ಮೇಲುಕೋಟೆ ಮೆಟ್ಟಿಲು ಬಳಿ ನಿಂತು…

ನಾಯಕಿಯಿಂದ ಐಟಂ ಡಾನ್ಸ್ ಅಂದರೆ ಸ್ಪೆಷಲ್ ಸಾಂಗ್‌ಗೆ ಡಾನ್ಸ್ ಮಾಡುವವರೆಗೆ ಸಧ್ಯಕ್ಕೆ ಕನ್ನಡದಲ್ಲಿ ಚಲಾವಣೆಯಲ್ಲಿರುವ ನಟಿ ಎಂದರೆ ಅದು ಐಂದ್ರಿತಾ ರೇ. ಅತಿಥಿ ಅಥವಾ ಪೋಷಕ ಪಾತ್ರಗಳೆನ್ನದೆ ನಟಿಸುತ್ತಿದ್ದಾಳೆ. ನಾಯಕಿಯಾಗಷ್ಟೇ ಇರುತ್ತೇನೆ ಎಂದೇನಾದರೂ ನಿರ್ಧರಿಸಿದ್ದರೆ ಬಹುಶಃ ಇಷ್ಟರಲ್ಲಾಗಲೇ ತೆರೆಮರೆಗೆ ಸರಿದಿರುತ್ತಿದ್ದಳು. ಅದರೆ ಇದಕ್ಕೆ ಅವಳು ಅವಕಾಶ ಕೊಟ್ಟಿಲ್ಲ.ನಾಲ್ವರಲ್ಲಿ ಒಬ್ಬ ನಾಯಕಿಯಾಗಿದ್ದ ‘ಚೌಕ’ ತೆರೆಕಂಡ ವಾರದಲ್ಲೇ ಅವಳ ‘ಮೇಲುಕೋಟೆ ಮಂಜ’ ಚಿತ್ರ ಬಿಡುಗಡೆ ಯಾಗುತ್ತಿದೆ ಇದು ಅವಳದೇ ಸಾಧನೆ ಎಂದರೆ ತಪ್ಪಾಗಲಾರದು. .

‘ಮೇಲುಕೋಟೆ ಮಂಜ’ ಚಿತ್ರದ ಬಿಡುಗಡೆ ಪ್ರಚಾರದ ಪತ್ರಿಕಾಗೋಷ್ಠಿಗೆ ಅವಳು ಬಂದಿರಲಿಲ್ಲ. ಅವಳು ಯಾಕೆ ಬರಲಿಲ್ಲವೆಂದು ಚಿತ್ರ ನಿರ್ದೇಶಿಸಿ ನಟಿಸಿರುವ ಜಗ್ಗೇಶ್ ಕೂಡ ಕಾರಣ ಹೇಳಲಿಲ್ಲ. ಅವಳ ಬಗ್ಗೆಯಾಗಲಿ ಅಥವಾ ಅವಳ ನಟನೆಯ ಬಗ್ಗೆಯಾಗಲಿ ವಿಶೇಷವಾಗಿ ಪ್ರಸ್ತಾಪಿಸಲೂ ಇಲ್ಲ. ಹಾಗಂತ ಅವಳು ಕಿರಿಕ್ ಮಾಡಿಕೊಂಡಿದ್ದಾಳೆ ಅಂತಲೂ ಹೇಳುವಂತಿಲ್ಲ ಒಟ್ಟಾರೆಯಾಗಿ ಅವಳು ಬಂದಿರಲ್ಲಿಲ್ಲ ಅಷ್ಟೆ.

ಜಗ್ಗೇಶ್ ಅವರಂತ ಅನುಭವಿ ಕಲಾವಿದರ ಜೊತೆ ನಟಿಸುವುದೆಂದರೆ ಹೊಸದಾಗಿ ಮತ್ತೆ ನಟನೆ ಕಲಿಕೆಯೇ ಆಗಿರುತ್ತದೆ. ಈ ಹಿಂದೆ ‘ವಾಸ್ತು ಪ್ರಕಾರ’ ಚಿತ್ರದಲ್ಲಿ ಅವರಿಗೆ ಜೋಡಿಯಾಗಿದ್ದ ಪಾರುಲ್ ಜಗ್ಗೇಶ್ ಜೊತೆ ಕೆಲಸ ಮಾಡಿದ್ದರ ಅನುಭವವನ್ನು ಇನ್ನಿಲ್ಲದೆ ಖುಷಿಯಿಂದ ಹೇಳಿಕೊಂಡಿದ್ದಳು. ಅವಳಂತೆ ಯಾವೊಂದು ಪ್ರತಿಕ್ರಿಯೆಯೂ ಐಂದ್ರಿತಾಳಿಂದ ಬಂದಿಲ್ಲ. ಬಹುಶಃ ಇಬ್ಬರು ಒಂದೇ ವಯಸ್ಸಿನವರು ಹತ್ತತ್ತಿರ ಜಗ್ಗೇಶ್ ಅವರಿಗಿಂತ ಸುಮಾರು ಇಪ್ಪತ್ನಾಲ್ಕು ವರ್ಷ ಚಿಕ್ಕವರಿರಬಹುದು.

ಉತ್ತಮ ಪಾತ್ರವಿದ್ದಾಗ ಅಥವಾ ಆಯ್ಕೆ ಮಾಡಿಕೊಳ್ಳುವಷ್ಟು ಅವಕಾಶಗಳು ಇಲ್ಲದೆ ಇದ್ದಾಗ ಸಿಕ್ಕ ಸಿನೆಮಾಗಳಲ್ಲಿ ನಟಿಸುವುದು ಅನಿವಾರ್ಯವಾಗುತ್ತದೆ. ಆದರೆ ಈ ಎರಡರಲ್ಲಿ ಐಂದ್ರಿತಾ ಯಾವ ಸ್ಥಿತಿಯಲ್ಲಿದ್ದಾಳೆ ಎನ್ನುವುದರ ಸ್ಪಷ್ಟತೆ ಇಲ್ಲ. ಅದರೆ ಹೊರ ನೋಟಕ್ಕೆ ಅವಳು ಸ್ಪೆಷಲ್ ಡಾನ್ಸ್ ಅಥವಾ ಯಾವ ತರಹದ್ದೇ ಪಾತ್ರ ಸಿಕ್ಕರೂ ನಟಿಸುತ್ತಿದ್ದಾಳೆ ಎಂದೆನಿಸುತ್ತಿದೆ.

‘ಮನಸಾರೆ’ ಚಿತ್ರದ ಸಮಯದಲ್ಲಿ ಇದೇ ನಿರ್ದೇಶಕರಾದ ಯೋಗ್‌ರಾಜ್ ಭಟ್ಟರು ಬೆಂಗಾಲಿ ನಟಿಯರಲ್ಲಿ ಕಲೆ ರಕ್ತಗತವಾಗಿ ಬಂದಿರುತ್ತದೆ ಎನ್ನುವಂಥ ಪ್ರಸಂಶೆಯನ್ನು ಐಂದ್ರಿತಾಗೆ ಕೊಟ್ಟಿದ್ದಿತ್ತು. ಅವಳು ಆಗ ನಾಯಕಿಯಾಗಿ ನಟಿಸುತ್ತಾ ಎರಡು ವರ್ಷವೂ ಆಗಿರಲಿಲ್ಲ. ಅಲ್ಲಿಂದ ಅವಳದು ಸುಮಾರು ೧೦ ವರ್ಷಗಳ ಸಿನೆಮಾ ಪಯಣ. ಬಹುಶಃ ಅವಳು ಮಾಡಿಕೊಂಡ ವಿವಾದಗಳು, ಅವಳದೇ ಆದ ನಡವಳಿಕೆ, ಹವ್ಯಾಸಗಳು ಅವಳಿರಬಹುದಾಗಿದ್ದ ಎತ್ತರಕ್ಕೆ ಏರಲು ಬಿಟ್ಟಿಲ್ಲ. ಸಿಕ್ಕಿದ್ದ ಉತ್ತಮ ಸಿನೆಮಾಗಳಿಂದಲೂ ಅವಳು ಎತ್ತರದ ಮೆಟ್ಟಿಲನ್ನು ಏರಲು ಆಗಿಲ್ಲ. ಆದರೆ ಚಲಾವಣೆಯಲ್ಲಿವುದನ್ನು    ಸಾಧಿಸಿಕೊಂಡಿದ್ದಾಳೆ.     ಈ ದೃಷ್ಟಿಯಿಂದ ‘ಮೇಲುಕೋಟೆ ಮಂಜ’  ಚಿತ್ರ ಅವಳಿಗೆ ಮೇಲು ಮೆಟ್ಟಿಲು  ಗಳನ್ನೇರಲು ಕಾರಣವಾಗುತ್ತಾ?   ಕಾದುನೋಡಬೇಕು.

Leave a Comment