ಮೂಲ ಕಾಂಗ್ರೆಸ್ V/S ವಲಸಿಗ ಕಾಂಗ್ರೆಸ್ ಅನ್ನೋ ಮಾತೇ ಇಲ್ಲ

 

ಕಲಬುರಗಿ,ಅ.9-ಕಾಂಗ್ರೆಸ್ ಸೇರಿದ ಮೇಲೆ ಎಲ್ಲರೂ ಕಾಂಗ್ರೆಸ್ ನವರೆ ಇಲ್ಲಿ ಮೂಲ ಕಾಂಗ್ರೆಸ್ ವರ್ಸಸ್ ವಲಸಿಗ ಕಾಂಗ್ರೆಸ್ ಅನ್ನುವ ಮಾತೇ ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಡಿಫರೆನ್ಸ್ ಆಫ್ ಓಪಿನಿಯನ್ ಇರಬಹುದು. ಅದನ್ನೇ ಮಾಧ್ಯಮಗಳು ” ಚಾರಾಣೆ ಕೀ ಮುರ್ಗಿ, ಬಾರಾಣೇ ಕಾ ಮಸಾಲಾ” ಅನ್ನೋ ರೀತಿಯಲ್ಲಿ ಮಸಾಲೆ ಹಚ್ಚುತ್ತಾರೆ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಮಾಧ್ಯಮದವರು ಸುದ್ದಿಯನ್ನು ಸೃಷ್ಟಿ ಮಾಡಿಕೊಂಡು ಹೇಳಬಾರದು, ಜನರ ನಂಬಿಕೆ ಸುಳ್ಳಾದಾಗ ನಿಮ್ಮ ಮೇಲಿನ ನಂಬಿಕೆ ಕಡಿಮೆಯಾಗುತ್ತೆ ಎಂದರು.

ಪರೋಕ್ಷವಾಗಿ ಮಾಜಿ ಸಿಎಂ ಸಿದ್ಧು ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಇಂದು ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಪಕ್ಷದ ಒಳಗಡೆ ಮುನಿಸುಗಳ ಬಗ್ಗೆ ಮಾತನಾಡಲಿ ಅದನ್ನು ಬೀದಿಗೆ ತರುವ ಕೆಲಸವಾಗಬಾರದು ಎಂದು ಹೇಳುವುದರ ಮೂಲಕ ಅತೃಪ್ತ ನಾಯಕರಿಗೆ ಖರ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಬಿಎಸ್‌ವೈ ಕೇಂದ್ರದಿಂದ ಸೂಕ್ತವಾದ ಸ್ಪಂದನೆ ಸಿಗುತ್ತಿಲ್ಲ. ಅವರಿಗೆ ಕನಿಷ್ಟಪಕ್ಷ ನಿಗಮ ಮಂಡಳಿ ಅಧ್ಯಕ್ಷರನ್ನು ಸಹ ನೇಮಕ ಮಾಡಲಾಗುತಿಲ್ಲ. ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ರಾಜ್ಯ ಹಾಗೂ ಕೇಂದ್ರದ ವಿರುದ್ಧ ಧ್ವನಿ ಎತ್ತಲು ಯಾರೂ ಇಲ್ಲದಂತಾಗಿದೆ. ಕೇಂದ್ರಕ್ಕೆ ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲದಂತಾಗಿದೆ ಎಂದರು.

Leave a Comment