹಗಳ ಬಲಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿ- ಈ ವರ್ಷ ನಿಮ್ಮ ಜೀವನ ಸರ್ವಾದರಣೀಯವಾಗಿರುತ್ತದೆ. ಆರ್ಥಿಕ ವ್ಯವಹಾರಗಳು ಉತ್ತುಂಗಕ್ಕೇರುವವು. ಹೊಸ ಯೋಜನೆಗಳು ಜಾರಿಯಾಗಿ ಬಹುಮುಖ ಆದಾಯ ಕೊಡುವವು. ನೌಕರರಿಗೆ ಬಡ್ತಿ ಲಭ್ಯ. ಖಾಸಗಿ ಕಂಪನಿ ನೌಕರರಿಗೆ ವಿದೇಶ ಯೋಗ. ಮಡದಿ-ಮಕ್ಕಳು ಸುಖ ಜೀವನ ಪಡೆಯುವರು. ಕೋರ್ಟ್-ಕಛೇರಿ ಕೆಲಸಗಳು ಈಡೇರುವವು. ಸಮಾಜ ಸೇವೆಗೆ ಮುಂದಾಗುತ್ತೀರಿ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಗುರಿ ಮುಟ್ಟುವರು. ಆಟಗಾರರು ಅನೇಕ ಪ್ರಶಸ್ತಿ ಪಡೆಯುವರು. ರೈತರು ಶ್ರೇಷ್ಠ ಬೆಳೆಗಳಿಂದ ವಿಪುಲ ಆದಾಯದಲ್ಲಿದ್ದು, ಭೂಖರೀದಿ ಮಾಡುವರು. ವೈದ್ಯ, ವಕೀಲ, ಸಾಹಿತಿ, ಕಲಾವಿದರ ಜೀವನ ರಂಜನೀಯವಾಗಿರುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಬದಲಾವಣೆಯಾಗಲಿದೆ. ವಾಹನ ಖರೀದಿ, ರಾಜಕೀಯರಂಗದಲ್ಲಿ ಗೌರವಾದರಗಳು ಹೆಚ್ಚುತ್ತವೆ. ಶತ್ರುಗಳು ಮಿತ್ರರಾಗುವರು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವವು. ಸಂಶೋಧಕರು ಪ್ರಶಸ್ತಿ ಭಾಜನರಾಗುವರು. ವರ್ಷಾಂತ್ಯದಲ್ಲಿ ಕೆಲವು ಅಹಿತಕರ ಘಟನೆಗಳು ಮಿಂಚಿ ಮಾಯವಾಗುವವು. ಕಾರ್ಮಿಕರು ಲಾಭದಲ್ಲಿರುವರು. ಸಂಘ-ಸಂಸ್ಥೆಗಳ ಆಡಳಿತ ನಡೆಸುವ ಅವಕಾಶಗಳು ಕೀರ್ತಿ ಹೆಚ್ಚಿಸುವವು.

ಆದಾಯ-2, ವ್ಯಯ-14