ಮುನ್ನೂರುಕಾಪು ಸಮಾಜ – ಶಿಕ್ಷಕರು, ಸಿಬ್ಬಂದಿಗೆ ಕಿಟ್

ರಾಯಚೂರು.ಮೇ.23- ಮುನ್ನೂರುಕಾಪು ಸಮಾಜದ ಶಿಕ್ಷಣ ಸಂಸ್ಥೆ ಹಾಗೂ ಕಲ್ಯಾಣ ಮಂಟಪದ ವತಿಯಿಂದ ಅಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮತ್ತು ಕೆಲಸಗಾರರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.
ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಅವರು, ಕೊರೊನಾ ಹಿನ್ನೆಲೆಯಲ್ಲಿ ತೀವ್ರ ತೊಂದರೆಗೆ ಗುರಿಯಾಗಿರುವ ಜನರಿಗೆ ನೆರವು ನೀಡಿದ್ದಾರೆ. ಎ.ಪಾಪಾರೆಡ್ಡಿ ಅವರು ಮಾತನಾಡುತ್ತಾ, ಕೊರೊನಾ ಬಾಧಿತರಿಗೆ ನೆರವು ನೀಡುವ ಪ್ರಯತ್ನದ ಹಿನ್ನೆಲೆಯಲ್ಲಿ ಆಹಾರ ಧಾನ್ಯ ಕಿಟ್ ವಿತರಿಸುವ ಮೂಲಕ ಅಳಿಲು ಸೇವೆ ಮಾಡಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರಾಮಣ್ಣ ಹವಳೆ ಅವರು ಸ್ವಾಗತಿಸಿದರು. ಶಿಕ್ಷಕರ ಪರವಾಗಿ ಉಮಾ ಹಾಗೂ ಅಶ್ವಿನಿ ಅವರು ಸಂಸ್ಥೆಯ ಮುಖ್ಯಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಭೆಯಲ್ಲಿ ಕಲ್ಯಾಣ ಮಂಟಪದ ಕೋಶಾಧಿಕಾರಿ ಪಿ.ನರಸರೆಡ್ಡಿ, ಶಾಲಾ ಕೋಶಾಧ್ಯಕ್ಷರಾದ ಕೆ.ನರಸಿಂಹಲು, ನಗರಸಭೆ ಮಾಜಿ ಸದಸ್ಯರಾದ ಕೆ.ಮಲ್ಲೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment