ಮೇಯರ್ ಸ್ಥಾನಕ್ಕೆ ಸೆ.28 ಚುನಾವಣೆ

ಬೆಂಗಳೂರು, ಸೆ.೩- ಬಿಬಿಎಂಪಿಯ 53ನೇ ಮೇಯರ್ ಮತ್ತು 54ನೇ ಉಪ ಮೇಯರ್ ಸ್ಥಾನಕ್ಕೆ ಈ ತಿಂಗಳ 28 ರಂದು ಚುನಾವಣೆ ನಡೆಯಲಿದೆ,

ಈ ಬಾರಿ ಮೇಯರ್ ಸಾಮಾನ್ಯ (ಮಹಿಳೆ) ಉಪ ಮೇಯರ್ ಸಾಮಾನ್ಯ (ಪುರುಷ) ವರ್ಗಕ್ಕೆ ಮೀಸಲಾತಿ ನಿಗದಿಯಾಗಿದೆ.
ಈ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ 28ರಂದು ಚುನಾವಣೆ ನಡೆಸಲು ನಿರ್ಧರಿಸಿ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ ಆದೇಶ ಹೊರಡಿಸಿದ್ದಾರೆ.

ಸೆ. 28 ರಂದು ಬೆಳಿಗ್ಗೆ 11.30ಕ್ಕೆ ಮೇಯರ್ ಮತ್ತು ಉಪಮೇಯರ್ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ 9.30ರವರೆಗೆ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸುವವರು ತಮ್ಮ ನಾಮಪತ್ರಗಳನ್ನು ಕೆಂಪೇಗೌಡ ಪೌರ ಸಭಾಂಗಣದ 109ನೇ ಕೊಠಡಿಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬಹುದು.

ಬಿಬಿಎಂಪಿಯಲ್ಲಿ ಸದ್ಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟ ಆಡಳಿತವಿದೆ.ಕಾಂಗ್ರೆಸ್ ಮೇಯರ್ ಆರ್.ಸಂಪತ್ ರಾಜ್, ಉಪ ಮೇಯರ್ ಪದ್ಮಾವತಿ ನರಸಿಂಹ ಮೂರ್ತಿ ಅವರ ಆಡಳಿತ ಅವಧಿ ಈ ತಿಂಗಳ 27ಕ್ಕೆ ಪೂರ್ಣಗೊಳ್ಳಲಿದೆ.

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಪಕ್ಷದಿಂದ 75 ಬಿಜೆಪಿಯಿಂದ 100 ಜೆಡಿಎಸ್ ನಿಂದ 15 ಹಾಗೂ 8 ಮಂದಿ ಪಕ್ಷೇತರ ಸದಸ್ಯರಿದ್ದಾರೆ.

ಕಾಂಗ್ರೆಸ್ 15, ಬಿಜೆಪಿ 11, ಮತ್ತು ಜೆಡಿಎಸ್ ಇಬ್ಬರು ವಿಧಾನಸಭಾ ಸದಸ್ಯರು ಸೇರಿದಂತೆ ಒಟ್ಟು 28 ಶಾಸಕರು ಮತ ಚಲಾಯಿಸಲಿದ್ದಾರೆ.

ಅಲ್ಲದೆ ಐವರು ಲೋಕಸಭಾ ಸದಸ್ಯರು 9 ರಾಜ್ಯ ಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

Leave a Comment