ಮೆಡಿಕಲ್ ಸ್ಟೋಱ್ಸ್ ಮಾಲೀಕನನ್ನು ಅಪಹರಿಸಿದ್ದ ಸುಲಿಗೆಕೋರರ ಗ್ಯಾಂಗ್ ಬಂಧನ

ಬೆಂಗಳೂರು, ಜೂ ೧೯- ಮೆಡಿಕಲ್ ಸ್ಟೋಱ್ಸ್ ಮಾಲೀಕನನ್ನು ಅಪಹರಿಸಿ ಬೆದರಿಸಿ ಹಣ, ಚಿನ್ನಾಭರಣ ದೊಚ್ಚಿದ್ದ ಸುಲಿಗೆಕೋರರ ಗ್ಯಾಂಗ್ ಅನ್ನು ಬೆಳ್ಳಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಕನ್ನಳ್ಳಿಯ ಅಜಯ್ ಕುಮಾರ್, ಅಲೀಯಾಸ್ ಪಿಂಟು (24) ಜಕ್ಕಸಂದ್ರದ ಶಿವಾನಂದ (25) ಕೋರಮಂಗಲ ವೆಂಕಟಪುರದ ಶ್ರೀಧರ (29) ಹಾಗೂ ಅತ್ತಿಬೆಲೆಯ ರಘುರಾವ್ ಅಲೀಯಾಸ್ ರಘು ಬಂಧಿತ ಸುಲಿಗೆಕೋರರಾಗಿದ್ದಾರೆ.
ಗ್ಯಾಂಗ್ ನಲ್ಲಿದ ವಿನಯ್ ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಬಂಧಿತರಿಂದ ಚಿನ್ನದ ಚೈನ್, ಉಂಗರ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳೆದ ಜೂನ್ 16 ರಂದು ಕಸವನವಳ್ಳಿಯ ಮುಖ್ಯರಸ್ತೆಯ ಲೈಪ್ ಲೈನ್ ಫಾರ್ಮ, ಮೆಡಿಕಲ್ ಸ್ಟೋಱ್ಸ್ ನ ಮಾಲೀಕ ಸುಬ್ರಮಣಿ ಎಂಬುವವರ ಬಳಿ ಬಂದು ನೀನು ಮತ್ತು (ನಶೆ) ಬರುವ ಮಾತ್ರೆಗಳನ್ನು ಮಾರಾಟ ಮಾಡುತ್ತಿಯ ಎಂದು ಬೆದರಿಸಿ ಹೊರಗೆ ಕರೆದು ಆಟೋದಲ್ಲಿ ಅಪಹರಿಸಿ ಪರಾರಿಯಾಗಿದ್ದರು.
ಅಲ್ಲಿಂದ ಎಚ್.ಎಸ್.ಆರ್. ಲೇಔಟ್ ನ ಅಗರ ಕೆರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗ ಕರೆದೊಯ್ದು ಒತ್ತೆಯಾಗಿಟ್ಟುಕೊಂಡು ಒಂದೂವರೆ ಲಕ್ಷ ಹಣ ನೀಡುವಂತೆ ಒತ್ತಾಯಿಸಿ 8 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಚಿನ್ನದ ಉಂಗುರ ಕಸಿದುಕೊಂಡಿದ್ದು. ಸುಬ್ರಮಣಿ ಅವರಿಂದ ಅವರ ಸ್ನೇಹಿತ ಮುನಿರಾಜು ಎಂಬಾತನಿಗೆ ಕರೆ ಮಾಡಿಸಿ 15 ಸಾವಿರ ಹಣ ತರಿಸಿಕೊಂಡು ಅದನ್ನು ಪಡೆದು ಸುಬ್ರಮಣಿ ಅವರನ್ನು ಬಿಟ್ಟು ಕಳುಹಿಸಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವದ ಸಿಬ್ಬಂದಿ ಆರೋಪಿಗಳು ದೊಡ್ಡಕನ್ನಳ್ಳಿಯ ಬಸ್ ನಿಲ್ದಾಣದ ಬಳಿ ಅಪಹರಣದಿಂದ ಬಂದ ಹಣದಿಂದ ಬಾರ್ ಗೆ ಹೋಗಿ ಪಾರ್ಟಿ ಮಾಡುತ್ತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment