ಮೇವು ಬ್ಯಾಂಕ್ ಉದ್ಘಾಟಿಸಿದ ಮುರುಘ ಶರಣರು

ಚಿತ್ರದುರ್ಗ ಏ. 21 ; ಚಿತ್ರದುರ್ಗ ಜಿಲ್ಲೆ ತೀವ್ರ ಬರದಿಂದ ತತ್ತರಿಸಿದ್ದು, ಜಾನುವಾರುಗಳಿಗೆ ಮೇವು, ನೀರಿನ ಹಾಹಾಕಾರವುಂಟಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶಿಬಾರದಲ್ಲಿ ಮೇವು ಬ್ಯಾಂಕ್‍ನ್ನು ಪ್ರಾರಂಭಿಸಿ ಮಾತನಾಡಿದ ಶ್ರೀಗಳು, ಕಳೆದೆರಡು ವರ್ಷಗಳಿಂದ ಕಾಲಕಾಲಕ್ಕೆ ಮಳೆಯಾಗದೇ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯಿರುವುದರಿಂದ ಮೇವು ಬ್ಯಾಂಕ್ ತೆರೆದಿರುವುದು ಜಾನುವಾರುಗಳಿಗೆ ಉಪಯೋಗವಾಗಲಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ, ಇಲ್ಲಿ ಮೇವು ಬ್ಯಾಂಕ್ ತೆರೆಯಲು ತಹಶೀಲ್ದಾರ್‍ರು ಮತ್ತು ಶ್ರೀಗಳು ಹೆಚ್ಚಿನ ಶ್ರಮವಹಿಸಿದ್ದಾರೆ. ಈ ಮೇವು ಬ್ಯಾಂಕ್‍ನ್ನು ಮಳೆಗಾಲ ಬರುವವರೆಗೂ ಮುಂದುವರೆಸಲಾಗುವುದು ಎಂದರು.ತಹಶೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಈ ಪ್ರದೇಶದಲ್ಲಿ ಮೇವಿನ ಕೊರತೆ ಹೆಚ್ಚಾಗಿದ್ದು ಅದರ ನೆರವಿಗಾಗಿ ಮೇವು ಬ್ಯಾಂಕ್ ತೆರೆಯಲಾಗಿದೆ. ಪ್ರತಿದಿನ 10 ಲೋಡ್ ಮೇವು ಒದಗಿಸಲಾಗುವುದು.

ಒಂದು ರಾಸುವಿಗೆ 5ಕೆಜಿ ಮೇವನ್ನು ಪ್ರತಿಕೆಜಿಗೆ 2ರೂ.ನಂತೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.ಜಿ.ಪಂ. ಸದಸ್ಯ ನರಸಿಂಹರಾಜು ಮಾತನಾಡಿ, ಮೊದಲು ಮೇವು-ನೀರನ್ನು ಉಚಿತವಾಗಿ ನೀಡಲಾಗುತ್ತಿತ್ತು. ಇಂದು ಖರೀದಿಸುವ ಪರಿಸ್ಥಿತಿ ಬಂದಿದೆ. ಇಲ್ಲಿನ ದನಕರುಗಳಿಗೆ ಮಳೆಗಾಲ ಬರುವವರೆಗೆ ಮೇವು ಒದಗಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಎಂ.ಕೆ. ಹಟ್ಟಿ ಗ್ರಾ.ಪಂ. ಅಧ್ಯಕ್ಷ ಆನಂದ್, ತಾ.ಪಂ. ಸದಸ್ಯ ಪರಮೇಶ್, ಸೀಬಾರದ ಪ್ರಕಾಶ್, ಕಲ್ಲೇಶಯ್ಯ, ಕೆಇಬಿ ಷಣ್ಮುಖಪ್ಪ, ಮುರುಘಾಮಠದ ವ್ಯವಸ್ಥಾಪಕ ಎ.ಜೆ.ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಷಡಾಕ್ಷರಯ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment