ಮೇಲುಕೋಟೆಯಲ್ಲಿ ಅದ್ದೂರಿ ಅಷ್ಠ ತೀರ್ಥೋತ್ಸವ

ಮೇಲುಕೋಟೆ.ನ.8. ಸಂತಾನಭಾಗ್ಯ ಅಪೇಕ್ಷಿಸಿ ನೂರಕ್ಕೂ ಹೆಚ್ಚುದಂಪತಿಗಳು  ಗುರುವಾರ ನಡೆದ ಅಷ್ಠತೀರ್ಥೋತ್ಸವದಲ್ಲಿ ಪಾಲ್ಗೊಂಡು ಕಲ್ಯಾಣಿ ತೀರದಲ್ಲಿ ಮಡಿಲುತುಂಬಿಕೊಂಡು ಚೆಲುವನಾರಾಯಣನಿಗೆ ಹರಕೆಸಲ್ಲಿಸಿದರು. ಮಾಜಿ ಸಚಿವರೂ ಆದ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸಹ ಉತ್ಸವದ ವೇಳೆ ಆಗಮಿಸಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ತೀಕಮಾಸದ ರಾಜಮುಡಿ ಬ್ರಹ್ಮೋತ್ಸವದಲ್ಲಿ 5ನೇದಿನ ನಡೆಯುವ ಅಷ್ಠತೀರ್ಥೋತ್ಸವ, ತೊಟ್ಟಿಲಮಡುಜಾತ್ರೆಯಂದು ಮೈಸೂರು ದೊರೆ ರಾಜಒಡೆಯರ್  ಸಮರ್ಪಿಸಿರುವ ಮೈಸೂರು ರಾಜಲಾಂಛನವಿರುವ ಅಪೂರ್ವ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟ, ಗಂಡುಬೇರುಂಡ ಪದಕ ಸೇರಿದಂತೆ 16ಬಗೆಯ ತಿರುವಾಭರಣಗಳನ್ನು ಧರಿಸಿ  ವೇದಪಾರಾಯಣದೊಂದಿಗೆ ಬೆಳಿಗ್ಗೆ 9 ಗಂಟೆಯ ವೇಳೆಗೆ ಕಲ್ಯಾಣಿಗೆ ಉತ್ಸವ ನೆರವೇರಿಸಲಾಯಿತು.
ಅಲ್ಲಿನ ಗಜೇಂದ್ರವರದನ ಸನ್ನಿಧಿಯ ಬಳಿ ಕೃಷ್ಣಯಜುರ್ವೇದದದ ಪುರುಷಸೂಕ್ತ ಹಾಗೂ ಸ್ನಪನ ಮಂತ್ರದೊಂದಿಗೆ ನೆರೆದ ಭಕ್ತರ ಇಷ್ಠಾರ್ಥಸಿದ್ಧಿಸಲಿ ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ಸ್ವಾಮಿಯ ಬಂಗಾರದ ಪಾದುಕೆಗೆ ಅಭಿಷೇಕ ಮಾಡಲಾಯಿತು. ಇದೇ ವೇಳೆ ಕಲ್ಯಾಣಿಯಲ್ಲಿ ಪಾದುಕೆಯತೀರ್ಥಸ್ನಾನ ನೆರವೇರಿಸಲಾಯಿತು. ಪಾದುಕೆಯ ಅಭಿಷೇಕದ ಪ್ರಸಾದವಾದ ಹರಿಷಿಣವನ್ನು ಹರಕೆಕಟ್ಟಿಕೊಂಡ ದಂಪತಿಗಳು ಮತ್ತು ಭಕ್ತರಿಗೆ ನೀಡಲಾಯಿತು. ಉತ್ಸವದಲ್ಲಿ ಭಾಗಿಯಾಗಿದ್ದ ನೂರಾರು ದಂಪತಿಗಳು ಮತ್ತು ಭಕ್ತರು ಸಹ ಸ್ವಾಮಿಯ ಪಾದುಕೆಯೊಂದಿಗೆ ಕಲ್ಯಾಣಿಯಲ್ಲಿ ಪವಿತ್ರ ತೀರ್ಥಸ್ನಾನ ಮಾಡಿದರು.
ಅಷ್ಠತೀರ್ಥಗಳಲ್ಲಿ ಅಭಿಷೇಕ : ರಾಜಮುಡಿ ಉತ್ಸವ ದೇವಾಲಯ ತಲುಪಿದ ನಂತರ ಸ್ವಾಮಿಯ ಪಾದುಕೆಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯೊಂದಿಗೆ ಕೊಂಡೊಯ್ದು  ಗಿರಿ ಶಿಖರಗಳ ಮಧ್ಯೆ ಪ್ರಕೃತಿಯ ಮಡಿಲಿನಲ್ಲಿರುವ ವೇದಪುಷ್ಕರಣಿ, ರಾಮ ಸೀತೆಗಾಗಿ ಬಾಣಬಿಟ್ಟು ತೀರ್ಥತರಿಸಿದ ದುನುಷ್ಕೋಟಿ, ಯಾದವಾತೀರ್ಥ, ಧರ್ಭತೀರ್ಥ, ಪಲಾಶ ಮತ್ತು ಪದ್ಮ, ನರಸಿಂಹ, ನಾರಾಯಣತೀರ್ಥಗಳಲ್ಲಿ ಶಾಸ್ರ್ತೋಕ್ತವಾಗಿ ಅಭಿಷೇಕ ನೆರವೇರಿಸಲಾಯಿತು. ಮೇಲುಕೋಟೆಯ ವೇದವಿದ್ವಾಂಸರು ಸ್ವಾಮಿಯ ಉತ್ಸವದ ವೇಳೆ  ಯಜುರ್ವೇದ ಆರಣ್ಯಕ, ಕಾಠಕಗಳ ಪಾರಾಯಣ ಮಾಡಿದರು.
ಗಿರಿ ಕಂದರಗಳ ಮಧ್ಯೆ ಸಾಗಿದ ಭಕ್ತರು :
ಬಹುಕಾಲ ಮಕ್ಕಳಾಗದ ನೂರಕ್ಕೂ ಹೆಚ್ಚು ದಂಪತಿಗಳು, ನವದಂಪತಿಗಳು ಭಾಗವಹಿಸಿ ಮನದಿಚ್ಚೆಯನ್ನು ಪೂರೈಸುವಂತೆ ಪ್ರಾರ್ಥಿಸಿ ಗಿರಿ ಶಿಖರಗಳ 20ಕಿ.ಮೀ ಕ್ರಮಿಸಿ ಅಷ್ಠತೀರ್ಥಗಳಲ್ಲಿ ಪವಿತ್ರಸ್ನಾನ ಮಾಡಿ  ಸಂಜೆ ತೊಟ್ಟಿಲು ಮಾದರಿಯ ಹೆಬ್ಬಂಡೆಯಲ್ಲಿ ನೀರು ಹರಿದು ಹಳ್ಳ ಸೇರುವ ವೈಕುಂಠಗಂಗೆಯ ಬಳಿಯ ವೈಕುಂಠನಾಥನಿಗೆ ಪೂಜೆ ಸಲ್ಲಿಸಿದರು. ಬೆಟ್ಟಗುಡ್ಡಗಳ ನಡುವೆ ಇರುವೆಯಂತೆ ಸಾಲಾಗಿ ಪಾದುಕೆಯ ಹಿಂಭಾಗ ಸಾಗಿದ ದೃಶ್ಯ ದೈವೀಕಭಾವನೆ ಇಮ್ಮಡಿಗೊಳಿಸಿತು. ಈ ವೇಳೆ ನಡೆದ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮೇಲುಕೋಟೆಯ ವಿಶಿಷ್ಟ ಪ್ರಸಾದವಾದ ಕದಂಬ ಮತ್ತು ಮೊಸರನ್ನು ವಿತರಿಸಲಾಯಿತು. ರಾತ್ರಿ ಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ಅಷ್ಥತೀರ್ಥೋತ್ಸವ ಮುಕ್ತಾಯವಾಯಿತು. ಸ್ಥಳೀಯ ಗ್ರಾ.ಪಂ ಆಸಕ್ತಿವಹಿಸಿ ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಿ ಸ್ವಚ್ಛತೆ ಕಾಪಾಡಲು ಶ್ರಮಿಸಿತ್ತು. ಮೇಲುಕೋಟೆ ಪೊಲೀಸರು ಬಂದೋಬಸ್ತ್ ಮಾಡಿದ್ದರು.
ಮಹೋತ್ಸವದಲ್ಲಿ ಮನ್ ಮುಲ್ ನಿರ್ದೆಶಕ ಕಾಡೇನಹಳ್ಳಿ ರಾಮಚಂದ್ರು, ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ತಹಶೀಲ್ದಾರ್ ಪ್ರಮೋದ್ ಪಾಟೀಲ್, ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಸೇರಿದಂತೆ ಹಲವಾರು ಗಣ್ಯರು ಉತ್ಸವದಲ್ಲಿ ಭಾಗವಹಿಸಿದ್ದರು.
ಮೇಲುಕೋಟೆ :  ತೊಟ್ಟಿಲುಮಡು ಜಾತ್ರೆಯಲ್ಲಿ 5 ರಿಂದ 6 ಗಂಟೆಯವರೆಗೆ ಸುರಿದ ಭಾರಿ ಮಳೆಯಿಂದಾಗಿ ಅಸ್ತವ್ಯಸ್ಥ ಉಂಟಾಯಿತು. ತೊಟ್ಟಿಮಡುಗೆ ಸ್ವಾಮಿಯ ಪಾದುಕೆ ಆಗಮಿಸುತ್ತಿದ್ದಂತೆಯೇ ಸತತ ಒಂದು ಗಂಟೆಗಳ ಕಾಲ ಸುರಿದ ಮಳೆ ವ್ಯಾಪಾಗಳನ್ನು ಪೇಚಿಗೆ ಸಿಲುಕಿಸಿತು. ಭಕ್ತರ ಮೇಲೆ ಬಿದ್ದ ಮಳೆ ಉಲ್ಲಾಸ ಮೂಡಿಸಿತು. ಮಳೆ ನಿಂತ ತರುವಾಯ 6 ಗಂಟೆಯ ವೇಳೆಗೆ ಗಿರಿಪ್ರದಕ್ಷಿಣೆ ಆರಂಭವಾಯಿತು.

Leave a Comment