`ಮೂನ್ ಲೈಟ್`ಗೆ ಆಸ್ಕರ್ ಪ್ರಶಸ್ತಿ

ಲಾಸ್‌ಏಂಜಲೀಸ್, ಫೆ. ೨೭- ಬಹು ನಿರೀಕ್ಷಿತ ಆಸ್ಕರ್ ಪ್ರಶಸ್ತಿಗಳು ಪ್ರಕಟಗೊಂಡಿದ್ದು, `ಮೂನ್ ಲೈಟ್’ ಚಿತ್ರ ಅತ್ಯುತ್ತಮ ಚಿತ್ರ ಹಾಗೂ ಇರಾನ್‌ನ `ದಿ ಸೇಲ್ಸ್ ಮ್ಯಾನ್‌’ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿವೆ.

ಅತ್ಯುತ್ತಮ ನಟ ಪ್ರಶಸ್ತಿಯನ್ನು ಕ್ಯಾಸಿ ಆಫ್ಲೆಕ್ಸ್ `ಮ್ಯಾಂಚೆಸ್ಟರ್ ಬೈ ಸೀ’ ಚಿತ್ರಕ್ಕಾಗಿ ಪಡೆದಿದ್ದಾರೆ. ಉಮ್ಮಾ ಸ್ಟೋನ್ ಅವರು ಲಾಲಾಲ್ಯಾಂಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ.

ವಿಓಲಾ ಡೇವಿಸ್ ಅವರು `ರೋಸ್ ಮ್ಯಾಕ್ಸನ್’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಹಾಗೂ ಮಹರ್ಷಲ್ಲ ಆಲಿ ಲಾಲಾಲ್ಯಾಂಡ್ ಚಿತ್ರದ ನಟನೆಗಾಗಿ ಪೋಷಕ ನಟ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ನಟನೊಬ್ಬ ಆಸ್ಕರ್ ಪ್ರಶಸ್ತಿ ಪಡೆದ ಕೀರ್ತಿಗೆ ಮಹರ್ಷಲ್ಲ ಆಲಿ ಪಾತ್ರರಾಗಿದ್ದಾರೆ. ಮೂನ್ ಲೈಟ್ ಚಿತ್ರಕ್ಕಾಗಿ ಈ ಪ್ರಶಸ್ತಿ ಪಡೆದಿದ್ದಾರೆ.
ವಿದೇಶಿ ಚಿತ್ರವಿಭಾಗದಲ್ಲಿ 2ನೇ ಅತ್ಯುತ್ತಮ ಪ್ರಶಸ್ತಿ ಪಡೆದ ಇರಾನ್‌ನ ಚಿತ್ರ ನಿರ್ದೇಶಕ ಅಸ್ಗರ್ ಫರ್ಹದಿ ಅಮೆರಿಕಾಕ್ಕೆ 7 ಮುಸ್ಲಿಂ ದೇಶಗಳ ಪ್ರಜೆಗಳು ಬರುವುದನ್ನು ವಿರೋಧಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಪ್ರತಿಭಟಿಸಿ ಪ್ರತಿಷ್ಠಿತ ಅಕಾಡೆಮಿ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾಗುವ ಮೂಲಕ ತನ್ನ ಪ್ರತಿಭಟನೆ ವ್ಯಕ್ತಪಡಿಸಿದರು.

ಮಿಂಚು ಹರಿಸಿದ ಪ್ರಿಯಾಂಕ
ಲಾಸ್‌ಏಂಜಲೀಸ್‌ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದ 89ನೇ ಅಕಾಡೆಮಿ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವ ಮೂಲಕ ನೆರೆದಿದ್ದ ತಾರೆಗಳ ಕಣ್ಣು ಕುಕ್ಕುವಂತೆ ಮಾಡಿದರು.

ಅತ್ಯುತ್ತಮ ಪೋಷಕ ನಟಿ ಪಾತ್ರಕ್ಕೆ ಭಾಜನರಾಗಿರುವ 51 ವರ್ಷದ ವಿಓಲಾ ಡೇವಿಸ್ ಇದಕ್ಕೂ ಮುನ್ನ ಮೂನ್ ಲೈಟ್, ಲೈಯನ್, ಇಡಲ್, ಫಿಗಱ್ಸ್, `ಮ್ಯಾಂಚೆಸ್ಟರ್ ಬೈ ಸೀ’ ಚಿತ್ರಗಳಲ್ಲಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಇದೀಗ ಅವರಿಗೆ ಪೋಷಕ ನಟಿ ಪ್ರಶಸ್ತಿ ಬಂದಿದೆ. ಡೇವಿಸ್ ಈಗಾಗಲೇ ರೋಸ್ ಚಿತ್ರಕ್ಕಾಗಿ ಟೋನಿ ಅವಾರ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅವರು ಸಂತಸ ಹಂಚಿಕೊಂಡಿದ್ದು, ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳನ್ನು ಮಾಡುವಂತೆ ಅಭಿಮಾನಿಗಳು ಬಯಸುತ್ತಾರೆ. ಹೀಗಾಗಿ, ಬೇರೆ ಬೇರೆ ಪಾತ್ರ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.

ಮೂನ್ ಲೈಟ್ ಚಿತ್ರಕ್ಕಾಗಿ ಪೋಷಕ ನಟ ಪಾತ್ರಕ್ಕೆ ಆಸ್ಕರ್ ಪಡೆದಿರುವ ಮಹರ್ಷಲ್ಲ ಆಲಿ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ನಟನೊಬ್ಬ ಪ್ರಶಸ್ತಿ ಪಡೆದ ಕೀರ್ತಿಗೆ ಭಾಜನರಾಗಿದ್ದು, ಇಂತ ಪ್ರತಿಷ್ಠಿತ ಪ್ರಶಸ್ತಿ ದೊರೆತಿದ್ದಕ್ಕೆ ಶಿಕ್ಷಕರಿಗೆ, ಪ್ರಾಧ್ಯಾಪಕರುಗಳಿಗೆ ಹಾಗೂ ಇದುವರೆಗೂ ವಿಭಿನ್ನ ಪಾತ್ರ ನೀಡಿದ ನಿರ್ಮಾಪಕರು, ನಿರ್ದೇಶಕರುಗಳಿಗೆ ಧನ್ಯವಾದ ಹೇಳಿರುವುದಾಗಿ ತಿಳಿಸಿದ್ದಾರೆ.

ಈ ಬಾರಿ ಭಾರತೀಯ ಮೂಲದ ಬ್ರಿಟೀಷ್ ನಟ ದೇವ್ ಪಟೇಲ್, `ಲಯನ್’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಆಸ್ಕರ್ ಪ್ರಶಸ್ತಿ ಪಡೆಯುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದೇ ರೀತಿ ಜೆಫ್ ಬ್ರಿ‌‌ಡ್ಜಸ್ ಅವರು `ಹೆಲ್ ಆರ್ ಹೈ ವಾಟರ್’ ಲುಕೋಸ ಎಡ್ಜಸ್ ಅವರು `ಮ್ಯಾಂಚೆಸ್ಟರ್ ಬೈ ಸೀ’ ಚಿತ್ರಕ್ಕಾಗಿ ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದ್ದರು. ಅದು ತಲೆ ಕೆಳಗಾಗಿದೆ.

ಪ್ರತಿಭಟನೆ
ವಿದೇಶಿ ವಿಭಾಗದಲ್ಲಿ ಅತ್ಯುತ್ತಮ 2ನೇ ಪ್ರಶಸ್ತಿಗೆ ಭಾಜನರಾಗಿರುವ ಇರಾನಿ ಚಿತ್ರ ನಿರ್ದೇಶಕ ಅಸ್ಗರ್ ಫರ್ಹದಿ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಯ ವಿರುದ್ಧ ಅಸಮಾಧಾನ ಹೊರ ಹಾಕಿದರು.

Leave a Comment