ಮೆಕ್ಕೇಜೋಳದ ಬಿತ್ತನೆ ಆರಂಭ

ದಾವಣಗೆರೆ.ಜು.1; ದಿನ ದಿನವೂ ಮುಗಿಲಕಡೆ ನೋಡಿ ನೋಡಿ ಸುಸ್ತಾದ ರೈತರು ಇನ್ನೆಷ್ಟು ದಿನ ವರುಣನನ್ನು ಕಾಯುವುದು ಎಂದು ದೇವರ ಮೇಲೆ ಭಾರ ಹಾಕಿ ಮೆದು ಭೂಮಿಯ ರೈತರು ಬಿತ್ತನೆಯ ಸಮಯ ಮೀರುವುದೆಂದು ತಾಳಲಾರದೆ ಕಳೆದ ಎರಡು ದಿನಗಳ ಹಿಂದೆ ಮೆಕ್ಕೇಜೋಳದ ಬಿತ್ತನೆಗೆ ಮುಂದಾಗಿದ್ದಾರೆ ಅದು ಗಟ್ಟಿ ಮನಸ್ಸಿನಿಂದ ಅರೆಬರೆ ಹಸಿಯಲ್ಲಿ ಬೀಜ ನೆಲಕ್ಕೆ ಹಾಕಿ ಅನುದಿನ ಮುಗಿಲ ಮೊರೆ ಹೋಗಿರಲು ಆಗಾಗ ತುಂತುರು ಮಳೆಯ ಸಿಂಚನವಾಗುತ್ತಿದ್ದು. ಬೀಜ ಬಿತ್ತಿದ ರೈತರಿಗೆ ತುಸು ನೆಮ್ಮದಿ ತಂದಿದೆ, ಕೃಷಿ ಇಲಾಖೆಯ ಆಧುನಿಕ ಯಂತ್ರಕ್ಕೆ ಈಗ ಬಹುತೇಕ ರೈತರು ಮಾರುಹೋಗಿದ್ದಾರೆ. ಒಂದು ಕಡೆ ಬೀಜ ಮತ್ತೊಂದು ಕಡೆ ಗೊಬ್ಬರ ಹಾಕಿದರೆ ಸಾಕು ಬಿತ್ತನೆ ಜರೂರು ಸಾಗುತ್ತದೆ ಬೀಜ ಮತ್ತು ಗೊಬ್ಬರ ಖಾಲಿಯಾದಂತೆ ಆಗಾಗ ನೋಡಿಕೊಂಡು ತೊಟ್ಟಿಯಲ್ಲಿ ಒಬ್ಬ ವ್ಯಕ್ತಿ ಹಾಕುತ್ತಿದ್ದರೆ ಸಾಕು ಬಿತ್ತನೆ ನಿರಾಯಾಸವಾಗಿ ನಡೆಯುತ್ತಿರುತ್ತದೆ. ಕಾರ್ಮಿಕರ ಕೊರತೆಯಲ್ಲಿ ಈ ಆಧುನಿಕ ಕೂರಿಗೆ ನಿಜಕ್ಕೂ ರೈತರ ಪಾಲಿಗೆ ವರದಾನವಾಗಿದೆ ಎಂದು ಹೇಳುತ್ತಾರೆ. ಚಿಕ್ಕ ಕೋಗಲೂರು ಗ್ರಾಮದ ರೈತ ಚಂದ್ರಪ್ಪ ದಿನಕ್ಕೆ ಕನಿಷ್ಟ ಐದಾರು ಎಕರೆ ಬಿತ್ತನೆಯಾಗುತ್ತದೆ. ದುಬಾರಿ ಎತ್ತಿನ ಬೇಸಾಯ ಮತ್ತು ಏಳೆಂಟು ಜನ ಗೊಬ್ಬರ ಮತ್ತು ಬೀಜ ಹಾಕುವ ಜನರನ್ನು ಹೊಂದಿಸಿಕೊಂಡು ಹೋಗುವುದು ಅಷ್ಟೇ ಕಠಿಣಕರವಾಗಿದೆ ಮತ್ತು ಇದಕ್ಕಿಂತಲೂ ಖರ್ಚು ಹೆಚ್ಚಾಗುತ್ತದೆ ಆದಕಾರಣ ಈ ಆಧುನಿಕ ತಂತ್ರಜ್ಞಾನದ ಕೂರಿಗೆ ನಿಜಕ್ಕೂ ರೈತರ ಪಾಲಿಗೆ ವರದಾನವಾಗಿದೆ ಎಂದು ಹೇಳಬಹುದಾಗಿದೆ ಎನ್ನುತ್ತಾರೆ ಗೊಲ್ಲರ ಹಳ್ಳಿಯ ರವಿಕುಮಾರ. ಕೃಷಿಇಲಾಖೆಯ ಆಧುನಿಕ ತಂತ್ರಜ್ಞಾನದ ಕೂರಿಗೆಯಲ್ಲಿ ಮೆಕ್ಕೇ ಜೋಳದ ಬಿತ್ತನೆಮಾಡುತ್ತಿರುವ ದೃಶ್ಯ ಯಂತ್ರ ಚಾಲಕನ ಜೊತೆಗೆ ಒಬ್ಬ ವ್ಯಕ್ತಿ ಬೀಜ ಮತ್ತು ಗೊಬ್ಬರ ಖಾಲಿಯಾದಂತೆ ನೋಡಿಕೊಂಡು ಹಾಕುವ ವ್ಯಕ್ತಿಯೊಬ್ಬನಿದ್ದರೆ ಸಾಕು.

Leave a Comment