ಮೆಹಬೂಬಾ, ಮತ್ತಿತರ ಬಂಧಿಗಳನ್ನು ಕೂಡಲೇ ಬಿಡುಗಡೆಗೊಳಿಬೇಕು; ಒಮರ್ ಅಬ್ದುಲ್ಲಾ

ಶ್ರೀನಗರ್, ಮಾ 26- ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಇನ್ನಿತರ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದು ಅರಿವಿಲ್ಲದ ಜನರು ಹಬ್ಬಿಸುತ್ತಿರುವ ಸುದ್ದಿಗಳನ್ನು ನಂಬಿ ಆಕೆ ಹಾಗೂ ಆಕೆಯ ಕುಟುಂಬದ ವಿರುದ್ದ ಕಠಿಣ ನಿಲುವು ತಾಳಬಾರದು ಎಂದು ಹೇಳಿದ್ದಾರೆ.
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಅವರನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಕೆಲ ಪತ್ರಿಕೆಗಳು ಬಿತ್ತರಿಸಿರುವ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಎಲ್ಲ ಇತರ ಬಂಧಿಗಳನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಕಣಿವೆ ರಾಜ್ಯದಲ್ಲಿ ಏನು ನೆಡೆಯುತ್ತಿದೆ ಎಂಬುದರ ಮಾಹಿತಿ ಇಲ್ಲದವರು ಹಬ್ಬಿಸುತ್ತಿರುವ ಇಂತಹ ಆಧಾರ ರಹಿತ ವರದಿಗಳನ್ನು ನಂಬಿ ಮೆಹಬೂಬಾ ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಕಠಿಣ ನಿಲುವು ತಳೆಯಬಾರದು ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ
ಒಮರ್ ಅಬ್ದುಲ್ಲಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮೆಹಬೂಬಾ ಪುತ್ರಿ ಇಲ್ತಿಜಾ ಮುಫ್ತಿ, ಓಮರ್ ಅಬ್ದುಲ್ಲಾ ಗೆ ನಾನು ಅಬಾರಿಯಾಗಿದ್ದೇನೆ. ವದಂತಿಗಳು ಯಾರೊಬ್ಬರಿಗೂ ನೆರವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ, ಅಬ್ದುಲ್ಲಾ ಅವರು ತಮ್ಮ ಪ್ರೀತಿ ಪಾತ್ರರ ಬಂಧನವನ್ನು ನಿಭಾಯಿಸಲು ಕುಟುಂಬಗಳ ಸದಸ್ಯರಿಗೆ ಬಹಳ ಕಷ್ಟವಾಗಿದೆ. ಆದರೆ, ಈ ಉದ್ದೇಶಿತ ಬಿಡುಗಡೆ ಸಂಬಂಧ ಆಧಾರ ರಹಿತ ಸುದ್ದಿಗಳಿಂದಾಗಿ ತಪ್ಪಾಗಿ ಅಭಿನಂದನಾ ಸಂದೇಶಗಳ ರವಾನೆಗೆ ಕಾರಣವಾಗಿದೆ ಎಂದರು.
ಕೆಲವು ಪತ್ರಕರ್ತರು ಮೆಹಬೂಬಾ ಮುಫ್ತಿ ಮತ್ತು ಅವರ ಕುಟುಂಬಕ್ಕೆ ನಿನ್ನೆ ಅನ್ಯಾಯ ಮಾಡಿದ್ದಾರೆ. ಆಗಸ್ಟ್ ೫ ರಿಂದ ಈ ಜನರು ತಮ್ಮ ಮೂಲಗಳಿಂದ ಸತ್ಯವಾದ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಪತ್ರಿಕೆಗಳು ಪ್ರಕಟಿಸುತ್ತಿರುವ ಕಲ್ಪಿತ ಸುದ್ದಿಗಳು, ವರದಿಗಳು ಕಸಕ್ಕೆ ಸಮಾನವಾದವು ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment