ಮೇಲೊಬ್ಬ ಮಾಯವಿ’ಗೆ ‘ಎ’ ಸರ್ಟಿಫಿಕೆಟ್

`
ಬೆಂಗಳೂರು,, ಜೂನ್ 20- ಅ್ಯಕ್ರೊಮೊಟಾಪ್ಸಿಯಾ (Achromatopsia) ನ್ಯೂನತೆ ಮತ್ತು ಹಲವು ಸಾವು ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಹೆಸರಿನ ‘ಮೇಲೊಬ್ಬ ಮಾಯಾವಿ’ ತೆರೆಗೆ ಬರಲು ಸಿದ್ಧವಾಗಿದೆ.

ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ‘ಎ’ ಪ್ರಮಾಣಪತ್ರ ನೀಡಿದೆ.
‘ಜನುಮದ ಜೋಡಿ’ಯ ಕೋಲುಮಂಡೆ ಜಂಗಮದೇವ ಹಾಡಿನ ಮೂಲಕ ಖ್ಯಾತರಾಗಿದ್ದ ಗಾಯಕ, ಸಂಗೀತ ಸಂಯೋಜಕ, ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಎಲ್.ಎನ್.ಶಾಸ್ತ್ರೀ ಸಂಗೀತ ಸಂಯೋಜಿಸಿ ‘ಕಳ್ಳಕೊಳಲ ಹಿಡಿದವನೊಬ್ಬ ಗೋಪಾಲ’ ಗೀತೆಗೆ ಧ್ವನಿಯಾದ ಕೊನೆಯ ಚಿತ್ರ ಇದಾಗಿದೆ.

ಸಿನಿಮಾ ಪತ್ರಕರ್ತ ಬಿ.ನವೀನ್ ಕೃಷ್ಣ ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಹಿನ್ನಲೆ ಸಂಗೀತವಿದ್ದು, ಉಪೇಂದ್ರ ನಿರ್ದೇಶನದ `ಓಂ’ ಚಿತ್ರಕ್ಕೆ ಸಹಾಯಕ ಸಂಕಲನಕಾರರಾಗಿದ್ದ ಕೆ.ಗಿರೀಶ್ ಕುಮಾರ್ ಸಂಕಲನ ಮಾಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ದೀಪಿತ್ ಹೊತ್ತಿದ್ದರೆ, ನೃತ್ಯ ಸಂಯೋಜನಯನ್ನು ರಾಮು ಮಾಡಿದ್ದಾರೆ
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಿತ್ರದ ನಾಯಕನಾದರೆ, ಅನನ್ಯ ಶೆಟ್ಟಿ ನಾಯಕಿಯಾಗಿ ಅಭಿನಯಕ್ಕೆ ಸವಾಲಾಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಪತ್ರಕರ್ತ, ಚಿಂತಕ, ಚಕ್ರವರ್ತಿಚಂದ್ರಚೂಡ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರಕ್ಕೆ ಚಿತ್ರಕಥೆ,ಸಾಹಿತ್ಯ,ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಕೃಷ್ಣಮೂರ್ತಿಕವತ್ತಾರ್, ಎಂ.ಕೆ.ಮಠ, ಬೆನಕ ನಂಜಪ್ಪ, ನವೀನ್ ಕುಮಾರ್, ಲಕ್ಷೀಅರ್ಪಣ್, ಪವಿತ್ರಾ ಜಯರಾಮ್, ಮುಖೇಶ್ ಮುಂತಾದವರು ನಟಿಸಿದ್ದಾರೆ. ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ಜಂಟಿಯಾಗಿ ಶ್ರೀಕಟೀಲ್ ಸಿನಿಮಾಸ್ ಮೂಲಕ ನಿರ್ಮಿಸಿದ್ದಾರೆ

Share

Leave a Comment