ಮೂಲ ಸೌಕರ್ಯಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ದೇವದುರ್ಗ.ಫೆ.12- ಮನೆ ಮೂಲಭೂತ ಸೌಲಭ್ಯಕ್ಕಾಗಿ ತಾಲೂಕು ವ್ಯಾಪ್ತಿಗೆ ಬರುವ ಅತಿಕ್ರಮಣಗೊಂಡಿರುವ ಪುರಸಭೆ ಸಾರ್ವಜನಿಕ ರಸ್ತೆ ತೆರವುಗೊಳಿಸುವಂತೆ ಒತ್ತಾಯಿಸಿ ಮಲ್ಲಿಕಾರ್ಜುನ ಅವರು ನಿನ್ನೆ ಮದ್ಯಾಹ್ನದಿಂದ ಕುಟುಂಬ ಸಮೇತವಾಗಿ ರಸಭೆ ಕಾರ್ಯಲಯದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಅತಿಕ್ರಮಿತ ಸ್ಥಳವನ್ನು ನೋಟೀಸ್ ನೀಡಿದ ಮೂರು ದಿನದೊಳಗೆ ತೆರವುಗೊಳಿಸುವುದು ನಿಯಮವಿದ್ದರೂ, 2017 ಡಿಸೆಂಬರ್ 16ರಂದು ಜಿಲ್ಲಾಧಿಕಾರಿಗಳ ನೋಟೀಸ್ ನೀಡಿದ್ದರೂ, ಸಾರ್ವಜನಿಕ ರಸ್ತೆಯಲ್ಲಿ ಅತಿಕ್ರಮವಾಗಿ ಶೌಚಾಲಯ ನಿರ್ಮಿಸಿಕೊಂಡ ಮಲ್ಲಪ್ಪ ಹೂಗಾರ ಅವರ ಅನಧಿಕೃತ ದ್ವಾರವನ್ನು ಇಲ್ಲಿವರೆಗೂ ತೆರವುಗೊಳಿಸಿರುವುದಿಲ್ಲ.
ಕೂಡಲೇ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಲ್ಲಿಕಾರ್ಜುನ ಅವರು ಕುಟುಂಬ ಸಮೇತರಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಸದರಿ ಸ್ಥಳಕ್ಕೆ ಇಂದು ಬೆಳಿಗ್ಗೆ ಪುರಸಭೆ ಮುಖ್ಯಾಧಿಕಾರಿಗಳು ಭೇಟಿ ನೀಡಿ ಕ್ರಮ ಜರುಗಿಸುವುದಾಗಿ ಮಲ್ಲಿಕಾರ್ಜುನ ಅವರಿಗೆ ಭರಸವೆ ನೀಡಿದರೂ, ಕೂಡ ಮಲ್ಲಿಕಾರ್ಜುನ ಅವರು ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.

Leave a Comment