ಮೂರ್ತಿ ಪ್ರತಿಷ್ಠಾಪನೆ-ಅಯ್ಯಾಚಾರ

ನವಲಗುಂದ, ಏ 21- ಈ ನಾಡು ಅಂತ್ಯಂತ ಬರ ಮತ್ತು ಕ್ಷಾಮದಿಂದ ಬಳಲುತ್ತಿದೆ. ಆದಷ್ಟು ಶ್ರೀಘ್ರವಾಗಿ ಬಗವಂತನ ಕೃಪೆಯಿಂದ ಈ ನಾಡಿನ ಎಲ್ಲಡೆ ಸಮೃದೃವಾದ ಮಳೆ ಬೆಳೆಯಾಗಲಿ ಎಂದು ಉಜ್ಚಯನಿ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪದರು ಆರ್ಶಿವಚನ ನೀಡಿದರು.
ತಾಲೂಕಿನ ಕುಮಾರಗೊಪ್ಪ ಗ್ರಾಮದಲ್ಲಿ ಲಿಂ. ಬಸವಲಿಂಗ  ಶಿವಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ವಟುಗಳ ಅಯ್ಯಚಾರ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಮತ್ತು ಧರ್ಮ ಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಂದು ಮದುವೆ ಮಾಡಬೇಕಾದರೆ ಕನಿಷ್ಠ ಎರಡು ಲಕ್ಷ ರೂ ಬೇಕಾಗುತ್ತದೆ ಆದರೆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವರಿಂದ ದುಂದವೆಚ್ಚಕ್ಕೆ ಕಡಿವಾನ ಹಾಕಲು ಸಾದ್ಯ ಹೀಗಾಗಿ ಬಡವರು ಮಾತ್ರ ಸಮೂಹಿಕ ವಿವಾಹವನ್ನು ಮಾಡಿಕೊಂಡರೆ ಸಾಲದು ಶ್ರೀಮಂತರು ಸಾಮೂಹಿಕ ವಿವಾಹ ಭಾಗವಹಿಸಿಬೇಕೆಂದು ಕರೆ ನೀಡಿದರು.
ಹೊಸ ಜೀವನಕ್ಕೆ ಕಾಲಿಟ್ಟ ನವ ದಂಪತ್ತಿಗಳು ನಾನು ಹೆಚ್ಚು ನೀನು ಕಡಿಮೆ ಎನ್ನುವ ಬೇಧಭಾವ ವೀರಶೈವ ಸಮಾಜದಲ್ಲಿಲ್ಲ, ಹೀಗಾಗಿ ಕುಟುಂಬದೊಂದಿಗೆ ಅನ್ಯೊನತೆಯಿಂದ ಜೀವನ ನಡೆಸಿ ಆದರ್ಶ ದಂಪತಿಗಳಾಗಬೇಕು. ಈ ದಿಸೆಯಲ್ಲಿ ಕುಟುಂಬ ನಿರ್ವಹಣೆ ಮಾಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಸುಳ್ಳ ಗ್ರಾಮದ ಪಂಚಗೃಹ ಹಿರೇಮಠ ಶಿವಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಹ್ಮ ಆಶ್ರಮ ತ್ಯಜಿಸಿ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ದಂಪತ್ತಿಗಳು ಒಂದು ಪವಿತ್ರ ಬಂಧನಲ್ಲಿ ಸೇರ್ಪಡೆ ಯಾಗಿದ್ದಿರಿ ಹೀಗಾಗಿ ಇನ್ನೂ ಮುಂದೆ ಎಲ್ಲ ದುಷ್ಠ ಚಟಗಳನ್ನು ತ್ಯಜಿಸಿ ಉತ್ತಮ ಸನ್ನಮಾರ್ಗದತ್ತ ನಡೆಯಬೇಕೆಂದು ಸಲಹೆ ನೀಡಿದರು.
ಅಮ್ಮಿನಭಾವಿ ಪಂಚಗೃಹ ಹಿರೇಮಠ ಅಭಿನವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಂಸ್ಕಾರಯುತ ಮೌಲ್ಯಗಳನ್ನು ಅಳವಡಿಸಿಕೊಂಡು ನಿಮ್ಮ ಮನೆಗೆ ಮಗನಾಗಿ ಊರಿಗೆ ಉಪಕಾರಿಯಾಗಿ ಮಾದರಿ ಜೀವನ ನಡೆಸಿ ಉತ್ತಮ ಸಂಸಾರಿಯಾಗಬೇಕು ಅಂದರೆ ಮಾತ್ರ ಹೆತ್ತ ತಂದೆ-ತಾಯಿಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಪಟ್ಟಣದ ಪಂಚಗೃಹ ಹಿರೇಮಠ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಅಡ್ನೂರಿನ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನರಗುಂದ ಪತ್ರಿವನ ಮಠ ಸಿದ್ದವೀರ ಶಿವಾಚಾರರ್ಯ ಸ್ವಾಮೀಜಿ, ಬ್ಯಾಹಟ್ಟಿಯ ಮರುಳ ಸಿದ್ದ ಶಿವಾಚಾರ್ಯ ಸ್ವಾಮೀಜಿ ಗಾ.ಪಂ ಸದಸ್ಯರಾದ ಮಹಾಂತೇಶ ಕುಲಕರ್ಣಿ,  ಶ್ರೀಮತಿ ಶಾಂತವ್ವ ತಳವಾರ ಮತ್ತಿತರರು ಇದ್ದರು.
ವೇಧಘೋಷದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಸುರೇಶ ಹಡಪದ ಸ್ವಾಗತಿಸಿದರು. ಬಿ.ಎಚ್. ಹುಗಾರ ನಿರೂಪಿಸಿರು. ಗುರುಸಿದ್ದಯ್ಯ ಸವಡಿಮಠ ಸಂಗಿತ ಪ್ರಸ್ತುತ ಪಡಿಸಿದರು. ಮಲ್ಲಯ್ಯ ನಂದಿಕೊಲಮಠ ಹಾಗೂ ಫಕ್ಕೀರಯ್ಯ ಹಿರೇಮಠ ಮದುವೆ ವಿವಾಹ ಮಾಡಿದರು.

Leave a Comment