ಮೆಸ್ಸಿಗೆ ೬ನೇ ಬಾರಿ ಬ್ಯಾಲನ್ ಡಿ ಓರ್ ಗರಿ

ಪ್ಯಾರಿಸ್, ಡಿ. ೩- ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ವೃತ್ತಿ ಜೀವನದಲ್ಲಿ ಸತತ ಆರನೇ ಬಾರಿ ’ಬ್ಯಾಲನ್ ಡಿ ಓರ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರು.

ಲಿವರ್ಪೂಲ್‌ನಿಂದ ನಾಮ ನಿರ್ದೇಶಿತಗೊಂಡಿದ್ದ ನಾಲ್ವರನ್ನು ಹಿಂದಿಕ್ಕಿ ಬಾರ್ಸಿಲೋನಾದ ಮೆಸ್ಸಿ ಮತ್ತೆ ಈ ಗೌರವಕ್ಕೆ ಪಾತ್ರರಾಗುವ ಮೂಲಕ ಗಮನ ಸೆಳೆದರು.  ಇವರ ನಾಯಕತ್ವದಲ್ಲಿ ಬಾರ್ಸಿಲೋನಾ ತಂಡ ಲಾ ಲೀಗಾ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಆದರೆ, ಬ್ರೆಜಿಲ್ ನಲ್ಲಿ ನಡೆದಿದ್ದ ಕೊಪಾ ಅಮೆರಿಕಾ ಟೂರ್ನಿಯಲ್ಲಿ ಅರ್ಜೆಂಟೀನಾ ಮೂರನೇ ಸ್ಥಾನ ಪಡೆದಿತ್ತು.

ವರ್ಗಿಲ್ ವಾನ್ ರನ್ನರ್ ಅಪ್ ಹಾಗೂ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮೂರನೇ ಸ್ಥಾನ ಪಡೆದರು. ರೊನಾಲ್ಡೊ ವೃತ್ತಿ ಜೀವನದಲ್ಲಿ ಐದು ಬಾರಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮೆಸ್ಸಿ ಈ ಹಿಂದೆ ೨೦೦೯, ೨೦೧೦, ೨೦೧೧, ೨೦೧೨ ಹಾಗೂ ೨೦೧೫ರಲ್ಲಿ ಬ್ಯಾಲನ್ ಡಿ ಓರ್ ಗೆದ್ದಿದ್ದರು.

೩೨ರ ಹರೆಯದ ಮೆಸ್ಸಿ ಪ್ಯಾರೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಯುಎಸ್‌ಎ ವಿಶ್ವಕಪ್ ಸೂಪರ್ ಸ್ಟಾರ್ ಮೇಗನ್ ರಾಪಿನೋಯ್ ಮಹಿಳಾ ವಿಭಾಗದ ಪ್ರಶಸ್ತಿ ಪಡೆದುಕೊಂಡರು. ಅವರು ನಾಯಕತ್ವದಲ್ಲಿ ಅಮೆರಿಕ ಪ್ರಸಕ್ತ ಆವೃತ್ತಿಯಲ್ಲಿ ಫ್ರಾನ್ಸ್ ನಲ್ಲಿ ನಡೆದಿದ್ದ ಫಿಫಾ ಮಹಿಳಾ ವಿಶ್ವಕಪ್ ಚಾಂಪಿಯನ್ ಆಗಿತ್ತು. ಇದೀಗ ಈ ಬಾರಿಯೂ ಬ್ಯಾಲನ್ ಡಿ ಓರ್ ಪ್ರಶಸ್ತಿ ಉಳಿಸಿಕೊಂಡಿದ್ದಾರೆ.

ರಾಪಿನೋಯ್‌ಗೆ ಫ್ರೆಂಚ್ ಕ್ಯಾಪಿಟಲ್ ಚಾಟೆಲೆಟ್ ಥಿಯೇಟರ್‌ಗೆ ಬಂದು ಪ್ರಶಸ್ತಿ ಸ್ವೀಕರಿಸಲಾಗಿಲ್ಲ. ಆದರೆ ಲಿಯೋನೆಲ್ ಮೆಸ್ಸಿ ತನ್ನ ಪತ್ನಿ, ಆಂಟೊನೆಲ್ಲ ರೊಕುಝೋ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಮಾತನಾಡಿದ ಮೆಸ್ಸಿ ೧೦ ವರ್ಷಗಳ ಹಿಂದೆ ಮೊದಲ ಬ್ಯಾಲನ್ ಡಿ ಓರ್ ಗೆದ್ದಾಗ ನನ್ನ ಮೂವರ ಸಹೋದರರು ಮಾರ್ಗದರ್ಶನ ನೀಡಿದ್ದರು. ಇದೀಗ ಸ್ವೀಕರಿಸಿರುವ ಆರನೇ ಪ್ರಶಸ್ತಿಗೆ ನನ್ನ ಪತ್ನಿ ಹಾಗೂ ಮಕ್ಕಳು ಮಾರ್ಗದರ್ಶನ ನೀಡಿದ್ದರು ಎಂದು  ಸಂತಸ ಹಂಚಿಕೊಂಡರು.

Leave a Comment