ಮೂರಾಬಟ್ಟೆಯಾದ ವಲಸೆ ಕಾರ್ಮಿಕರ ಬದುಕು

ಹುಬ್ಬಳ್ಳಿ  ಏ 2  – ಮಹಾಮಾರಿ ಕೊರೊನಾಗೆ ಸಾಕಷ್ಟು ಜನರ ಬದುಕು‌ ಮೂರಾಬಟ್ಟೆಯಾಗಿದ್ದು, ರಾಜ್ಯದ ಮಹಾನಗರಗಳಿಂದ ಜೀವನೋಪಾಯಕ್ಕಾಗಿ ಕೆಲಸ ಅರಿಸಿ ಹೋಗಿದ್ದ ಸಾವಿರಾರು ಕಾರ್ಮಿಕರು  ಪಾದಯಾತ್ರೆ ಮೂಲಕ ‌ತಮ್ಮ ತವರಿಗೆ  ಮರಳುತ್ತಿರುವುದು ಮನ ಕುಲಕುವಂತಿದೆ.
ಮಹಾಮಾರಿ ಕೊರೊನಾ ಬಡವರ  ಬದಕನ್ನು ಕಸಿದುಕೊಂಡಿದ್ದು,  ಪುಟ್ಟ ಮಕ್ಕಳೊಂದಿಗೆ  ಹೊಟ್ಟಿಗೆ ಹಿಟ್ಟಿಲ್ಲದೇ  ಬಿರು ಬಿಸಲಲ್ಲಿ ಪಾದಯಾತ್ರೆ ಮೂಲಕ ತಮ್ಮ ತವರಿಗೆ ಆತುರದಿಂದ ಸಾಗುತ್ತಿದ್ದರೇ,  ಇನ್ನೊಂದೆಡೆ  ನಡೆಯಲಾಗದ  ತೀವ್ರ ಆಯಾಸಗೊಂಡಿದ್ದ ವ್ಯಕ್ತಿಯೋರ್ವನು ತನ್ನ ಪತ್ನಿಯನ್ನು  ಹೆಗಲ ಮೇಲೆ ಕೂರಿಸಿಕೊಂಡು ಸಾಗುತ್ತಿರುವ ದೃಶ್ಯವಂತೂ ಕಟುಕರಿಗೂ ಕರಳು ಹಿಂಡುವಂತಿತ್ತು.
ಒಂದಡೆ ಕೊರೊನಾ ತಪಾಸಣೆಗಾಗಿ ಎಲ್ಲಡೆ ಚೆಕ್ ಪೋಸ್ಟ್ ಗಳನ್ನು  ನಿರ್ಮಿಸಲಾಗಿದ್ದು, ಕಾರ್ಮಿಕರನ್ನು ಮುಂದೆ ಸಾಗಲು ಪೊಲೀಸರು ಕಡಿವಾಣ ಹಾಕುತ್ತಿದ್ದಾರೆ.
ಆದರೆ   ಯಾವುದೇ ತೊಂದರೆಯಿಲ್ಲದೇ ದೊಡ್ಡ ವ್ಯಕ್ತಿಗಳು ಹಾಗೂ ಅವರ ಮಕ್ಕಳನ್ನು ವಿಶೇಷ ಸಾರಿಗೆ ಮೂಲಕ ವಿದೇಶದಿಂದ ತವರಿಗೆ ಕರೆತರುವ ಕಾರ್ಯ ಮಾಡುತ್ತಿದ್ದು, ಇದ್ಯಾವ ನ್ಯಾಯ ಎನ್ನುವಂತಾಗಿದೆ.
ದಾರಿ ಮದ್ಯದಲ್ಲಿ ಅದೇಷ್ಟೋ ಜನರು ಚೆಕ್ ಪೋಸ್ಟ್ ನಲ್ಲಿ ಸಿಲುಕಿದ್ದಾರೆ. ಅವರಿಗೆ ಸೂಕ್ತ ತಪಾಸಣೆ ನೀಡಿ ಅವರವರ ತವರಿಗೆ ತಲುಪಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕಿರುವುದು ಅವಶ್ಯವಾಗಿದೆ.
ದುಡಿಯುವುದಕ್ಕಾಗಿ  ನಗರಕ್ಕೆ ಅಲೆಮಾರಿಯಾಗಿ ಹೋಗಿದ್ದ  ಎಷ್ಟೋ ಜನರ ಬದುಕು ಈಗ ಬೀದಿಗೆ ಬಂದಿದ್ದು, ರಾಜ್ಯ ಸರ್ಕಾರ ಇಂತಹ ಬಡ ಕಾರ್ಮಿಕರ   ಕಾಳಜಿ ವಹಿಸುವುದು ಅಗತ್ಯ.
ಒಂದು  ದಿನದ ಕೂಲಿ ಎರಡು ಹೊತ್ತಿನ ಊಟಕ್ಕೆ ‌ಆದರೆ ಮತ್ತೊಂದು ಹೊತ್ತಿನ ಊಟ ಹೊಟ್ಟೆಗೆ ತಣ್ಣೀರ ಬಟ್ಟೆ ಎನ್ನುವಂತಾಗಿದೆ ಕಾರ್ಮಿಕರ ಪಾಡು.
ಹೀಗಿರುವಾಗ ಈ ರಕ್ಕಸ ಕೊರೊನಾ ‌ವೈರಸ್ ಗೆ   ಯಾವುದೇ ಸರಿಯಾದ ವ್ಯವಸ್ಥೆ ಇಲ್ಲದೇ  ಹೈರಾಣಾಗಿರುವ ಕಾರ್ಮಿಕರು ಕೊರೊನಾಗೆ ತುತ್ತಾಗದೇ ಮರಳಿ ತವರಿಗೆ ಸೇರುವುದೇ ಸೂಕ್ತವೆಂದು  ದೃಢ ನಿರ್ಧಾರದಿಂದ ಸಾಗಿ ಮುಂದೆ ಸಾಗುತ್ತಿದ್ದಾರೆ.
ನೂರಾರು ಕಿ.ಮೀ.ವರೆಗೆ ಯಾರ ಸಹಾಯ ಹಸ್ತವಿಲ್ಲದೇ  ಪಾದಯಾತ್ರೆ ಮೂಲಕ ಮರಳಿ  ತವರಿಗೆ ಸಾಗುತ್ತಿರುವ ಜನರು ‌ಒಂದಿಲ್ಲಾ ಒಂದು‌ ಆತಂಕ ಎದುರಿಸುತ್ತಿದ್ದಾರೆ. ಬಡವರ ‌ಹಾಗೂ ಸಾಮಾನ್ಯ ಜನರತ್ತ ಕಾಳಜಿವಹಿಸಿ ಎಷ್ಟೋ ಜನರು ಅಲೆಮಾರಿಯಾಗಿದ್ದು,  ರಾಜ್ಯ ಸರ್ಕಾರ ಇವರಿಗೆ ಹೊಟ್ಟೆಗೆ ಹಿಟ್ಟು, ಆರೋಗ್ಯ ಹಾಗೂ ವಸತಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

Leave a Comment