ಮೆಸ್ಸಿ ಪ್ರತಿಮೆಗೆ ಮತ್ತೆ ಹಾನಿ

ಬ್ಯೂನಸ್ ಐರಿಸ್, ಡಿ ೬- ವಿಶ್ವ ವಿಖ್ಯಾತ ಹಾಗೂ ಮಹಿಳಾ ಮಣಿಗಳ ಅಚ್ಚುಮಚ್ಚಿನ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಮತ್ತೆ ನಾಶಪಡಿಸಿದ್ದಾರೆ.

ಮೆಸ್ಸಿಯವರ ತವರು ಬ್ಯೂನಸ್ ಐರಿಸ್ ನಲ್ಲಿರುವ ಪ್ರತಿಮೆಗೆ ಹಾನಿ ಮಾಡಲಾಗಿದೆ. ಪ್ರತಿಮೆಯಲ್ಲಿ ಬೂಟು ಮತ್ತು ಚೆಂಡು ಹೊರತುಪಡಿಸಿ ಪ್ರತಿಮೆಗೆ ಸಂಪೂರ್ಣ ಹಾನಿ ಮಾಡಲಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರ ಸ್ಮಾರಕ ಪ್ರತಿಮೆಗಳು ಬ್ಯೂನಸ್ ಐರಿಸ್‌ನಲ್ಲಿದ್ದು, ಅವುಗಳಲ್ಲಿ ಲಿಯೋನೆಲ್ ಮೆಸ್ಸಿ ಪ್ರತಿಮೆ ಮೇಲೆ ೨ನೇ ಸಲ ದಾಳಿ ಮಾಡಲಾಗಿದೆ. ೨೦೧೬ ರಲ್ಲಿ ಮೆಸ್ಸಿ ರಾಷ್ಟ್ರೀಯ ತಂಡದಿಂದ ಹೊರ ಬಂದ ಬಳಿಕ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಆಕರ್ಷಕವಾಗಿದ್ದ ಇದು ಜನರನ್ನು ಸೆಳೆದಿತ್ತು. ೨೦೧೬ ರಲ್ಲಿ ಗ್ಯಾಬ್ರಿಯಲಾ ಸಬಾಟಿನಿಯಾ ಪ್ರತಿಮೆಯಿಂದ ಟೆನ್ನಿಸ್ ರಾಕೆಟ್ ಅಪಹರಿಸಲಾಗಿತ್ತು.

Leave a Comment