ಮೂರ್ತಿ ಪ್ರತಿಷ್ಠಾಪನೆ, ಜಾತ್ರಾ ಮಹೋತ್ಸವ ರದ್ದು

ಎಮ್ಮಿಗನೂರು, ಮಾ.24: ಇಲ್ಲಿಗೆ ಸಮೀಪದ ಶ್ರೀರಾಮಚಂದ್ರಪುರ ಕ್ಯಾಂಪಿನಲ್ಲಿ ನಾಳೆ ಮತ್ತು ನಾಡಿದ್ದು ಶ್ರಿ ಹನುಮಾನ್, ಲಕ್ಷ್ಮಣ, ಸೀತಾ ಕೊದಂಡಸ್ವಾಮಿ ಮೂರ್ತಿ ಪ್ರತಿಷ್ಷಾಪನೆ ಹಾಗೂ ಮಾ.29 ರಂದು ನಡೆಯಲಿರುವ ಪೇಟೆ ಬಸವೇಶ್ವರ ಜಾತ್ರಾ ಮಹೋತ್ಸವ ರದ್ದುಪಡಿಸಲಾಗಿದೆ.

ಕೊರೊನಾ ವೈರಸ್ ತಡೆಗೆ ರಾಜ್ಯ ಸರಕಾರ ಅದೇಶ ಹೊರಡಿಸಿರುವ ಕರ್ನಾಟಕ ಲಾಕ್ ಡೌನ್ ಹಿನ್ನೆಯಲ್ಲಿ ಗ್ರಾಮದ ಹಂಪಿ ಸಾವಿರ ದೇವರಮಠದಲ್ಲಿ ನಿನ್ನೆ ನಡೆದ ಭಕ್ತರ ಸಭೆಯಲ್ಲಿ ಕಂಪ್ಲಿ ತಹಶೀಲ್ದಾರ್ ಎಂ.ರೇಣುಕಾ ಮಾತನಾಡಿ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಈ ಕಾರಣದಿಂದ ಗ್ರಾಮದ ಬಸವೇಶ್ವರ ಜಾತ್ರೆ ರದ್ದು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆ ಸಾನ್ನಿಧ್ಯ ವಹಿಸಿದ್ದ ಹಂಪಿಸಾವಿರ ಶ್ರೀ ವಾಮದೇವಾ ಮಹಾಂತ ಶಿವಾಚಾರ್ಯರು ಮಾತನಾಡಿ, ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ವಜನಿಕರ ಸಹಕಾರ ತುಂಬಾ ಅಗತ್ಯ. ಎಲ್ಲರೂ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಗ್ರಾಮದ ಶುಭ್ರತೆಗೂ ಸಹಕರಿಸುವಂತೆ ಮನವಿ ಮಾಡಿದರು.

ಗ್ರಾಮ ಲೆಕ್ಕಧೀಕಾರಿ ವಿ.ಎ ಹೊನ್ನೂರಪ್ಪ, ಮುಖಂಡರಾದ ಬೇರ್ಗಿ ಮಹೇಶಗೌಡ, ಬಿ.ಸದಾಶಿವಪ್ಪ, ಎಸ್. ರಾಜಶೇಖರಗೌಡ,ಪಗಟೂರು ನಾಗರಾಜ ಶಟ್ಟಿ, ವಿ.ಬಸವನಗೌಡ,ಗ್ರಾಪಂ ಸದಸ್ಯ ಬಜಾರು ವೆಂಕಟೇಶ, ಕೆ.ಎಂ. ಅಡಿವೆಯ್ಯಸ್ವಾಮಿ, ಎಳ್ಳಾರ್ಥಿ ಗೋವಿಂದರೆಡ್ಡಿ,ಪಿಗ್ಮಿ ಶರಣ ಬಸವನಗೌಡ, ಎನ್. ಚನ್ನಪ್ಪ, ರೈಸ್‍ಮಿಲ್ ಜಗದೀಶ್, ಗುಡಿ ಬಸವರಾಜ, ಕೆ.ಎಂ. ಕರಿಬಸಯ್ಯ, ಬಿ. ಜಡೆಪ್ಪ, ಬಿ.ಕುಮಾರೆಪ್ಪ, ಎಸ್. ಜಡೆಪ್ಪ ಸೇರಿದಂತೆ ಇತರರು ಇದ್ದರು.

 

Leave a Comment