ಮೆಟ್ರೋ ಸಂಚಾರ ಬಹುದಿನಗಳ ಕನಸು ನನಸು

ಬೆಂಗಳೂರು, ಜೂ.೧೭: ಭಾರತದ ಅತಿ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿರುವ ನಗರದ ಹೃದಯ ಭಾಗದಲ್ಲಿರುವ ಕೆಂಪೇಗೌಡ ಮೆಟ್ರೋ ನಿಲ್ದಾಣ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಇಂದು ಲೋಕಾರ್ಪಣೆಗೊಳ್ಳುತ್ತಿದ್ದು, ಇದರಿಂದ ನಗರದ ನಾಲ್ಕು ದಿಕ್ಕುಗಳಿಗೂ ಸಂಚಾರ ಸಾಧ್ಯವಾಗಲಿದೆ. ಭಾನುವಾರದಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
ಮೊದಲ ಹಂತದ ರೈಲು ಸಂಚಾರ ಆರಂಭಗೊಳ್ಳುತ್ತಿರುವಂತೆ ಮೆಟ್ರೋ ರೈಲಿನ ಸಮಯವನ್ನು ವಿಸ್ತರಿಸಲಾಗಿದೆ. ಇದುವರೆಗೆ ರಾತ್ರಿ ೧೦ ಗಂಟೆಯವರೆಗೆ ಸಂಚರಿಸುತ್ತಿದ್ದ ಮೆಟ್ರೋ ಇನ್ನು ಮುಂದೆ ರಾತ್ರಿ ೧೧.೨೫ರವರೆಗೆ ಸಂಚರಿಸಲಿದೆ. ಇದರಿಂದ ರಾತ್ರಿ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ.
ಜೂನ್ ೧೯ರಿಂದಲೇ ಈ ಸಮಯ ಅನ್ವಯವಾಗಲಿದೆ. ಇದೇ ವೇಳೆ ಬೆಳಗ್ಗೆ ೬ಕ್ಕೆ ಆರಂಭವಾಗುತ್ತಿದ್ದ ಮೆಟ್ರೋ ಇನ್ನು ಮುಂದೆ ಬೆಳಗ್ಗೆ ೫ ಗಂಟೆಗೆ ಆರಂಭವಾಗಲಿದ್ದು, ಬೆಳ್ಳಂಬೆಳಗ್ಗೆ ದೂರದೂರುಗಳಿಗೆ ಪ್ರಯಾಣ ಮಾಡುವವರಿಗೆ ವರದಾನವಾಗಲಿದೆ. ಬೆಳಗ್ಗೆ ೫ ಗಂಟೆಗೆ ಕೇವಲ ಮೆಟ್ರೋ ಪೈಲಟ್ ಗಳಿಗೆ (ಚಾಲಕರಿಗೆ) ಮಾತ್ರ ಪ್ರವೇಶಾವಕಾಶವಿದ್ದ ರೈಲಿನಲ್ಲಿ ಇನ್ನು ಮುಂದೆ ಸಾರ್ವಜನಿಕರ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ.
ಕೆಂಪೇಗೌಡ ನಿಲ್ದಾಣ ಹೊರತಾಗಿ ನಗರದ ೪ ದಿಕ್ಕುಗಳಿಂದ ಆರಂಭಗೊಳ್ಳುವ ಮೆಟ್ರೋ ಮಾರ್ಗಗಳಲ್ಲಿ ಬೇರೆ ಬೇರೆ ಅವಧಿಗೆ ಮೆಟ್ರೋ ಕೊನೆ ರೈಲು ಸಂಚರಿಸಲಿದೆ. ರಾತ್ರಿ ೧೦.೫೦ಕ್ಕೆ ನಾಗಸಂದ್ರದಿಂದ ಯಲಚೇನಹಳ್ಳಿಗೆ ಕೊನೆ ರೈಲು ಇದ್ದು, ಬೈಯ್ಯಪ್ಪನಹಳ್ಳಿ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಕೊನೆ ರೈಲು ರಾತ್ರಿ ೧೧ಕ್ಕೆ ರಾತ್ರಿ ಹೊರಡಲಿದೆ. ನಾಯಂಡಹಳ್ಳಿಯಿಂದ ಕೊನೆಯ ರೈಲು ರಾತ್ರಿ ೧೧.೦೫ಕ್ಕೆ ಬಿಡಲಿದೆ.

ವಿಧಾನಸೌಧದಲ್ಲಿ ಕಾರ್ಯಕ್ರಮ
ಇಂದು ಸಂಜೆ ವಿಧಾನಸೌಧದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉತ್ತರ-ದಕ್ಷಿಣ ಕಾರಿಡಾರ್ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕೇಂದ್ರ ಸಚಿವರು, ರಾಜ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಮಾರ್ಗದಲ್ಲಿ ಅಧಿಕಾರಿಗಳೊಂದಿಗೆ ಸಂಚರಿಸಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಮೆಟ್ರೋ ಕಾಮಗಾರಿಗಾಗಿ ಸುಮಾರು ವರ್ಷಗಳ ಹಗಲಿರುಳು ಶ್ರಮಿಸಿದ್ದ ಬಿಎಂಆರ್ ಸಿಎಲ್ ಸಿಬ್ಬಂದಿಗಳು ಕೂಡ ಮೆಟ್ರೋ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಸುಮಾರು ೬೦೦ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮಕ್ಕಾಗಿ ಸುಮಾರು ೨೫೦೦ ಪೊಲೀಸ್ ಸಿಬ್ಬಂದಿಗಳನ್ನು ರಕ್ಷಣೆಗಾಗಿ ನಿಯೋಜಿಸಲಾಗಿದ್ದು, ಪ್ರಣಬ್ ಮುಖರ್ಜಿ ಆಗಮಿಸುವ ಎಚ್‌ಎಎಲ್ ವಿಮಾನ ನಿಲ್ದಾಣ ಹಾಗೂ ರಾಷ್ಟ್ರಪತಿಗಳು ಉಳಿದುಕೊಳ್ಳುವ ಹೋಟೆಲ್‌ವರೆಗೂ ಈ ಸಿಬ್ಬಂದಿಗಳು ರಕ್ಷಣೆ ಕಲ್ಪಿಸಲಿದ್ದಾರೆ. ವಿಧಾನಸೌಧದ ಅವರಣದಲ್ಲಿ ಸುಮಾರು ೨ ಸಾವಿರ ಮಂದಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಯಾಣ ದರ ಹೆಚ್ಚಳ
ಪೂರ್ಣಪ್ರಮಾಣದ ಸೇವೆ ನೀಡುತ್ತಿದ್ದಂತೆ ಬಿಎಂಆರ್‌ಸಿಎಲ್ ಪ್ರಯಾಣ ದರವನ್ನು ಶೇಕಡಾ ೧೦ರಷ್ಟು ಹೆಚ್ಚಿಸಲು ಮುಂದಾಗಿದೆ. ‘ಮೆಟ್ರೊ ಕಾರ್ಯಾಚರಣೆಯಿಂದ ಇದುವರೆಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸುವ ಸಲುವಾಗಿ ಮೊದಲ ಹಂತದ ಎಲ್ಲಾ ಮಾರ್ಗಗಳಲ್ಲೂ ಶೇ. ೧೦ರಷ್ಟು ದರ ಪರಿಷ್ಕರಣೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.

ಪಾರ್ಕಿಂಗ್ ವ್ಯವಸ್ಥೆ
ಮೆಟ್ರೋ ಯೋಜನೆಯ ಮೊದಲ ಹಂತದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಆಗಮಿಸುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ವಿಧಾನಸೌಧ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸುರಂಜನ್ ರಸ್ತೆ ಜಂಕ್ಷನ್‌ನಿಂದ ಎಎಸ್‌ಸಿ ಸೆಂಟರ್, ಟ್ರಿನಿಟಿ ರಸ್ತೆಯ ಚಚ್‌ರ್, ಎಂ.ಜಿ.ರಸ್ತೆ, ಡಿಕಸನ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ, ಅಲಿ ಆಸ್ಕರ್ ರಸ್ತೆ, ಇನ್ಫಿಂಟ್ರಿ ರಸ್ತೆ, ಡಾ.ಬಿ.ಆರ್.ಅಂಬೇ ಡ್ಕರ್ ವೀಧಿ, ದೇವರಾಜ್ ಅರಸ್ ರಸ್ತೆಯಲ್ಲಿ ಎಜಿಎಸ್ ಜಂಕ್ಷನ್‌ನಿಂದ ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ವಿಧಾನ ಸೌಧ ಸುತ್ತಮುತ್ತ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಜೆ ೪ರಿಂದ ರಾತ್ರಿ ೮ರ ವರೆಗೆ ನಿಷೇಧಿಸಲಾಗಿದೆ.
ಅಂತೆಯೇ ವಿಕಾಸಸೌಧ ನಿಲುಗಡೆ ಸ್ಥಳದ ಸೆಲ್ಲರ್ ೧, ೩, ವಿಧಾನಸೌಧ ಪಶ್ಚಿಮ ದ್ವಾರದ ಕೆಂಗಲ್ ಹನುಮಂತಯ್ಯ ವೃತ್ತದಿಂದ ಡಿಸ್ಪೆನ್ಸರಿ ವರೆಗೆ ಶಾಸಕರು ಮತ್ತು ಸಚಿವರ ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಮೆಜೆಸ್ಟಿಕ್ ನಿಲ್ದಾಣದ ವಿಶೇಷತೆ

ಭಾರತದ ಅತಿದೊಡ್ಡ ಮೆಟ್ರೋ ನಿಲ್ದಾಣ
ಏಷ್ಯಾದ ಎರಡನೇ ಅತಿದೊಡ್ಡ
ವಿಸ್ತೀರ್ಣ; ೬ ಫುಟ್ಬಾಲ್ ಮೈದಾನದಷ್ಟು
ಒಟ್ಟು ಅಭಿವೃದ್ಧಿಪಡಿಸಲಾದ ಜಾಗ
೪೮,೫೭೫ ಚ.ಮೀ
ಸುರಂಗ ಪ್ರದೇಶ
೩೧೫೩೨ ಚ.ಮೀಟರ್

ಬಿಎಂಟಿಸಿ ಫೀಡರ್ ಬಸ್ ಸೌಲಭ್ಯ

ಉತ್ತರ-ದಕ್ಷಿಣ (ನಾಗಸಂದ್ರ-ಯಲಚೇನಹಳ್ಳಿ) ಮೆಟ್ರೋ ರೈಲು ನಿಲ್ದಾಣಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಮೆಟ್ರೋ ಸಂಪರ್ಕ ಸಾರಿಗೆ ಸೇವೆಗಳನ್ನು ಒದಗಿಸುವ ಯೋಜನೆಯನ್ನು ರೂಪಿಸಲಾಗಿರುತ್ತದೆ.
ಉತ್ತರ-ದಕ್ಷಿಣ ಮಾರ್ಗದಲ್ಲಿ ಒಟ್ಟು ೧೩ ವಿವಿಧ ಮಾರ್ಗಗಳಿಂದ ೧೨೦ ಅನುಸೂಚಿಗಳೊಂದಿಗೆ ೧೯೧೮ ಏಕಮುಖ ಸುತ್ತುವಳಿಗಳನ್ನು ಪ್ರತಿ ೧೦ ರಿಂದ ೧೫ ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ಮಾಡಲು ಹಾಗೂ ಪ್ರಸ್ತುತ ಆಚರಣೆಯಲ್ಲಿರುವ ಎರಡು ಮಾರ್ಗಗಳನ್ನು ಸಾರ್ವಜನಿಕರ ಕೋರಿಕೆಯಂತೆ ವಿಸ್ತರಣೆಗೊಳಿಸಿ ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ. ಈ ಸೇವೆ ಇದೇ ೧೯ರಿಂದ ಪ್ರಾರಂಭವಾಗಲಿದೆ.

ಯಲಚೇನಹಳ್ಳಿ-ನಾಯಂಡನಹಳ್ಳಿ ಮೆಟ್ರೋ ನಿಲ್ದಾಣ
ಮಾರ್ಗ: ಮೀನಾಕ್ಷಿ ಟೆಂಪಲ್, ಕೋಣನಕುಂಟೆ ಕ್ರಾಸ್, ಉತ್ತರಹಳ್ಳಿ, ಪಿಇಎಸ್ ಕಾಲೇಜು

ಯಲಚೇನಹಳ್ಳಿ-ನಾಯಂಡನಹಳ್ಳಿ ಮೆಟ್ರೊ
ಮಾರ್ಗ; ಗೊಟ್ಟಿಗೆರೆ, ಅಂಜನಾಪುರ, ಇಸ್ರೋ ಬಡಾವಣೆ, ಕತ್ರಿಗುಪ್ಪೆ

ಸೌತ್‌ಎಂಡ್ ವೃತ್ತ- ಕೆಂಗೇರಿ ಟಿಟಿಎಂಸಿ
ಮಾರ್ಗ: ಗಾಂಧಿಬಜಾರ್, ಮುನೇಶ್ವರ ಬ್ಲಾಕ್, ಟಿಂಬರ್ ಯಾರ್ಡ್

ಬನಶಂಕರಿ-ಜಯನಗರ ಬಸ್ ನಿಲ್ದಾಣ
ಮಾರ್ಗ: ಕೋಣನಕುಂಟೆ ಕ್ರಾಸ್, ಜಂಬೂಸವಾರಿ ದಿಣ್ಣೆ, ಯಲಚೇನಹಳ್ಳಿ

ಆರ್‌ವಿ ರಸ್ತೆ-ಬನಶಂಕರಿ
ಮಾರ್ಗ: ಜಯನಗರ ಬಸ್ ನಿಲ್ದಾಣ, ಜೆಪಿ ನಗರ, ಕೋಣನಕುಂಟೆ ಕ್ರಾಸ್

ಲಾಲ್‌ಬಾಗ್ ಮೆಟ್ರೊ-ವಿಜಯನಗರ
ಮಾರ್ಗ: ಆರ್.ಕೆ.ಆಶ್ರಮ, ಅವಲಹಳ್ಳಿ ಬಿಡಿಎ ಪಾರ್ಕ್, ನಾಯಂಡಹಳ್ಳಿ, ಅತ್ತಿಗುಪ್ಪೆ

ಎಸ್‌ವಿ ರಸ್ತೆ-ವೈಟ್‌ಫೀಲ್ಡ್ ಟಿಟಿಎಂಸಿ
ಮಾರ್ಗ: ಬೆನ್ನಿಗಾನಹಳ್ಳೀ, ಟಿನ್‌ಫ್ಯಾಕ್ಟರಿ, ಹೂಡಿ, ಗ್ರಾಫೈಟ್ ಇಂಡಿಯಾ

ಎಸ್‌ವಿ ರಸ್ತೆ-ತಂಬುಚೆಟ್ಟಿಪಾಳ್ಯ
ಮಾರ್ಗ: ಬಿಇಎಂಎಲ್ ಗೇಟ್, ಕಸ್ತೂರಿ ನಗರ, ಭುವನಗಿರಿ, ಕಲ್ಕೆರೆ ಕ್ರಾಸ್

ಬಯ್ಯಪ್ಪನಪಾಳ್ಯ-ಕೆ.ಆರ್‌ಪುರ
ಮಾರ್ಗ: ಕಸ್ತೂರಿನಗರ, ಬಿ.ಚನ್ನಸಂದ್ರ ಸೇತುವೆ, ಐಟಿಐ ಗೇಟ್

ಎಂ.ಜಿ.ರಸ್ತೆ-ಕಲ್ಯಾಣ್ ನಗರ
ಮಾರ್ಗ: ಇನ್ನರ್ ರಿಂಗ್ ರಸ್ತೆ, ದೊಮ್ಮಲೂರು, ಲಿಂಗರಾಜಪುರ, ಕಲ್ಯಾಣನಗರ

ಇಂದಿರಾನಗರ-ಸೆಂಟ್ರಲ್ ಸಿಲ್ಕ್ ಬೋರ್ಡ್
ಮಾರ್ಗ: ಇಂದಿರಾನಗರ ಮೆಟ್ರೋ, ದೊಮ್ಮಲೂರು ಬ್ರಿಡ್ಜ್, ಇನ್ನರ್ ರಿಂಗ್ ರಸ್ತೆ

ಬಯ್ಯಪ್ಪನಪಾಳ್ಯ-ಐಟಿಪಿಎಲ್
ಮಾರ್ಗ: ಮಹದೇವಪುರ, ಗರುಡಾಚಾರ್ ಪಾಳ್ಯ

ವಿಜಯನಗರ-ಬನಶಂಕರಿ ಬಸ್ ನಿಲ್ದಾಣ
ಮಾರ್ಗ: ಅತ್ತಿಗುಪ್ಪೆ, ದೀಪಾಂಜಲಿನಗರ, ನಾಯಂಡಹಳ್ಳಿ, ಕದಿರೇನಹಳ್ಳಿ ಪಾರ್ಕ್

ವಿಜಯನಗರ-ಮಾಲಗಾಲ
ಮಾರ್ಗ: ಚಂದ್ರಾಲೇಔಟ್, ಉಲ್ಲಾಳ, ಸುಂಕದಕಟ್ಟೆ

ನಾಯಂಡಹಳ್ಳಿ-ರಾಜರಾಜೇಶ್ವರಿನಗರ
ಮಾರ್ಗ: ಆರ್‌ಆರ್ ಟೆಂಪಲ್, ಬಿಇಎಂಎಲ್ ೫ನೇ ಹಂತ

Leave a Comment