ಮುಸ್ಲಿಂರ ಅಸಭ್ಯವರ್ತನೆ

ನವದೆಹಲಿ, ಏ. ೩- ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಬ್ಲಿಘಿಗಳಲ್ಲಿ ಕೊರೊನಾ ಸೋಂಕಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಸೋಂಕಿತರು, ಅಲ್ಲಿನ ಸಿಬ್ಬಂದಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಅಮಾನವೀಯ ಘಟನೆಗಳು ನಡೆದಿವೆ.

ನರ್ಸ್‌ಗಳ ಎದುರಿನಲ್ಲಿ ಅರೆನಗ್ನರಾಗಿ ಓಡಾಡುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು, ಮತ್ತಿತರ ಅಸಭ್ಯ ವರ್ತನೆಯನ್ನು ಸೋಂಕಿತರು ತೋರುತ್ತಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ, ಪೊಲೀಸರಿಗೆ ದೂರು ನೀಡಿದ್ದಾರೆ.

ಕೆಲವರಂತೂ ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆ ಉಗುಳುವಂತಹ ವಿಕೃತಿ ಮೆರೆದಿದ್ದಾರೆ. ಈ ರೀತಿಯ ಘಟನೆಗಳು ನಿಜಾಮುದ್ದೀನ್ ಮರ್ಕಜ್ ಸಮೀಪ ಗಾಜಿಯಾಬಾದ್‌ನ ಆಸ್ಪತ್ರೆಯಲ್ಲಿ ನಡೆದಿರುವುದು ಶೋಚನೀಯ ಸಂಗತಿ.

ಕೆಲವು ಸೋಂಕಿತರು ಪ್ಯಾಂಟ್ ಧರಿಸದೆ, ತಿರುಗಾಡುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು, ಕರ್ಕಶವಾಗಿ ಹಾಡುವುದು, ಸಿಗರೇಟ್ ಕೊಡುವಂತೆ ನರ್ಸ್‌ಗಳನ್ನು ಒತ್ತಾಯಿಸುವಂತಹ ಘಟನೆಗಳು ನಡೆದಿವೆ.

ಸ್ಥಳಕ್ಕೆ ಭೇಟಿನೀಡಿರುವ ಪೊಲೀಸರು, ವೈದ್ಯರು ಮತ್ತು ನರ್ಸ್‌ಗಳು ನೀಡಿದ್ದ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ 167 ಜನರಲ್ಲಿ ಕೊರೊನಾ ಸೋಂಕಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

Leave a Comment