ಮೇಕಪ್ ತೆಗೆದು ಮಲಗಿ..?

ರಾತ್ರಿ ಸಮಾರಂಭಗಳಿಗೆ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ. ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಟ್ಟರೆ ಅಡ್ಡ ಪರಿಣಾಮ ಹೆಚ್ಚು. ಈ ತಪ್ಪನ್ನು ಮಾಡುವುದರಿಂದ ನಮ್ಮ ಮುಖದ ಮೇಲೆ ಏನೆಲ್ಲಾ ಸಮಸ್ಯೆ ಎದುರಾಗುವುದು ಖಚಿತ

* ಸಮಾರಂಭಕ್ಕೆ ಹೊರಡುವಾಗ ಹಚ್ಚಿದ ಐ ಶ್ಯಾಡೋ, ಐ ಲೈನರ್ ಇವುಗಳನ್ನು ಮಲಗುವ ಮುನ್ನ ತೆಗೆಯದೆ ಇದ್ದರೆ ಕಣ್ಣಿನಲ್ಲಿ ತುರಿಕೆ ಉಂಟಾಗುವುದು.
* ಮೇಕಪ್‌ನಲ್ಲಿಯೇ ಮಲಗುವುದರಿಂದ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಕಂಡು ಬರುವುದು.
* ಮೊಡವೆ ಇರುವವರು ಹಾಗೇ ಮಲಗಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
* ಮಲಗುವ ಮುನ್ನ ತುಟಿಯ ಲಿಪ್ ಸ್ಟಿಕ್ ತೆಗೆಯದಿದ್ದರೆ ತುಟಿ ಕಪ್ಪಾಗುವುದು. ಲಿಪ್ ಸ್ಟಿಕ್ ತೆಗೆದು ತುಟಿಗೆ ಜೇನು ಹಚ್ಚಿ ಮಲಗುವುದು ಒಳ್ಳೆಯದು.
* ದಿನ ಪೂರ್ತಿ ಮೇಕಪ್‌ನಲ್ಲಿದ್ದರೆ ಮುಖ ಬೇಗನೆ ಸುಕ್ಕು ಕಟ್ಟುವುದು.

Leave a Comment