ಮುರಿದು ಬಿದ್ದ ಎಂಗೇಜ್‌ಮೆಂಟ್ ’ಮುತ್ತೇ” ಮುಳುವಾಯಿತಾ?

ಕನ್ನಡ ಚಿತ್ರರಂಗದ ಮತ್ತೊಂದು ತಾರಾ ಜೋಡಿಯ ವಿವಾಹ ನಿಶ್ಚಿಯಾರ್ಥ ಮುರಿದು ಬಿದ್ದಿದೆ. ’ಕಿರಿಕ್ ಪಾರ್ಟಿ’ ಚಿತ್ರದ ಜೋಡಿಗೆ ’ಮತ್ತು’ ನಿಶ್ಚಿತಾರ್ಥವನ್ನೇ ಮುರಿದುಕೊಳ್ಳುವಂತೆ ಮಾಡಿದೆ.

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಅದಕ್ಕೆ ಕಾರಣ ಒಂದೆಡೆ ರಶ್ಮಿಕಾ ತೆಲುಗಿನಲ್ಲಿ ದಿನೇ ದಿನೇ ಗಳಿಸುತ್ತಿರುವ ಯಶಸ್ಸು ಮತ್ತು ಆ ಒಂದು ’ಮುತ್ತು’ ಎನ್ನಲಾಗಿದೆ.
ಕಳೆದ ವರ್ಷದ ಹಿಂದೆ ಚಿತ್ರರಂಗದ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಸದ್ದಿಲ್ಲದ ತಮ್ಮ ಸಂಬಂಧಕ್ಕೆ ಇತಿಶ್ರೀ ಹಾಡಲು ಮುಂದಾಗಿದೆ. ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಮದುವೆಗಿಂತ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ.
ತೆಲುಗಿನಲ್ಲಿ ವಿಜಯ್ ದೇವರಕೊಂಡ ಅವರ ಜೊತೆ ನಟಿಸಿದ್ದ ’ಗೀತ ಗೋವಿಂದ’ ಚಿತ್ರ ಟಾಲಿವುಡ್‌ನಲ್ಲಿ ಬಾರಿ ಸದ್ದು ಮಾಡಿದೆ. ಜೊತೆಗೆ ಆ ಚಿತ್ರದಲ್ಲಿ ನಟ ವಿಜಯ್ ರಶ್ಮಿಕಾ ಮಂದಣ್ಣ ಅವರಿಗೆ ನೀಡಿದ ಮುತ್ತೇ ಅಪತ್ತು ತಂದಿದೆ.
ತೆಲುಗಿನಲ್ಲಿ ರಶ್ಮಿಕಾ ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಡುವೆ ಅನಗತ್ಯ ಟ್ರೋಲ್‌ಗಳಿಗೆ ಆಹಾರ ಸಿಕ್ಕಂತಾಯಿತು. ಇದರಿಂದ ಸಹಜವಾಗಿ ಬೇಸರಗೊಂಡ ರಶ್ಮಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂನಿಂದ ವಿಮುಖರಾದರು. ಆದಾಗಲೇ ಇವರಿಬ್ಬರ ಮಧ್ಯೆ ಏನೋ ಸಮ್‌ಥಿಂಗ್ ನಡೆದಿರಬಹುದೆಂಬ ಗುಸುಗುಸು ಆರಂಭವಾಗಿತ್ತು.
ಅದು ವಿವಾಹ ನಿಶ್ಚಿತಾರ್ಥ ಮುರಿದುಕೊಳ್ಳುವ ಮೂಲಕ ಇಬ್ಬರು ತಾರಾ ಜೋಡಿಯ ಸಂಬಂಧ ಮುರಿದು ಬಿದ್ದಿದೆ. ನಿಶ್ಚಿತಾರ್ಥ ಮಾಡಿಕೊಂಡು ಸಾಕಷ್ಟು ಸಮಯ ನೀಡಿದ್ದೇ ನಿಶ್ಚಿತಾರ್ಥ ಮುರಿದುಕೊಳ್ಳಲು ಕಾರಣ ಎನ್ನುವ ಮಾತುಗಳು ಗಾಂಧಿನಗರದ ಅಂಗಳದಲ್ಲಿ ಕೇಳಿಬಂದಿದೆ.
ತೆಲುಗು ಚಿತ್ರರಂಗದ ಯಶಸ್ಸು ಮತ್ತು ಒಂದರ ಮೇಲೆ ಒಂದು ಸಿಗುತ್ತಿರುವ ಚಿತ್ರಗಳ ಆಫರ್‌ಗಳು ರಶ್ಮಿಕಾ ಮಂದಣ್ಣ ಅವರಲ್ಲಿ ಮದುವೆಯನ್ನು ಮುಂದೂಡಲು ಕಾರಣ ಎನ್ನುವ ಮಾತುಗಳು ಹರಿದಾಡುತ್ತಿವೆ. ಮದುವೆಯ ವಿಚಾರವಾಗಿ ಎರಡು ಕುಟುಂಬಗಳಲ್ಲಿ ಕಾಣಿಸಿಕೊಂಡ ಮನಸ್ತಾಪ ನಿಶ್ವಿತಾರ್ಥ ಮುರಿದುಕೊಳ್ಳಲು ಕಾರಣವಾಗಿದೆ.
ಮುರಿದು ಬಿದ್ದ ಮದುವೆಯ ನಿಶ್ಚಿತಾರ್ಥಕ್ಕೆ ಮುಲಾಮು ಹಚ್ಚುವ ಕೆಲಸ ನಡೆಯುತ್ತಿದೆ. ಒಡೆದ ಮನಸ್ಸುಗಳು ಮತ್ತೆ ಒಂದುಗೂಡಿಸುವ ಪ್ರಯತ್ನ ಯಶಸ್ವಿಯಾಗುತ್ತಾ ಇಲ್ಲವೆ ಯಶಸ್ಸು ಮತ್ತು ಕೀರ್ತಿ ಇಬ್ಬರ ಮಧ್ಯೆ ಅಡ್ಡ ಬರುತ್ತದೆಯಾ ಸದ್ಯಕ್ಕಿರುವ ಕುತೂಹಲ.
ವಯಸ್ಸಿನಲ್ಲಿ ರಶ್ಮಿಕಾಗಿಂತ ರಕ್ಷಿತ್ ಹದಿಮೂರು ವರ್ಷ ದೊಡ್ಡವರು. ಹಾಗಿದ್ದರೂ ಎರಡೂ ಮನೆಯ ಸಮ್ಮತಿಯ ಮೇರೆಗೆ ಈ ತಾರಾ ಜೋಡಿ ಮದುವೆ ಮಾಡಿಕೊಳ್ಳಲು ಮುಂದಾಗಿತ್ತು.ಅಲ್ಲದೆ ನಿಶ್ಚಿತಾರ್ಥ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನೂ ಮಾಡಿತ್ತು.

ಕನ್ನಡ ಚಿತ್ರರಂಗದ ಮತ್ತೊಂದು ತಾರಾ ಜೋಡಿಯ ಮದುವೆಯ ನಿಶ್ವಿತಾರ್ಥ ಮುರಿದು ಬಿದ್ದಿದೆ. ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಬೇರೆ ಬೇರೆಯಾಗಲು ಆ ಒಂದು ಮುತ್ತು ಎನ್ನಲಾಗಿದೆ. ಆದರೆ ಸದ್ಯಕ್ಕೆ ಈ ಜೋಡಿ ಯಾವುದೇ ವಿಷಯ ಬಹಿರಂಗ ಪಡಿಸಿಲ್ಲ.

Leave a Comment