ಮುಸುಕಿನ ಜೋಳದ ಬೆಳೆಗೆ ಕೇದಿಗೆ ರೋಗ

ಹಿರೇಕೋಗಲೂರು.ಆ.3; ಸಂತೇಬೆನ್ನೂರು ಹೊಬಳಿಯಲ್ಲಿ ನೀರಾವರಿ ಜಮೀನು ಹೊರತು ಪಡಿಸಿ ಬಹುತೇಕ ಮಳೆ ಆಶ್ರಿತ ಜಮೀನುಗಳಲ್ಲಿ ಈ ಬಾರಿ ಪಾಪ್ ಕಾರ್ನ ಮುಸುಕಿನ ಜೋಳದ ಬೀಜ ಬಿತ್ತನೆ ಮಾಡಲಾಗಿದೆ. ಮುಂಗಾರು ಮಳೆ ಸುದೈವಕ್ಕೆ ಮುಂಚಿತವಾಗಿಯೇ ಒಳ್ಳೆಯ ಹದ ಮಳೆಯಾದ ಕಾರಣ ಈ ತಳಿಗೆ ಸರಿಯಾದ ಹದಸಿಕ್ಕಿದ ಪರಿಣಾಮವಾಗಿ ಕೃಷಿಕರು ಹರ್ಷದಿಂದ ಪಾಪ್ ಕಾರ್ನ ಮುಸಿಕಿನ ಬೀಜ ಬಿತ್ತನೆ ಮಾಡಿ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ಆಶಾ ಭಾವನೆ ಯಲ್ಲಿದ್ದಂತೆಯೇ ಬೆಳೆ ಚಿಕ್ಕದಿದ್ದಾಗ ಮತ್ತೆ ಮಳೆ ಕೆಲವುದಿನ ಕೈಕೊಟ್ಟು ಕೃಷಿಕರನ್ನು ಚಿಂತೆಗೆ ಈಡು ಮಾಡಿತ್ತು.ಆಗಲೂ ಸಹ ಬೆಳೆ ಸ್ವಲ್ಪ ಕಂದಿದ್ದಿತು. ಮತ್ತೆ ಮಳೆ ಬೀಳಲು ಮೇಲು ಗೊಬ್ಬರ ಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಚೇತರಿಸಿ ಕೊಂಡು ಉತ್ತಮ ಬೆಳೆಯಾಗಿ ಕಣ್ಣಿಗೆ ಕಾಣುತ್ತಿದ್ದಂತೆಯೇ ಒಂದು ಕಡೆ ಮಳೆ ಬಯಲಾಗುತ್ತಿದ್ದಂತೆ ಮತ್ತೊಂದು ಕಡೆ ಬೆಳೆಗೆ ಕೇದಿಗೆ ರೋಗ ಉಂಟಾಗಿ ಅಪಾರ ಹಾನಿಯಾಗುವ ಸಂಭವವಿದೆ.ಬೆಳೆ ತನೆ ಬಂದು ಕಾಳು ಬಲಿಯುವ ಸಮಯಕ್ಕೆ ಸರಿಯಾಗಿ ಮತ್ತೆ ಮಳೆ ಬಯಲಾಗಿರುವುದು ಕೃಷಿಕರನ್ನು ಅಪಾರ ಚಿಂತೆಗೆ ಒಳಗಾಗುವಂತೆ ಮಾಡಿದೆ. ಈ ಬೆಳೆಯಿಂದ ಕೃಷಿಕರು ಅಧಿಕ ಬೆಲೆ ಲಭಿಸುತ್ತದೆ ಎಂಬ ಮಹದಾಸೆ ಹೊಂದಿದ್ದರು. ಇದು ಸತ್ಯವೂ ಹೌದು ಕಡಿಮೆ ಎಂದರೆ ಒಂದು ಕ್ವಿಂ.ಗೆ ರೂ. 3000/-ಬೆಲೆಯಂತು ಸಿಕ್ಕೇ ಸಿಗುತ್ತದೆ ಎಂಬಬನಂಬಿಕೆಗೆ ತಣಿ ್ಣೀರು ಸುರಿದಂತಾಗಿದೆ. ಸದ್ಯದಲ್ಲಿ ಮಳೆ ಬಂದರೆ ಕೃಷಿಕರು ಉಳಿಯುತ್ತಾರೆ. ಇಲ್ಲದಿದ್ದರೆ ನೆಚ್ಚಿದ ಬೆಳೆ ಶೂನ್ಯ ವಾಗುವುದು ಖಚಿತವಾಗಿದೆ.

Leave a Comment