ಮೇಯರ್ ಪುಷ್ಪಲತಾ ಜಗನ್ನಾಥ್ ರಿಂದ ಪ್ರೋತ್ಸಾಹ ಧನ ವಿತರಣೆ

ಮೈಸೂರು. ಜೂ.18: ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ 2019-20ನೇ ಸಾಲಿನ ಸಾಮಾನ್ಯ ನಿಧಿಯಲ್ಲಿ ಮೈಸೂರು ನಗರದ ಈಗಾಗಲೇ ಅರ್ಜಿ ಸಲ್ಲಿಸಿರುವ ಒಟ್ಟು 106 ಕಲಾವಿದರಿಗೆ ತಲಾ 10ಸಾವಿರ ರೂ. ಪ್ರೋತ್ಸಾಹ ಧನವನ್ನು ಪಾಲಿಕೆಯ ನವೀಕೃತ ಕೌನ್ಸಿಲ್ ಆವರಣದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಇಂದು ವಿತರಿಸಿದರು.
ಬಳಿಕ ಮಾತನಾಡಿದ ಅವರು ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಕಲೆಯ ಜೊತೆ ಕಲಾವಿದರಿಗೂ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ಬಜೆಟ್ ನಲ್ಲಿ ಕಲಾವಿದರಿಗೆ ಹೆಚ್ಚಿನ ಅನುಕೂಲತೆಗಳಿಗಾಗಿ ಧನ ಮೀಸಲಿಡಲಾಗುವುದು ಎಂದರು.
ಕಲಾವಿದರಾದ ಜಯಲಕ್ಷ್ಮಿ.ಕೆ, ಎಸ್.ಎಸ್.ಗಾಯತ್ರಿ, ನಾಗೇಶ್ ಎಸ್, ಮಹಾಲಕ್ಷ್ಮಿ ಬಿ, ಸಿ.ಶ್ರೀಕಂಠ, ಎಂ.ಕುಮಾರ್, ಹೆಚ್.ಬಿ.ಯಶೋಧ, ಕಾಳಯ್ಯ, ಟಿ.ಎನ್.ಶಿವಮ್ಮಣಿ, ಸುಲೋಚನಮ್ಮ, ಮಧುಪ್ರಕಾಶ್, ಸಿ.ಕೆ.ನಳಿನ, ಎಸ್.ಟಿ.ಗೀತಾ ಸೇರಿದಂತೆ 102ಮಂದಿ ಕಲಾವಿದರಿಗೆ 10ಸಾವಿರ ರೂ.ಪ್ರೋತ್ಸಾಹ ಧನ ನೀಡಲಾಯಿತು.
ಈ ಸಂದರ್ಭ ಪಾಲಿಕೆಯ ಉಪಮೇಯರ್ ಶಫಿ ಅಹ್ಮದ್, ಸದಸ್ಯರಾದ ಮಾ.ವಿ.ರಾಂಪ್ರಸಾದ್, ಶೋಭಾ ಸುನಿಲ್, ಎಸ್.ಬಿ.ಎಂ.ಮಂಜು, ಆಯುಕ್ತೆ ಶಿಲ್ಪನಾಗ್ ಮತ್ತಿತರರಿದ್ದರು.

Leave a Comment