ಮೂಲಭೂತ ಸೌಕರ್ಯಗಳಿಂದ ವಂಚಿತವಾದ 6 ನೇ ವಾರ್ಡ್

ದಾವಣಗೆರೆ, ನ, 7; ನಗರದ 6ನೇ ವಾರ್ಡಿನಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿಯವರೆಗೂ ಪಾಲಿಕೆ ಆಡಳಿತ ಮಾಡಿದ ಸದಸ್ಯರುಗಳು ವಿಫಲರಾಗಿದ್ದಾರೆ ಎಂದು ಬಂಡಾಯ ಬಿಜೆಪಿ ಅಭ್ಯರ್ಥಿ ಶಿವಳ್ಳಿ ರಂಗಪ್ಪ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, 6ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಕುರುಬಕೆರೆ,ವಿಜಯನಗರ ಬಡಾವಣೆ, ಎಸ್.ಎಂ.ಕೃಷ್ಣ ಬಡಾವಣೆ, ಬಾಬುಜಗಜೀವರಾಂ ಬಡಾವಣೆಯಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಚರಂಡಿ ರಸ್ತೆ ಯಾವುದೇ ಸೌಕರ್ಯಗಳಿಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 30 ವರ್ಷಕ್ಕೂ ಹಳೆಯದಾದ ವಿಜಯನಗರ ಬಡಾವಣೆಯಲ್ಲಿ ಇಲ್ಲಿಯವರೆಗೂ ರಸ್ತೆ ಚರಂಡಿ ಇಲ್ಲ, ಮಳೆ ಬಂದರೆ ಬರಿಗಾಲಲ್ಲಿ ಹೊಲಗದ್ದೆಗಳಲ್ಲಿ ನಡೆದಾಡುವ ರೀತಿ ಸಾಗಬೇಕಾಗುತ್ತದೆ.ವಾಹನಗಳ ಚಲಾಯಿಸುವುದೇ ದುಸ್ತರವಾಗುತ್ತದೆ. ಬಾಬುಜಗಜೀವನರಾಮ್ ಬಡಾವಣೆ, ಎಸ್.ಎಂ.ಕೃಷ್ಣ ನಗರಗಳಲ್ಲಿ ಮಳೆ ಬಂದರೆ ಮೊಣಕಾಲೆತ್ತರ ಮನೆಗಳಿಗೆ ನೀರು ನುಗ್ಗುತ್ತದೆ. ಚರಂಡಿ ಮತ್ತು ರಸ್ತೆಗಳನ್ನು ವ್ಯವಸ್ಥೆಗೊಳಿಸುವುದರಲ್ಲಿ ಈ ಹಿಂದೆ ಇದ್ದ ಪಾಲಿಕೆ ಸದಸ್ಯರುಗಳು ಸಂಪೂರ್ಣರಾಗಿ ವಿಫಲರಾಗಿದ್ದಾರೆ. ಈಬಾರಿ ಬಂಡಾಯ ಬಿಜೆಪಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ. ಹಾಗಾಗಿ ನನ್ನ ಗುರುತಾದ ಮಡಿಕೆಗೆ ತಮ್ಮ ಅಮೂಲ್ಯವಾದ ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಿ ವಾರ್ಡಿನಲ್ಲಿ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಸಮರ್ಪಕ ರೀತಿಯಲ್ಲಿ ಮಾಡಿಕೊಡುವಲ್ಲಿ ಯತ್ನಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿ ಬಿಜೆಪಿಯಿಂದ ನನಗೆ ಟಿಕೇಟ್ ನೀಡದಿದ್ದ ಕಾರಣಕ್ಕೆ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಇಲ್ಲಿಯವರೆಗೂ ಸಹ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಯಾರೊಬ್ಬರು ಹಿಂಪಡೆಯುವಂತೆ ಒತ್ತಾಯಿಸಲಿಲ್ಲ, ಹಿಂಪಡೆಯುವಂತೆ ಸೂಚಿಸಿದ್ದರೆ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರಲಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಹನುಮಂತಪ್ಪ ಇದ್ದರು.

Leave a Comment