ಮೆಚ್ಚುಗೆಗೆ ಪಾತ್ರವಾಗಿದೆ ಶಿವಣ್ಣ ಸಹಾಯ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ವೃದ್ಧರೊಬ್ಬರಿಗೆ ಹಣ ನೀಡಿ ಮಾನವೀಯತೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಮೆಚ್ಚುಗೆ ಪಾತ್ರವಾಗಿದೆ.
ಇತ್ತೀಚೆಗೆ ಶಿವರಾಜ್‍ಕುಮಾರ್ ಅವರು ತಮ್ಮ ನಿವಾಸ ನಾಗಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದ ವೇಳೇಯಲ್ಲಿ ರಸ್ತೆ ಬದಿಯಲ್ಲಿ ಬಿಸಿಲಲ್ಲಿ ನಿಂತಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ನೋಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಶಿವಣ್ಣ ವ್ಯಕ್ತಿ ನಿಂತಿದ್ದ ಜಾಗದಿಂದ ಸ್ವಲ್ಪ ಮುಂದೆ ಹೋಗಿದ್ದಾರೆ. ಬಳಿಕ ಅವರನ್ನು ನೋಡಿ ಮತ್ತೆ ಕಾರು ರಿವರ್ಸ್ ಮಾಡಿ ವಾಪಸ್ ಬಂದು ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಂಡು ವೃದ್ಧನಿಗೆ ಕೊಟ್ಟಿದ್ದಾರೆ.
ಇನ್ನು ಶಿವರಾಜ್‍ಕುಮಾರ್ ಅವರು ಹಣ ನೀಡುತ್ತಿರುವಾಗ ಪಕ್ಕದಲ್ಲಿದ್ದ ವ್ಯಕ್ತಿ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಈ ಫೋಟೋದಲ್ಲಿ ಶಿವಣ್ಣ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಸ್ವಲ್ಪ ಗಮನಿಸಿದಾಗ ಗೊತ್ತಾಗುತ್ತದೆ. ಹಣ ನೀಡಿದ ನಂತರ ಶಿವಣ್ಣ ಫೋಟೋ ಕ್ಲಿಕ್ಕಿಸಿದವರಿಗೆ ಒಂದು ಲುಕ್ ಕೊಟ್ಟು ಅಲ್ಲಿಂದ ಹೊರಟು ಹೋದರು ಎನ್ನಲಾಗಿದೆ.

Leave a Comment