ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಧಾರವಾಡ, ಆ 14: ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಕೆಲಗೇರಿ ಹತ್ತಿರ ಇಂದು ಬೆಳಿಗ್ಗೆ ನಡೆದಿದೆ.
ರತ್ನವ್ವ ಮೇದಾರ (30) ಎಂಬ ಮಹಿಳೆಯೇ ತಮ್ಮ ಮೂವರು ಗಂಡುಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದವಳು.
ಘಟನೆ ವಿವರ:
ಇವಳು ಇಂದು ಬೆಳಗಿನ ಜಾವ ತನ್ನ ಮೂವರು ಗಂಡುಮಕ್ಕಳೊಂದಿಗೆ ಏಕಾಏಕಿ ಕೆಲಗೇರಿ ಕೆರೆಗೆ ಹಾರಿದ್ದಾಳೆ. ಇದನ್ನು ಗಮನಿಸಿದ ಸ್ಥಳಿಯರು ತಕ್ಷಣ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಮೇಲಕ್ಕೆ ಎತ್ತಿ ರಕ್ಷಿಣೆ ಮಾಡಿದ್ದಾರೆ. ಒಂದು ಮಗು ನಾಪತ್ತೆಯಾಗಿದ್ದು,  ಶೋಧಕಾರ್ಯ ಮುದುವರೆದಿದೆ.
ರತ್ನವ್ವಳನ್ನು ಜಮಖಂಡಿ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಪಂಚಮಿ ಹಬ್ಬದ ನಿಮಿತ್ತ ರತ್ನವ್ವ ತವರೂರಿಗೆ ಬಂದಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸದ್ಯ ತಾಯಿ ಹಾಗೂ ಮಕ್ಕಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Comment