ಮೇಘಾಲಯದಲ್ಲಿ ಮರದ ಬಳ್ಳಿಗಳೇ ಸೇತುವೆ

ಇವುಗಳು ವಿಶ್ವದ ಅತ್ಯಂತ ಎತ್ತರದ ಅಥವಾ ಉದ್ದನೆಯ ಸೇತುವೆಗಳಂತೂ ಖಂಡಿತಾ ಅಲ್ಲ. ಭಾರತದಲ್ಲಿ ಮರಗಳ ಬಳ್ಳಿಗಳಿಂದ ನದಿಗೆ ಅಡ್ಡವಾಗಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದು ಹೇಗಿದೆ ಎಂದರೆ ಆಧುನಿಕ ವಾಸ್ತು ಶಿಲ್ಪವನ್ನು ನೆನಪಿಗೆ ತರುವಂತಿದೆ. ಅಂದ ಹಾಗೆ ಇಂತಹ ಸೇತುವೆಗಳು ಕಂಡು ಬರುವುದು ಎಲ್ಲಿ ಅಂತೀರಾ ಈಶಾನ್ಯ ಭಾರತದ ಮೇಘಾಲಯ ರಾಜ್ಯದಲ್ಲಿ ಕಾಣಸಿಗುತ್ತವೆ.

l1

ಹಾಗೆ ನೋಡಿದರೆ, ಸೇತುವೆಗಳನ್ನು ಕಾಂಕ್ರೀಟ್ ಅಥವಾ ಉಕ್ಕು ಮತ್ತು ಕಬ್ಬಿಣದಿಂದ ನಿರ್ಮಿಸುವುದು, ಸಹಜ. ಆದರೆ ಇಲ್ಲಿ ಮರಗಳು ಗಟ್ಟಿಯಾಗಿ ಬೆಳೆದಷ್ಟು ಸೇತುವೆ ನಿರ್ಮಿಸಲು ಅನುಕೂಲವಾಗುತ್ತದೆ. ವಿಶೇಷವೆಂದರೆ ತಂತ್ರಜ್ಞಾನ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪರಿಣತಿ ಹೊಂದಿರುವ ಇಂತಹ ದಿನಗಳಲ್ಲೂ ಮೇಘಾಲಯದಲ್ಲಿ ಮರಗಳ ಬಳ್ಳಿಗಳಿಂದ ನಿರ್ಮಿಸಿರುವ ಸೇತುವೆಗಳು ಗಮನ ಸಳೆದಿವೆ.

50 ಮೀಟರ್ ವರೆಗೂ ಹಿಗ್ಗಿಸುವಷ್ಟು ಬಳ್ಳಿಗಳಿರುತ್ತವೆ. ಅದೂ ಅಲ್ಲದೆ ಈ ಬಳ್ಳಿಗಳು ನೂರಾರು ವರ್ಷಗಳಿರುತ್ತವೆ. ಇದು ತಾಪಮಾನ ಹೆಚ್ಚಾಗುವ ನಗರದಲ್ಲಿ ಇಂತಹ ಮರದ ಬಳ್ಳಿಗಳ ಸೇತುವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂಶೋಧಕರು ಅನಿಸಿಕೆಯಾಗಿದೆ.
ಆದರೆ ಇದು ನಂಬಲು ಅಸಾಧ್ಯ ಮರ ಶಕ್ತಿಯುತವಾಗಿ ಬೆಳೆದರೆ ಹೆಚ್ಚು ಅನುಕೂಲ ಇದು ಭೂಮಿಯೊಳಕ್ಕೆ ಬೇರೂರಿದ್ದು, ಇದು ನಮ್ಮ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ಮ್ಯೂನಿಚ್‌ನ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊಫೆಸರ್ ಫರ್ಡಿನಾಂದ್ ಲುಡ್‌ವಿನ್.

l2
ಮೇಘಾಲಯ ದೇಶದ ಗುಡ್ಡಗಾಡು ರಾಜ್ಯ ಈ ಪ್ರದೇಶದಲ್ಲಿ ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಹಾಗೂ ರೈತರು ತಮ್ಮ ಜಮೀನಿಗೆ ತೆರಳಲು ನದಿಗೆ ಅಡ್ಡವಾಗಿ ಈ ಸೇತುವೆಗಳನ್ನು ನಿರ್ಮಿಸಲಾಗಿದೆ. ಇಂತಹ ಸೇತುವೆಗಳನ್ನು ರಬ್ಬರ್ ಮರ ಇಲ್ಲ ಫಿಕಸ್ ಎಲಾಸ್ಟಿಕಾ ಮರ ಬೆಳೆಸಿ ಈ ಮರದಲ್ಲಿ ಹಬ್ಬುವ ಬಳ್ಳಿಗಳಿಂದಲ್ಲೇ ನಿರ್ಮಿಸಿರುವುದು ವಿಶೇಷ
ಮೇಘಾಲಯದ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 74 ಸೇತುವೆಗಳನ್ನು ನಿರ್ಮಿಸಲಾಗಿದೆ. ಇದನ್ನು ನಿರ್ಮಿಸಿದ ಸ್ಥಳೀಯರನ್ನು ಲುಡ್‌ವಿಂಗ್ ಮತ್ತವರ ಸಹೋದ್ಯೋಗಿಗಳು ಸಂದರ್ಶನ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅವರ ಜೊತೆಗೆ ಸಾವಿರಾರು ಘೋಟೊಗಳನ್ನು ತೆಗೆಸಿಕೊಂಡಿದ್ದಾರೆ. ಅಷ್ಟೇ ಅಲ್ಲಿ 3 ಡಿ ಮಾದರಿಯಲ್ಲೂ ಸೇತುವೆಗಳನ್ನು ನಿರ್ಮಿಸಿರುವುದು ಅತ್ಯಂತ ಆಕರ್ಷಕವಾಗಿದೆ.

l3
ಈ ರೀತಿಯ ಸೇತುವೆಗಳನ್ನು ಮರ ಅಥವಾ ಬಿದಿರಿನಿಂದ ನಿರ್ಮಿಸುತ್ತಾರೆ. ಏಕೆಂದರೆ ಇದು ಪ್ರವಾಹ ಅಥವಾ ನೀರಿನಲ್ಲಿ ಸುಲಭವಾಗಿ ಕೊಚ್ಚಿ ಹೋಗುವುದಿಲ್ಲ ಮೇಘಾಲಯ ಅತ್ಯಂತ ತೇವಾಂಶದಿಂದ ಕೂಡಿದ ಪ್ರದೇಶವಾಗಿರುವುದರಿಂದ ಈ ರೀತಿಯ ಸೇತುವೆಗಳನ್ನು ನಿರ್ಮಿಸಿದರೆ ಹೆಚ್ಚು ಬಾಳಿಕೆ ಬರುತ್ತವೆ. ಅಲ್ಲದೆ ಕಾಂಕ್ರೀಟ್ ಮತ್ತು ಉಕ್ಕಿನಿಂದ ನಿರ್ಮಿಸುವ ಸೇತುವೆಗಳು ತುಕ್ಕು ಹಿಡಿದು ಬೇಗನೆ ಹಾಳಾಗುತ್ತವೆ. ಆದರೆ ಮರದ ಬಳ್ಳಿಯಿಂದ ನಿರ್ಮಿಸಿರುವ ಈ ಸೇತುವೆಗಳಿಗೆ ಅಂತಹ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. ಲುಡ್‌‌ವಿನ್.
ಇದೊಂದು ಸದಾಕಾಲವೂ ಬೆಳವಣಿಗೆಯ ಪ್ರಕ್ರಿಯೆಯಾಗಿದೆ. ಇದು ಪುನರುತ್ಪಾದನೆ ವಾಸ್ತು ಶಿಲ್ಪಕ್ಕೆ ಸ್ಫೂರ್ತಿಯ ಸೆಲೆಯಾಗಿದೆ. ಇಂತಹ ಸೇತುವೆಗಳನ್ನು ದೇಶೀಯ ಸಮುದಾಯಕ್ಕೆ ಸೇರಿದ ಖಾಸಿ ಮತ್ತು ಜೈಂತಿಯಾ ಕುಟುಂಬಕ್ಕೆ ಸೇರಿದ ವ್ಯಕ್ತಿಗಳು ನಿರ್ವಹಣೆ ಮಾಡುತ್ತಾರೆ. ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಇಂತಹ ಸೇತುವೆಗಳನ್ನು ನಿರ್ಮಿಸಲಾಗುತ್ತದೆ ಎಂದು ಸ್ಥಳೀಯರು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ನದಿಯ ದಂಡೆಯಲ್ಲಿ ಬೀಜಗಳನ್ನು ಬಿತ್ತನೆ ಮಾಡಲಾಗುತ್ತದೆ. ನೆಲದಲ್ಲಿ ಬೆಳೆದ ನಂತರ ಮರದ ಬಳ್ಳಿಗಳು ಉದ್ದವಾಗಿ ಹರಡುತ್ತವೆ. ಬಿದಿರು ಅಥವಾ ತಾಳೆ ಕಾಂಡಾಗಳಿಂದ ಚಾಕಟ್ಟನ್ನು ನಿರ್ಮಿಸಿ ನದಿಯ ಎದುರಿನ ದಂಡೆಗೆ ಅಡ್ಡವಾಗಿ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಈ ಮರದ ಬಳ್ಳಿಗಳು ಸಣ್ಣದಾಗಿ ಬೆಳೆಯುತ್ತಾ ಹೋಗಿ ಕ್ರಮೇಣ ಹಿಗ್ಗುತ್ತಾ ಹೋಗುತ್ತದೆ ಎಂದು ಜರ್ಮನಿಯ ಫ್ರೀಬರ್ಗ್ ಜೀವಶಾಸ್ತ್ರ ವಿಶ್ವವಿದ್ಯಾಲಯದ ಫ್ರೊಫೆಸರ್ ಥಾಮಸ್ ಸ್ಪೆಕ್ ಅಧ್ಯಯನ ನಡೆಸಿರುವುದನ್ನು ವೈಜ್ಞಾನಿಕ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿದೆ
ಇಂತಹ ಸೇತುವೆಗಳ ನಿರ್ಮಾಣ ಪ್ರಕ್ರಿಯೆ ಅರಂಭಗೊಂಡು ದಶಕಗಳ ನಂತರ ಪೂರ್ಣಗೊಳ್ಳತ್ತದೆ. ಬಹುತೇಕ ಸೇತುವೆಗಳು ಅಧ್ಯಯನ ನಡೆಸಿರುವ ಪ್ರಕಾರ 20 ಮೀಟರ್ ಉದ್ದವಿರುತ್ತದೆ. ಅತ್ಯಂತ ಉದ್ದನೆಯ ಸೇತುವೆ ನಿರ್ಮಿಸಿದರೆ ಇದರ ಮೇಲೆ ಓಡಾಡುವುದು ಕಷ್ಟ ಅಥವಾ ನಡೆಯಲು ಭಯಪಡುತ್ತಾರಂತೆ.
ಈ ಸೇತುವೆ ಸುಂದರ ಪರಿಸರದಲ್ಲಿ ನಿರ್ಮಾಣ ಮಾಡಿರುವುದರಿಂದ ಇದು ಪ್ರವಾಸಿ ತಾಣವೂ ಆಗಿದೆ. ಈ ವಿನೂತನ ಮಾದರಿಯ ಸೇತುವೆಗಳನ್ನು ಕುಣ್ತುಂಬಿಕೊಳ್ಳಲು ಪ್ರತಿದಿನ ಎರಡು ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುವುದುಂಟು.
ಈ ಮಾದರಿಯ ಸೇತುವೆಗಳು ದಕ್ಷಿಣ ಚೀನಾ ಮತ್ತು ಇಂಡೋನೇಶಿಯಾದಲ್ಲಿ ಕಂಡು ಬರುತ್ತವೆ. ಈಗ ಮೇಘಾಲಯದಂತಹ ಪ್ರಸ್ಥ ಭೂಮಿಯಲ್ಲಿ ಇಂತಹ ಸೇತುವೆಗಳ ನಿರ್ಮಿಸುವುದು ಅಭ್ಯಾಸವಾಗಿದೆ ಎಂದು ಲುಡ್‌ವಿಗ್ ಹೇಳುತ್ತಾರೆ.
ಈಗಂತೂ ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ಮರದ ಬಳ್ಳಿಗಳಿಂದ ನಿರ್ಮಿಸುವ ಸೇತುವೆಗಳಿಂದ ನಗರ ಪ್ರದೇಶಗಳನ್ನು ಹಸಿರು ತಾಣವನ್ನಾಗಿ ಮಾಡುವುದರ ಜತೆಗೆ ಏರಿಕೆಯಾಗುತ್ತಿರುವ ತಾಪಮಾನಕ್ಕೂ ಕಡಿವಾಣ ಹಾಕಬಹುದಾಗಿದೆ.

Leave a Comment