ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

 

ಜ್ಞಾನ ವಿಶ್ವದರ್ಜೆಗೇರಲಿ : ಡಾ.ಪ್ರಕಾಶ್

ಕಲಬುರಗಿ,ಮಾ.15-“ನಾವು ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಷಯಗಳನ್ನು ಅಧ್ಯಯನ ಮಾಡುವುದರ ಜೊತೆಗೆ ” ಪ್ರಕೃತಿ” ಪುಸ್ತಕವನ್ನು ಓದಬೇಕು, ಪ್ರಕೃತಿಯೊಂದಿಗೆ ನಡೆಯೇಕು, ಪ್ರಕೃತಿಯಿಂದ ಕಲಿಯುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಜ್ಞಾನವನ್ನು ವಿಶ್ವದರ್ಜೆಯಾಗುವಂತೆ ಮಾಡಬೇಕು” ಎಂದು ಸಿ.ಎಫ್.ಟಿ.ಆರ್.ಐ. ಮಾಜಿ ನಿರ್ದೇಶಕ ಪದ್ಮಶ್ರೀ ಪುರಸ್ಕೃತ ಡಾ.ವಿ.ಪ್ರಕಾಶ ಹೇಳಿದರು.

ಗುಲಬರ್ಗಾ  ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಭವನದಲ್ಲಿಂದು ಹಮ್ಮಿಕೊಂಡಿದ್ದ ವಿವಿಯ 37ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಜಾಗತಿಕ ತಾಪಮಾನದ ಬಗೆಗಿನ ಮಾತುಕತೆ, ವಾತಾವರಣದ ಮೇಲೆ ಅದರ ಪರಿಣಾಮ, ಹವಾಮಾನ, ಕೃಷಿ ಭೂಮಿಯ, ನೀರಿನ ಮತ್ತು ನೈಸರ್ಗಿಕ ಸಂಪನ್ಮೂಲದ ಸವಕಳಿ, ಅತಿಯಾದ ಮಾಲಿನ್ಯ ಮತ್ತು ಬ್ರಹ್ಮಾಂಡದಲ್ಲಿನ ಓಝೋನ್ ವಲಯದಲ್ಲಿ ರಂಧ್ರವಾಗಿರುವುದು ಚರ್ಚೆಯ ವಿಷಯಗಳಾಗಿವೆ. ಏಕೆಂದರೆ ನಾವು ಪ್ರಕೃತಿಯನ್ನು ಮಿತಿಮೀರಿ ಉಪಯೋಗಿಸುತ್ತಿದ್ದೇವೆ. ಆದರೆ ಜೀವನ ಶೈಲಿ ವ್ಯವಸ್ಥಿತವಾಗಿ ಸಂಘಟಿತವಾಗಿದೆ ಮತ್ತು ಚಟುವಟಿಕೆಗಳು ಸಿಕ್ಕಿಬಿದ್ದಿವೆ. ಮತ್ತು ಅದರಿಂದ ತಪ್ಪಿಸಿಕೊಳ್ಳುವ ಮಾರ್ಗವಿಲ್ಲ ಎಂದರು.

ಜನರು ಜಾಗತಿಕ ತಾಪಮಾನದ ಬಗ್ಗೆ ಹೆಚ್ಚೆಚ್ಚು ಮಾತನಾಡುತ್ತಿದ್ದಾರೆಯೇ ಹೊರತು ಅದನ್ನು ತಡೆಯುವಲ್ಲಿ ಏನನ್ನು ಮಾಡುತ್ತಿಲ್ಲ. ಮಾತ್ರವಲ್ಲ ನಮ್ಮ ಪೂರ್ವಜರು ನಮಗಿತ್ತ ಭೂಮಿಯನ್ನು ಉಳಿಸುವುದಾಗಲಿ ಮತ್ತು ಅದು ಹೇಗಿತ್ತೋ ಹಾಗೆ ನಮ್ಮ ಮೊಮ್ಮಕ್ಕಳಿಗೆ ಮತ್ತು ಮರಿಮಕ್ಕಳಿಗೆ ಹಸ್ತಾಂತರಿಸಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ಒಂದು ಸವಾಲಾಗಿದೆ ಎಂದು ಹೇಳಿದರು. @h18 = ಮೂವರಿಗೆ ಗೌರವ ಡಾಕ್ಟರೇಟ್

ಚಿಕ್ಕಬಳ್ಳಾಪುರ ಜಿಲ್ಲೆಯ ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೀದರ ಜಿಲ್ಲೆಯ ಚಿದಂಬರ ಆಶ್ರಮದ  ಶಿವಕುಮಾರ ಮಹಾ ಸ್ವಾಮೀಜಿ ಹಾಗೂ ಪಂಡಿತ ವೀರಭದ್ರಪ್ಪ ಗಾದಗೆ  ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ 29183 ವಿದ್ಯಾರ್ಥಿಗಳಿಗೆ  ವಿವಿಧ ಪದವಿ ಪ್ರದಾನ ಮಾಡಲಾಯತು. 76 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 237 ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿ, 9 ವಿದ್ಯಾರ್ಥಿಗಳಿಗೆ ನಗದು ಬಹುಮಾನ, 28861 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪ್ರದಾನ ಮಾಡಲಾಯಿತು.

@h18 = ಶೈಲಜಾ, ಅಂಕಿತಾಗೆ ಚಿನ್ನದ ಪದಕ

ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಶೈಲಜಾ ಶರಣಗೌಡ  ಮತ್ತು ಮ್ಯಾನೇಜ್ ಮೆಂಟ್ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಅಂಕಿತಾ ಅವರು ತಲಾ 8 ಚಿನ್ನದ ಪದಕ ಪಡೆಯುವುದರ ಮೂಲಕ ಚಿನ್ನದ ವಿದ್ಯಾರ್ಥಿನಿಯರಾಗಿ ಹೊರಹೊಮ್ಮಿದರು.

ಕುಲಪತಿ ಪ್ರೊ.ಎಸ್.ಆರ್.ನಿರಂಜನ್,  ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎಂ.ಮದರಿ, ಹಣಕಾಸು ಅಧಿಕಾರಿ ಪ್ರೋ.ಲಕ್ಷ್ಮಣ ರಾಜನಾಳಕರ ಸೇರಿದಂತೆ ವಿವಿಧ ಅಧ್ಯಯನ ವಿಭಾಗದ ಮುಖ್ಯಸ್ಥರು ಇದ್ದರು.

Leave a Comment