ಮುರುಘಾಮಠದ ದಾಸೋಹ, ಸಾಹಿತ್ಯ ಸೇವೆ ವಿಶಿಷ್ಠ-ಡಾ.ಗುಂಜಾಳ

ಧಾರವಾಡ,ಜ28: ಮುರುಘಾಮಠದ ದಾಸೋಹ, ಸಾಹಿತ್ಯ ಸೇವೆ ವಿಶೇಷವಾಗಿದೆ. ಶ್ರೀ ಮಠಕ್ಕೆ ಬಂದು ಶ್ರೀ ಮೃತ್ಯುಂಜಯ ಹಾಗೂ ಮಹಾಂತಪ್ಪಗಳ ಆಶೀರ್ವಾದ ಪಡೆದುಕೊಂಡ ಭಕ್ತರಿಗೆ ಒಳ್ಳೆಯದಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಆರ್. ಗುಂಜಾಳ ಹೇಳಿದರು.
ನಗರದ ಮುರುಘಾಮಠದಲ್ಲಿ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸ ನಿಮಿತ್ತ ಸೋಮವಾರ ಹಮ್ಮಿಂಡಿದ್ದ ವಿಶೇಷ ಉಪನ್ಯಾಸಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಈ ಮಠದಲ್ಲಿ ಇದ್ದು ಪ್ರಸಾದ ಸೇವಿಸಿ ಬೆಳೆದಿದ್ದೆನೆ. ಅದಕ್ಕಾಗಿಯೇ ನಾನು ಇಷ್ಟೊಂದು ಸಾಧನೆ, ಸೇವೆ ಮಾಡಲು ಸಾಧ್ಯವಾಯಿತು. ಇಲ್ಲಿ ಪಡೆದಯಕೊಂಡ ಬದುಕಿನ ಜ್ಞಾನ ನನಗೆ ಯವುದೇ ವಿಶ್ವವಿದ್ಯಾಲಯದಲ್ಲಿ ದೊರಕಿಲ್ಲ. ಮಠದ ಸಂಸ್ಕೃತಿ ಜೀವನದಲ್ಲಿ ಬದಲಾವಣೆ ತರುತ್ತದೆ. ಅಂಥ ಸಂಸ್ಕೃತಿಯನ್ನು ಅಳವಡಿಸಿಕೊಂಡ ಸಾಕಷ್ಟು ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮಾತನಾಡಿ, ಅನುಭವ ಮಂಟಪದಲ್ಲಿ ಶರಣರು ಚರ್ಚಿಸುತ್ತಿದ್ದ ವಿಷಯಗಳು ದೈನಂದಿನ ಬದುಕಿನ ಬದಲಾವಣೆಗೆ ಹತ್ತಿರವಾಗಿರುತ್ತದ್ದವು. ಅನುಭಾವ ಎನ್ನುವುದು ಲೌಕಿಕ ಪ್ರಪಂಚದಲ್ಲಿ ಪ್ರಮುಖವಾಗಿದೆ. ಅನುಭಾವದ ಕುರಿತು ವಚನ ಸಾಹಿತ್ಯದಲ್ಲಿ ವಿಶಿಷ್ಟವಾಗಿ ಹೇಳಲಾಗಿದೆ ಎಂದರು.
ಮಾಜಿ ಸಭಾಪತಿ ವೀರಣ್ಣ ಮತ್ತಕಟ್ಟಿ ಮಾತನಾಡಿ, ಧಾರವಾಡ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದೆ. ಅದೇ ರೀತಿ ಇಲ್ಲಿನ ಮುರುಘಾಮಠ ದಾಸೋಹ ಸೇವೆಯಲ್ಲಿ ಮಾದರಿಯಾಗಿದ್ದು, ಇಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧೆನೆ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಆರ್. ಗುಂಜಾಳ, ಸಾವಿತ್ರವ್ವ ಹೊಂಗಲ, ಅಶೋಕ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಪಕ್ಕೀರ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅವರಾದಿ ಫಲಹಾರೇಶ್ವರ ಸಂಸ್ಥಾನಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ, ಸವಣೂರಿನ ಶ್ರೀ ಚನ್ನಬಸವ ಸ್ವಾಮೀಜಿ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮ್ಮನಹಳ್ಳಿ,
ಕಾರ್ಯಮದಲ್ಲಿ ವಿ.ಜಿ. ಮ್ಯೂಜಿಕಲ್ ಶೋಸ್ ನ ವಿನಯ ಜಿ. ಮಠ ಅವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಎಂ.ಎಸ್ ಗಾಣಗೇರ ನಿರೂಪಿಸಿದರು.

Leave a Comment